• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾನು ರಾಜಕೀಯಕ್ಕೆ ಬರಲ್ಲ: ಶಿವರಾಜ್ ಕುಮಾರ್

By Mahesh
|

ಶಿವಮೊಗ್ಗ, ಮಾ.30: ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಜನರು ತೋರಿಸುತ್ತಿರುವ ಪ್ರೀತಿ, ಆದರ ಕಂಡು ನನ್ನ ಹೃದಯ ತುಂಬಿ ಬಂದಿದೆ. ಜನರ ನಿರೀಕ್ಷೆಗಳನ್ನು ನಾನು ಸುಳ್ಳು ಮಾಡುವುದಿಲ್ಲ ಎಂದು ಶಿವಮೊಗ್ಗದ ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರು ಹೇಳಿದ್ದಾರೆ. ಈ ನಡುವೆ ಪತ್ನಿ ಪರ ಪ್ರಚಾರ ಕಾರ್ಯನಿರತ ಶಿವರಾಜ್ ಅವರು ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಕೂಡಾ ಮಾತುಗಳನ್ನಾಡಿದ್ದಾರೆ.

ಗೀತಾ ಶಿವರಾಜ್ ಕುಮಾರ್ ಅವರು ಮೊದಲ ಹಂತದ ಚುನಾವಣಾ ಪ್ರಚಾರವನ್ನು ಮುಗಿಸಿದ್ದಾರೆ. ಶಿವಮೊಗ್ಗ, ಶಿಕಾರಿಪುರ, ಸಾಗರ ತಾಲೂಕುಗಳಲ್ಲಿ ಸಂಚರಿಸಿ ಜನರ ಪ್ರೀತಿ ಗಳಿಸಿದ್ದಾರೆ. ನಮ್ಮ ತಂದೆ ಬಂಗಾರಪ್ಪ ಅವರು ಬಡವರಿಗಾಗಿ ಘೋಷಿಸಿದ ಹಲವು ಯೋಜನೆಗಳನ್ನು ನಾನು ಮತ್ತೆ ಜಾರಿಗೆ ತರಲು ಯತ್ನಿಸುತ್ತೇನೆ. ಅಪ್ಪನ ಶ್ರೀರಕ್ಷೆ, ಜನರ ಆಶೀರ್ವಾದ ನನ್ನ ಮೇಲಿದೆ ಎಂದು ಗೀತಾ ಅವರು ಹೇಳಿದರು.

ಎರಡನೇ ಹಂತದ ಪ್ರಚಾರ ಕಾರ್ಯ ಭಾನುವಾರ ಆರಂಭಗೊಂಡಿದ್ದು ಭದ್ರಾವತಿ ತಾಲೂಕು ಸಿದ್ದಿಪುರದಲ್ಲಿ ಪತ್ನಿ ಪರ ಶಿವರಾಜ್ ಪ್ರಚಾರ ನಡೆಸಿದ್ದಾರೆ. ಜತೆಗೆ ನಟ ನೆನಪಿರಲಿ ಪ್ರೇಮ್ ಸಾಥ್ ನೀಡಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ರಾಜಕೀಯಕ್ಕೆ ಬರಲ್ಲ: ಯಾವುದೇ ಕಾರಣಕ್ಕೂ ತಾವು ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸಂಬಂಧಿ ಕುಮಾರ್ ಬಂಗಾರಪ್ಪ ಹೇಳಿಕೆಗೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು. ತಾವು ನಟಿಸಿರುವ ಚಲನಚಿತ್ರ, ಚಿತ್ರಗೀತೆಗಳ ಪ್ರಸಾರಕ್ಕೆ ನಿಷೇಧ ಹೇರುವಂತೆ ಚುನಾವಣಾ ಆಯೋಗಕ್ಕೆ ಕೆಲವರು ಮನವಿ ಮಾಡಿರುವ ಕುರಿತಂತೆ ತಮಗೆ ಯಾವುದೇ ಮಾಹಿತಿಯಿಲ್ಲ. ಈ ಕುರಿತಂತೆ ತಮಗೇನೂ ಗೊತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಶೂಟಿಂಗ್ ‌ನಲ್ಲಿರುವ ವೇಳೆಯೇ ಮೊಬೈಲ್ ಮೂಲಕ ಪತ್ನಿ (ಗೀತಾ) ಭಾಗ ವಹಿಸುತ್ತಿದ್ದ ಸಭೆ - ಸಮಾರಂಭಗಳ ಭಾಷಣ ಕೇಳುತ್ತಿದ್ದೆ. ಚೆನ್ನಾಗಿ ಮಾತನಾಡುತ್ತಾಳೆ. ಬಂಗಾರಪ್ಪ ಮಗಳು ಎಂಬುದನ್ನು ಸಾಬೀತುಪಡಿಸಿದ್ದಾಳೆ ಎಂದು ಚಿತ್ರನಟ ಶಿವರಾಜ್ ‌ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗೀತಾಗೆ ಮಹಿಳಾ ವರ್ಗದಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಇದು ತಮ್ಮ ಆತ್ಮವಿಶ್ವಾಸ ವೃದ್ಧಿಸುವಂತೆ ಮಾಡಿದೆ. ಜನತೆ ಬದಲಾವಣೆ ಬಯಸಿದ್ದಾರೆ. ಗೀತಾ ಗೆಲುವು ನಿಶ್ಚಿತ. ಶೂಟಿಂಗ್ ಕಾರ್ಯ ಮುಕ್ತಾಯವಾದ ಹಿನ್ನೆಲೆಯಲ್ಲಿ ಪತ್ನಿಯ ಪರವಾಗಿ ಪ್ರಚಾರಕ್ಕೆ ಆಗಮಿಸಿದ್ದೇನೆ. ಮೂರು ದಿನಗಳ ಕಾಲ ಜಿಲ್ಲೆಯಾದ್ಯಂತ ಪತ್ನಿಯ ಪರ ಪ್ರಚಾರ ಕಾರ್ಯ ನಡೆಸುತ್ತೇನೆ.ಮುಂದಿನ ದಿನಗಳಲ್ಲಿ ಹಲವು ಚಿತ್ರ ನಟ, ನಟಿಯರು ಪ್ರಚಾರದಲ್ಲಿ ಭಾಗವಹಿಸುವುದಾಗಿ ತಮಗೆ ಹೇಳಿದ್ದಾರೆ ಎಂದರು.

ಪುನೀತ್ ರಾಜ್ ‌ಕುಮಾರ್ ಶೂಟಿಂಗ್ ‌ನಲ್ಲಿ ಬ್ಯುಸಿಯಾಗಿದ್ದಾರೆ. ಪ್ರಚಾರಕ್ಕೆ ಬರುವುದು, ಬಿಡುವುದು ಆತನಿಗೆ ಬಿಟ್ಟ ವಿಚಾರವಾಗಿದೆ. ಪ್ರಚಾರಕ್ಕೆ ಬರುವಂತೆ ತಾವು ಯಾವುದೇ ಮನವಿ ಮಾಡಲು ಹೋಗುವುದಿಲ್ಲ. ನಾವು ಚೆನ್ನಾಗಿದ್ದೇವೆ. ಈ ಕುರಿತಂತೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ' ಎಂದು ತಿಳಿಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Geetha Shivarajkumar, JD(S) candidate from Shimoga Lok Sabha constituency, said she was happy with the turnout for her election campaign meetings. Shivarajkumar said give his wife a chance to prove. Artistes from the Kannada film industry will also help out in campaigning,” he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more