ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ-ಬೆಂಗಳೂರು ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ

|
Google Oneindia Kannada News

ಶಿವಮೊಗ್ಗ, ನವೆಂಬರ್ 22 : ನೈಋತ್ಯ ರೈಲ್ವೆ ಶಿವಮೊಗ್ಗ-ಬೆಂಗಳೂರು ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಶಿವಮೊಗ್ಗ-ಯಶವಂತಪುರ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲನ್ನು ವಾರದ ಎಲ್ಲಾ ದಿನಗಳಿಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

ನವೆಂಬರ್ 22ರಿಂದ ಅನ್ವಯವಾಗುವಂತೆ ಶಿವಮೊಗ್ಗ-ಯಶವಂತಪುರ ರೈಲು ವಾರದ ಎಲ್ಲಾ ದಿನಗಳು ಸಹ ಸಂಚಾರ ನಡೆಸಲಿದೆ ಎಂದು ಆದೇಶ ಹೊರಡಿಸಲಾಗಿದೆ. ಇದುವರೆಗೂ ಮಂಗಳವಾರ ಮಾತ್ರ ರೈಲು ಸಂಚಾರ ನಡೆಸುತ್ತಿರಲಿಲ್ಲ.

ಹೇಗಿರಲಿದೆ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗ?ಹೇಗಿರಲಿದೆ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗ?

ವಾರದ ಎಲ್ಲಾ ದಿನಗಳಿಗೆ ರೈಲು ಸೇವೆ ವಿಸ್ತರಣೆ ಮಾಡಿರುವುದರಿಂದ ನೂರಾರು ಪ್ರಯಾಣಿಕರಿಗೆ ಸಹಾಯಕವಾಗಿದೆ. ಶಿವಮೊಗ್ಗ-ಯಶವಂತಪುರ ರೈಲು 4 ಗಂಟೆ 20 ನಿಮಿಷದಲ್ಲಿ ಸಂಚಾರ ನಡೆಸುತ್ತದೆ. ಈಗಾಗಲೇ ಈ ರೈಲು ಸೇವೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಶಿವಮೊಗ್ಗದಿಂದ 3 ಹೊಸ ರೈಲು; ವೇಳಾಪಟ್ಟಿ, ನಿಲ್ದಾಣಶಿವಮೊಗ್ಗದಿಂದ 3 ಹೊಸ ರೈಲು; ವೇಳಾಪಟ್ಟಿ, ನಿಲ್ದಾಣ

train

ವೇಳಾಪಟ್ಟಿ : ಜನಶತಾಬ್ದಿ ರೈಲು ಪ್ರತಿದಿನ ಬೆಳಗ್ಗೆ 5.30ಕ್ಕೆ ಶಿವಮೊಗ್ಗದಿಂದ ಹೊರಡಲಿದೆ. 9.50ಕ್ಕೆ ಬೆಂಗಳೂರಿನ ಯಶವಂತಪುರ ತಲುಪಲಿದೆ. ಸಂಜೆ 5.30ಕ್ಕೆ ಯಶವಂತಪುರಿಂದ ಹೊರಟು 9.50ಕ್ಕೆ ಶಿವಮೊಗ್ಗವನ್ನು ತಲುಪಲಿದೆ.

ಶಿವಮೊಗ್ಗ-ಬೆಂಗಳೂರು ಶತಾಬ್ದಿ ರೈಲು ಸಮಯ ಪರಿಷ್ಕರಣೆಶಿವಮೊಗ್ಗ-ಬೆಂಗಳೂರು ಶತಾಬ್ದಿ ರೈಲು ಸಮಯ ಪರಿಷ್ಕರಣೆ

ಜನಶತಾಬ್ದಿ ರೈಲು ಶಿವಮೊಗ್ಗ-ಯಶವಂತಪುರ ನಡುವೆ ಸಂಚಾರ ನಡೆಸಲು ಮೊದಲು 4 ಗಂಟೆ 50 ನಿಮಿಷ ತೆಗೆದುಕೊಳ್ಳುತ್ತಿತ್ತು. ಅಕ್ಟೋಬರ್‌ನಲ್ಲಿ ಸಮಯವನ್ನು ಪರಿಷ್ಕರಣೆ ಮಾಡಲಾಗಿತ್ತು. ಈ ವಾರದ ಎಲ್ಲಾ ದಿನಗಳಿಗೆ ವಿಸ್ತರಣೆ ಮಾಡಲಾಗಿದೆ.

English summary
South western railway announced that Bengaluru-Shivamogga Jan Shatabdi train will run all day in a week from November 22, 2019. Train will run between Yeshwanthpur and Shivamogga City.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X