ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭದ್ರಾವತಿ ಲಕ್ಷ್ಮೀ ನರಸಿಂಹ ದೇಗುಲದಲ್ಲಿ ವೈಕುಂಠ ಏಕಾದಶಿ ವಿಶೇಷ ಅಲಂಕಾರ ಇಲ್ಲ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಡಿಸೆಂಬರ್ 24: ಡಿ.25ರ ಶುಕ್ರವಾರ ವೈಕುಂಠ ಏಕಾದಶಿ ನಡೆಯಲಿದ್ದು, ಪ್ರತಿವರ್ಷದಂತೆ ಈ ಬಾರಿ ಭದ್ರಾವತಿಯ ಹಳೇನಗರದ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯದಲ್ಲಿ ವೈಕುಂಠ ದರ್ಶನದ ವಿಶೇಷ ಅಲಂಕಾರ ಇರುವುದಿಲ್ಲ ಎಂದು ದೇವಾಲಯದ ಆಡಳಿತಾಧಿಕಾರಿಯೂ ಆಗಿರುವ ತಹಶೀಲ್ದಾರ ಅವರು ತಿಳಿಸಿದ್ದಾರೆ.

ಈ ಕುರಿತಂತೆ ಆದೇಶ ಹೊರಡಿಸಿರುವ ಭದ್ರಾವತಿ ತಹಶೀಲ್ದಾರ, ಡಿ.25 ರಿಂದ 26 ರವರೆಗೂ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯದಲ್ಲಿ ನಡೆಯಲಿರುವ ವೈಕುಂಠ ಏಕಾದಶಿ ಕಾರ್ಯಕ್ರಮವನ್ನು ಪ್ರಸ್ತುತ ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ಕಾರಣ, ರಾಜ್ಯ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.

ಶಿವಮೊಗ್ಗ ಜೈಲಿನಲ್ಲಿ ಖೈದಿಗಳ ಮಾರಾಮಾರಿ; ಒಬ್ಬನ ಸ್ಥಿತಿ ಗಂಭೀರಶಿವಮೊಗ್ಗ ಜೈಲಿನಲ್ಲಿ ಖೈದಿಗಳ ಮಾರಾಮಾರಿ; ಒಬ್ಬನ ಸ್ಥಿತಿ ಗಂಭೀರ

ಪ್ರತಿ ವರ್ಷದಂತೆ ಈ ಬಾರಿ ವಿಶೇಷ ಅಲಂಕಾರ ಇರುವುದಿಲ್ಲ ಬದಲಾಗಿ, ದೇವಾಲಯದ ಸಂಪ್ರದಾಯಕ್ಕೆ ಧಕ್ಕೆ ಬಾರದಂತೆ ಕ್ರಮ ಕೈಗೊಳ್ಳುವ ಸಲುವಾಗಿ ಸಾಂಕೇತಿಕವಾಗಿ ಹೋಮ, ಪ್ರಾಯಶ್ಚಿತ್ತಾದಿಗಳನ್ನು ನಡೆಸಲಿದ್ದು, ಉತ್ಸವವೂ ಸಹ ದೇವಾಲಯದ ಒಳಪ್ರಾಕಾರದಲ್ಲಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

Bhadravati: There Is No Special Decoration Of Vaikuntha Ekadashi In The Lakshmi Narasimha Temple

ಇನ್ನು, ಸರಳವಾಗಿ ನಡೆಯುವ ವೈಕುಂಠ ಏಕಾದಶಿ ಕಾರ್ಯಕ್ರಮದ ವೇಳೆ ಯಾವುದೇ ವಿಶೇಷ ಪೂಜೆ, ಸೇವೆಗಳಿಗೆ ಅವಕಾಶವಿರುವುದಿಲ್ಲ. ಅಲ್ಲದೇ ತೀರ್ಥ, ಪ್ರಸಾದ ವಿತರಣೆಯೂ ಸಹ ಇರುವುದಿಲ್ಲ.

ಸೀಮಿತ ಭಕ್ತರಿಗೆ ಮಾತ್ರ ಅವಕಾಶವಿದ್ದು, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಿರುತ್ತದೆ ಎಂದು ಭದ್ರಾವತಿ ತಹಶೀಲ್ದಾರ ಪ್ರಕಟಣೆ ಹೊರಡಿಸಿದ್ದಾರೆ.

English summary
Bhadravati Tahasildar, who is also the administrator of the temple, said that the Lakshmi Narasimha Temple has no special decoration of Vaikuntha darshan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X