ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭದ್ರಾವತಿ ನಗರಸಭೆ ಉಪ ಚುನಾವಣೆ: ಜೆಡಿಎಸ್‌ಗೆ ಭರ್ಜರಿ ಗೆಲುವು

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಸೆಪ್ಟೆಂಬರ್ 6: ತೀವ್ರ ಕುತೂಹಲ ಕೆರಳಿಸಿದ್ದ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರಸಭೆ 29ನೇ ವಾರ್ಡ್ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ವಿಜಯಲಕ್ಷ್ಮಿ ಒಲಿದಿದ್ದಾಳೆ. ಜೆಡಿಎಸ್ ಅಭ್ಯರ್ಥಿ ನಾಗರತ್ನ ಭರ್ಜರಿ ಗೆಲುವು ದಾಖಲಿಸಿದ್ದಾರೆ.

ಯಾರಿಗೆಷ್ಟು ಮತ ಲಭಿಸಿದೆ?
ಭದ್ರಾವತಿ ನಗರಸಭೆಯ 29ನೇ ವಾರ್ಡ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ನಾಗರತ್ನ 1282 ಮತಗಳನ್ನು ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಲೋಹಿತಾ ನಂಜಪ್ಪ 832 ಮತಗಳು, ಬಿಜೆಪಿ ಪಕ್ಷದ ಅಭ್ಯರ್ಥಿ ರಮಾ ವೆಂಕಟೇಶ್ 70 ಮತಗಳನ್ನು ಪಡೆದುಕೊಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ 450 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಮೈಸೂರು ಪಾಲಿಕೆ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು, ಜೆಡಿಎಸ್ ಮುಖಭಂಗಮೈಸೂರು ಪಾಲಿಕೆ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು, ಜೆಡಿಎಸ್ ಮುಖಭಂಗ

ಯಾವ್ಯಾವ ಬೂತ್‌ನಲ್ಲಿ ಯಾರಿಗೆಷ್ಟು ಮತ?
29ನೇ ವಾರ್ಡ್‌ನಲ್ಲಿ ನಾಲ್ಕು ಬೂತ್‌ಗಳಿದ್ದವು. ಬೂತ್ ನಂಬರ್ 111ರಲ್ಲಿ ಜೆಡಿಎಸ್ 243, ಕಾಂಗ್ರೆಸ್ 143, ಬಿಜೆಪಿ 15 ಮತ ಪಡೆದಿದೆ. ಇಲ್ಲಿ ಒಟ್ಟು 402 ಮತಗಳು ಚಲಾವಣೆಯಾಗಿತ್ತು.

Bhadravati City Municipal Corporation 29th Ward By-election: JDS Candidate Nagaratna Wins

ಇನ್ನು ಬೂತ್ 112ರಲ್ಲಿ 420 ಮತ ಚಲಾವಣೆಯಾಗಿತ್ತು. ಈ ಪೈಕಿ ಜೆಡಿಎಸ್ 211, ಕಾಂಗ್ರೆಸ್ 195, ಬಿಜೆಪಿ 10 ಮತ ಪಡೆದಿವೆ. ಬೂತ್ 113ರಲ್ಲಿ 737 ಮತಗಳು ಚಲಾವಣೆಯಾಗಿದ್ದು, ಜೆಡಿಎಸ್ 485, ಕಾಂಗ್ರೆಸ್ 237, ಬಿಜೆಪಿ 12 ಮತಗಳು ಪಡೆದಿವೆ. ಬೂತ್ 114ರಲ್ಲಿ 641 ಮತಗಳು ಚಲಾವಣೆಯಾಗಿದ್ದವು. ಜೆಡಿಎಸ್ 343 ಕಾಂಗ್ರೆಸ್ 257, ಬಿಜೆಪಿ 33 ಮತ ಗಳಿಸಿದೆ.

