ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking; ಆಯನೂರು ಮಂಜುನಾಥ್ ಫೇಸ್‌ಬುಕ್ ಹ್ಯಾಕ್, ಹಣಕ್ಕೆ ಬೇಡಿಕೆ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ನವೆಂಬರ್ 22; ಬಿಜೆಪಿ ಶಾಸಕರೊಬ್ಬರ ಹೆಸರಿನಲ್ಲಿರುವ ಫೇಸ್ ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಖಾತೆಯಲ್ಲಿ ಸ್ನೇಹಿತರಾಗಿರುವವರಿಗೆ ಮೆಸೇಜುಗಳನ್ನು ಕಳುಹಿಸಿ ಹಣಕ್ಕೆ ಬೇಡಿಕೆ ಇಡಲಾಗಿದೆ.

ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೆಸರಿನಲ್ಲಿರುವ ಫೇಸ್ ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಫೇಸ್ ಬುಕ್‌ನಲ್ಲಿ ಸ್ನೇಹಿತರಾಗಿರುವವರಿಗೆ ಸಂದೇಶ ಕಳುಹಿಸಲಾಗುತ್ತಿದೆ.

 ಫೇಸ್‌ಬುಕ್‌ನಲ್ಲಿ ಫೇಸ್ ರೆಕಗ್ನಿಷನ್ ಸ್ಥಗಿತ, ಕೋಟ್ಯಾಂತರ ಮಂದಿಯ ಡೇಟಾ ಡಿಲೀಟ್‌ ಫೇಸ್‌ಬುಕ್‌ನಲ್ಲಿ ಫೇಸ್ ರೆಕಗ್ನಿಷನ್ ಸ್ಥಗಿತ, ಕೋಟ್ಯಾಂತರ ಮಂದಿಯ ಡೇಟಾ ಡಿಲೀಟ್‌

ಫೇಸ್ ಬುಕ್ ಸ್ನೇಹಿತರಿಗೆ ಮೆಸೇಜ್ ಮಾಡಿರುವ ಹ್ಯಾಕರ್‌ಗಳು, ತಾವು ಸಮಸ್ಯೆಯಲ್ಲಿದ್ದು ತುರ್ತಾಗಿ ಹಣ ಕಳುಹಿಸುವಂತೆ ಮನವಿ ಮಾಡಿದ್ದಾರೆ. ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ಹಣ ವರ್ಗಾಯಿಸುವಂತೆ ಮನವಿ ಮಾಡಿದ್ದಾರೆ. 15 ಸಾವಿರ ರೂ. ತುರ್ತಾಗಿ ಬೇಕಿದೆ ಎಂದು ಸಂದೇಶದಲ್ಲಿ ಹೇಳುತ್ತಿದ್ದಾರೆ.

ನೊಂದ ಮಹಿಳೆಯಿಂದ ಪೊಲೀಸ್ ಸ್ಟೇಷನ್ ನಿಂದಲೇ ಫೇಸ್ ಬುಕ್ ಲೈವ್ !ನೊಂದ ಮಹಿಳೆಯಿಂದ ಪೊಲೀಸ್ ಸ್ಟೇಷನ್ ನಿಂದಲೇ ಫೇಸ್ ಬುಕ್ ಲೈವ್ !

 BJP Leader Ayanur Manjunath Facebook Account Hacked

ಮೋಸ ಹೋಗಬೇಡಿ; ತಮ್ಮ ಖಾತೆ ಹ್ಯಾಕ್ ಆದ ಮಾಹಿತಿ ತಿಳಿಯುತ್ತಿದ್ದಂತೆ ಶಾಸಕ ಆಯನೂರು ಮಂಜುನಾಥ್ ಆಪ್ತ ಕಾರ್ಯದರ್ಶಿ ಮುನ್ನೆಚ್ಚರಿಕೆ ವಹಿಸುವಂತೆ ಜನರಿಗೆ ಮನವಿ ಮಾಡಿದ್ದಾರೆ.

ಸಚಿವ, ಶಾಸಕರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ವಂಚನೆಗೆ ಯತ್ನ! ಸಚಿವ, ಶಾಸಕರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ವಂಚನೆಗೆ ಯತ್ನ!

"ಶ್ರೀಯುತ ಆಯನೂರು ಮಂಜುನಾಥ್ ರವರ ಫೇಸ್‌ಬುಕ್‌ ಅಕೌಂಟ್ ಹ್ಯಾಕ್ ಮಾಡಿರುತ್ತಾರೆ. ಹಾಗಾಗಿ ಯಾವುದೇ ರೀತಿಯಲ್ಲಿ ಈ ಫೇಸ್‌ಬುಕ್‌ ಮೆಸೇಜ್ ಗೆ ಯಾರೂ ಸ್ಪಂದಿಸಬಾರದಾಗಿ ಕೋರಿದೆ" ಎಂದು ಸಂದೇಶ ರವಾನಿಸಿದ್ದಾರೆ.

ಹಲವರ ಖಾತೆ ಹ್ಯಾಕ್; ರಾಜಕೀಯ ನಾಯಕರ, ಐಪಿಎಸ್/ ಐಎಎಸ್ ಅಧಿಕಾರಿಗಳ ಫೇಸ್‌ಬುಕ್ ಖಾತೆ ಹ್ಯಾಕ್ ಮಾಡಿ ಹಣಕ್ಕಾಗಿ ಬೇಡಿಕೆ ಇಡುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ.

ನವೆಂಬರ್ 4ರಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಟ್ವೀಟ್ ಖಾತೆ ಹ್ಯಾಕ್ ಆಗಿತ್ತು. ಸಚಿವರು ಆತ್ಮೀಯರೇ, ನನ್ನ ಅಧಿಕೃತ ಟ್ವಿಟರ್ ಖಾತೆಯು ಹ್ಯಾಕ್ ಆಗಿದ್ದು ಈಗಾಗಲೇ ಪರಿಶೀಲನೆಗೆ ಮನವಿ ಮಾಡಲಾಗಿದೆ. ನಾನು ಅಧಿಕೃತವಾಗಿ ಘೋಷಿಸುವವರೆಗೂ ಟ್ವಿಟರ್ ಮೂಲಕ ಬರುವ ಯಾವುದೇ ಸಂದೇಶಗಳನ್ನು ಪರಿಗಣಿಸಬಾರದೆಂದು ಮನವಿ ಮಾಡುತ್ತೇನೆ ಎಂದು ಸಂದೇಶ ಹಾಕಿದ್ದರು.

English summary
BJP leader and MLC Ayanur Manjunath face book account has been hacked and demand for money.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X