ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

7 ದಿನದಲ್ಲಿ ಭದ್ರಾನದಿ ಸೇತುವೆ ಸ್ಟೀಲ್ ಗ್ರೀಡರ್ ಬದಲಾಯಿಸಿದ ರೈಲ್ವೇ

|
Google Oneindia Kannada News

ಶಿವಮೊಗ್ಗ, ನವೆಂಬರ್ 29 : ನೈಋತ್ಯ ರೈಲ್ವೆ ಭದ್ರಾವತಿಯಲ್ಲಿ ಭದ್ರಾನದಿಯ ಸೇತುವೆಗೆ ಸ್ಟೀಲ್ ಗ್ರೀಡರ್ ಅಳವಡಿಕೆ ಕಾರ್ಯವನ್ನು 7 ದಿನದಲ್ಲಿ ಪೂರೈಸಿ ದಾಖಲೆ ಮಾಡಿದೆ. 1926ರಲ್ಲಿ ನಿರ್ಮಾಣಗೊಂಡ ಸೇತುವೆ ಇದಾಗಿದೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ರೈಲ್ವೆ ನಿಲ್ದಾಣದ ಸಮೀಪ ಸ್ವಾತಂತ್ರ ಪೂರ್ವದಲ್ಲಿ ಅಂದರೆ 1926ರಲ್ಲಿ ಭದ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲಾಗಿತ್ತು. ಆಗ ಸೇತುವೆಗೆ ಎಂಜಿ ಗ್ರೀಡರ್‌ಗಳನ್ನು ಹಾಕಲಾಗಿತ್ತು.

ನೈಋತ್ಯ ರೈಲ್ವೆ : ಹಲವು ರೈಲುಗಳ ವೇಳಾಪಟ್ಟಿ ಬದಲುನೈಋತ್ಯ ರೈಲ್ವೆ : ಹಲವು ರೈಲುಗಳ ವೇಳಾಪಟ್ಟಿ ಬದಲು

1996ರಲ್ಲಿ ಹಳೆಯದ್ದನ್ನು ಬದಲಾವಣೆ ಮಾಡಿ, ಗೇಜ್ ಪರಿವರ್ತನೆ ಮಾಡಲಾಗಿತ್ತು. ಈಗ ಮತ್ತೊಮ್ಮೆ ಬದಲಾವಣೆ ಮಾಡಲಾಗಿದ್ದು ಸಾರ್ವಜನಿಕರಿಗೆ ತೊಂದರೆ ಆಗದಂತೆ 7 ದಿನದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ.

Bhadra river bridge girder replaced in 7 days

ನವೆಂಬರ್ 17ರಂದು ಇಲಾಖೆಯ 70 ಸಿಬ್ಬಂದಿಗಳು ಸ್ಟೀಲ್ ಗ್ರೀಡರ್ ಅವಳಡಿಕೆ ಕಾರ್ಯವನ್ನು ಆರಂಭಿಸಿದ್ದರು. ನವೆಂಬರ್ 23ರಂದು ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ.

ಬೆಂಗಳೂರು-ಮೈಸೂರು ನಡುವೆ ರಾತ್ರಿ ರೈಲು ಸಂಚಾರಕ್ಕೆ ಬೇಡಿಕೆಬೆಂಗಳೂರು-ಮೈಸೂರು ನಡುವೆ ರಾತ್ರಿ ರೈಲು ಸಂಚಾರಕ್ಕೆ ಬೇಡಿಕೆ

ಭದ್ರಾನದಿಯಲ್ಲಿ ಕಡಿಮೆ ನೀರಿನ ಹರಿವು ಇತ್ತು. ಇದನ್ನು ಸದುಪಯೋಗ ಪಡಿಸಿಕೊಂಡ ಸಿಬ್ಬಂದಿಗಳುಸ ಬೃಹತ್ ಕ್ರೇನ್‌ಗಳ ಸಹಾಯದಿಂದ ಗ್ರೀಡರ್‌ಗಳನ್ನು ಬದಲಾವಣೆ ಮಾಡಿದ್ದಾರೆ.

Bhadra river bridge girder replaced in 7 days

ಈ ಮುಂಚೆ ಆಳವಡಿಸಲಾಗಿದ್ದ ಬ್ರಾಡ್‌ಗೇಜ್‌ ಅನ್ನು ಬದಲಿಸಿ ಹೊಸದನ್ನು ಹಾಕಲಾಗಿದೆ. ಗೂಡ್ಸ್‌ ರೈಲುಗಳು ಪ್ರತಿ ಗಂಟೆಗೆ 50 ಕಿ.ಮೀ. ವೇಗದೊಳಗೆ ಚಲಿಸುವಂತೆ ನಿರ್ಬಂಧ ಹೇರಲಾಗಿದೆ.

English summary
South Western Railway has completed the replacement of existing old meter gauge re braced girder with metalized welded steel girder which will suit for 25 Tones Axle loading across the river Bhadra near Bhadravati Station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X