16 ನೋಟಾ ಓಟ್
ಜಿದ್ದಾಜಿದ್ದಿನ ಕಣದಲ್ಲಿ ನೋಟಾ ಓಟುಗಳು ಕೂಡ ಚಲಾವಣೆಯಾಗಿದೆ. 16 ಮಂದಿ ನೋಟಾ ಮತಗಳನ್ನು ಚಲಾಯಿಸಿದ್ದಾರೆ. ಬೂತ್ ನಂಬರ್ 111ರಲ್ಲಿ 1, 112ರಲ್ಲಿ 4, 113ರಲ್ಲಿ 3, 114ರಲ್ಲಿ 8 ನೋಟಾ ಮತಗಳು ಚಲಾವಣೆಯಾಗಿದೆ.

Bhadravati City Municipal Corporation 29th Ward By-election: JDS Candidate Nagaratna Wins

ಪ್ರಾಬಲ್ಯ ಮೆರೆದ ಜೆಡಿಎಸ್
29ನೇ ವಾರ್ಡ್‌ನಲ್ಲಿ ಹಿಂದಿನಿಂದಲೂ ಜೆಡಿಎಸ್ ಪ್ರಾಬಲ್ಯವಿದೆ. ಈ ಚುನಾವಣೆಯ ಫಲಿತಾಂಶ ಇದನ್ನು ಪುನಃ ಸಾಬೀತುಪಡಿಸಿದೆ. ಈ ಹಿಂದೆ ಜೆಡಿಎಸ್ ಪಕ್ಷದ ಅನಿಲ್ ಕುಮಾರ್ ಈ ವಾರ್ಡ್‌ನಿಂದ ಗದ್ದಿದ್ದರು. ಮೀಸಲಾತಿ ಬದಲಾದ ಹಿನ್ನೆಲೆ ಪತ್ನಿ ನಾಗರತ್ನರನ್ನು ಕಣಕ್ಕಿಳಿಸಿದ್ದರು. ಈ ಬಾರಿಯೂ ಜನರು ಜೆಡಿಎಸ್ ಪರವಾಗಿ ಒಲವು ತೋರಿಸಿದ್ದಾರೆ.

ಜೆಡಿಎಸ್ ಪಾಳಯದಲ್ಲಿ ಸಂಭ್ರಮ
ತಮ್ಮ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸುತ್ತಿದ್ದಂತೆ ಜೆಡಿಎಸ್ ಪಾಳಯದಲ್ಲಿ ಸಂಭ್ರಮಾಚರಣೆ ಆರಂಭವಾಗಿದೆ. ಜೆಡಿಎಸ್ ಕಾರ್ಯಕರ್ತರು ಪಕ್ಷದ ಪರವಾಗಿ, ಪಕ್ಷದ ಮುಖಂಡರ ಪರವಾಗಿ ಘೋಷಣೆಗಳನ್ನು ಕೂಗಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ.

Bhadravati City Municipal Corporation 29th Ward By-election: JDS Candidate Nagaratna Wins

ನಗರಸಭೆಯಲ್ಲಿ ಬಲಾಬಲ ಹೇಗಿದೆ?
ಜೆಡಿಎಸ್ ಅಭ್ಯರ್ಥಿ ಗೆಲುವಿನಿಂದಾಗಿ ಭದ್ರಾವತಿ ನಗರಸಭೆಯಲ್ಲಿ ಜೆಡಿಎಸ್ ಹುಮ್ಮಸ್ಸು ಹೆಚ್ಚಾಗಿದೆ. 35 ವಾರ್ಡುಗಳ ಪೈಕಿ ಕಾಂಗ್ರೆಸ್ 18, ಜೆಡಿಎಸ್ 12, ಬಿಜೆಪಿ 4, ಪಕ್ಷೇತರ ಒಬ್ಬ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

English summary
JDS candidate Nagaratna wins in Bhadravati City Municipal Corporation 29th Ward By-election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X