ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಡಿಯೂರಪ್ಪ ಹಸಿರು ಶಾಲು ಹಾಕಲು ಬಿಡೋಲ್ಲ : ಬೇಳೂರು

|
Google Oneindia Kannada News

ಶಿವಮೊಗ್ಗ, ಡಿಸೆಂಬರ್ 03 : 'ಬಿ.ಎಸ್ ಯಡಿಯೂರಪ್ಪ ಅವರು ರೈತರ ಪ್ರತೀಕವಾಗಿರುವ ಹಸಿರು ಶಾಲು ಹಾಕಲು ನಾವು ಬಿಡುವುದಿಲ್ಲ' ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

ಯಡಿಯೂರಪ್ಪ ಅವರು ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವುದನ್ನು ಸಾಗರ ಕ್ಷೇತ್ರದ ಮಾಜಿ ಶಾಸಕ, ಕಾಂಗ್ರೆಸ್‌ ನಾಯಕ ಬೇಳೂರು ಗೋಪಾಲಕೃಷ್ಣ ಮುಂದುವರೆಸಿದ್ದಾರೆ. ಶಿವಮೊಗ್ಗದಲ್ಲಿ ಸೋಮವಾರ ಮಾತನಾಡಿದ ಅವರು, 'ರೈತನಾಯಕ ಎಂದು ಹೇಳುವ ಯಡಿಯೂರಪ್ಪ ಅವರಿಗೆ ರೈತರ ಬಗ್ಗೆ ಮಾತನಾಡಲು ಯೋಗ್ಯತೆ ಇಲ್ಲ' ಎಂದರು.

ಯಡಿಯೂರಪ್ಪ ಮಾಟ, ಮಂತ್ರದಿಂದ ಸರ್ಕಾರ ಬೀಳಿಸಲು ಸಾಧ್ಯವಿಲ್ಲ: ಬೇಳೂರು ಗೋಪಾಲಕೃಷ್ಣಯಡಿಯೂರಪ್ಪ ಮಾಟ, ಮಂತ್ರದಿಂದ ಸರ್ಕಾರ ಬೀಳಿಸಲು ಸಾಧ್ಯವಿಲ್ಲ: ಬೇಳೂರು ಗೋಪಾಲಕೃಷ್ಣ

'ಯಡಿಯೂರಪ್ಪ ಅವರಿಗೆ ಹಸಿರು ಶಾಲು ಹಾಕಿಕೊಳ್ಳಲು ಬಿಡಬಾರದು. ಸುಳ್ಳು ಹೇಳುವುದರಲ್ಲಿ ಅಪ್ಪ-ಮಕ್ಕಳು ಸದಾ ಮುಂದು. ತಾಕತ್ ಇದ್ದರೆ ನನ್ನ ಮುಂದೆ ಯಡಿಯೂರಪ್ಪ ಬರಲಿ, ಅವರ ಬಂಡವಾಳ ನನ್ನ ಬಳಿ ಇದೆ. ನನ್ನ ಮುಂದೆಯೇ ಐನೂರಕ್ಕೂ ಹೆಚ್ಚು ಜನರಿಗೆ ಎಂಎಲ್ಸಿ ಮಾಡುತ್ತೇವೆ ಎಂದು ಸುಳ್ಳು ಹೇಳಿದ್ದಾರೆ' ಎಂದು ವಾಗ್ದಾಳಿ ನಡೆಸಿದರು.

ಬಿಎಸ್ ವೈ-ಶೋಭಾ ವಾಮಾಚಾರ ಮಾಡಿಸಲು ಕೇರಳಕ್ಕೆ ಹೋಗುತ್ತಾರೆ: ಬೇಳೂರುಬಿಎಸ್ ವೈ-ಶೋಭಾ ವಾಮಾಚಾರ ಮಾಡಿಸಲು ಕೇರಳಕ್ಕೆ ಹೋಗುತ್ತಾರೆ: ಬೇಳೂರು

Belur Gopalakrishna attacks on Yeddyurappa on farmers issue

'ಯಡಿಯೂರಪ್ಪ ಪ್ರತಿ ಅಮಾವಾಸ್ಯೆಗೆ ಕೇರಳಕ್ಕೆ ಹೋಗುತ್ತಾರೆ. ಅವರು ಚಿಕಿತ್ಸೆಗಾಗಿ ಹೋಗುವುದಿಲ್ಲ. ಅವರು ಸರ್ಕಾರವನ್ನು ಬೀಳಿಸಲು ಮಾಟ ಮಂತ್ರ ಮಾಡಿಸಲು ಹೋಗುತ್ತಾರೆ. ಶೋಭಾ ಕರಂದ್ಲಾಜೆ ಜೊತೆಗೆ ಯಡಿಯೂರಪ್ಪ ಹಲವಾರು ಬಾರಿ ಕೇರಳಕ್ಕೆ ಹೋಗಿದ್ದಾರೆ' ಎಂದು ಆರೋಪಿಸಿದರು.

ಬಿಜೆಪಿಯಲ್ಲಿ ಅಸಮಾಧಾನ: ಜಿಲ್ಲಾ ಉಸ್ತುವಾರಿ ಬದಲಿಗೆ ಒತ್ತಾಯ?ಬಿಜೆಪಿಯಲ್ಲಿ ಅಸಮಾಧಾನ: ಜಿಲ್ಲಾ ಉಸ್ತುವಾರಿ ಬದಲಿಗೆ ಒತ್ತಾಯ?

ಹುಚ್ಚು ಹಿಡಿದಿದೆ : 'ಹನುಮ ದೇವರು ದಲಿತ ಸಮುದಾಯಕ್ಕೆ ಸೇರಿದವರು' ಎಂಬ ಯೋಗಿ ಆದಿತ್ಯನಾಥ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬೇಳೂರು ಗೋಪಾಲಕೃಷ್ಣ ಅವರು, 'ಉತ್ತರ ಪ್ರದೇಶದ ಸಿಎಂ ಯೋಗಿ ಅದಿತ್ಯನಾಥ್‌ ಅವರಿಗೆ ಹುಚ್ಚು ಹಿಡಿದಿದೆ. ಆಂಜನೇಯ ದಲಿತರ ದೇವರು ಎಂದು ಹೇಳುತ್ತಾರೆ. ಅಧಿಕಾರದಲ್ಲಿ ಇದ್ದರೆ ಏನು ಬೇಕಾದರೂ ಹೇಳಿಕೆ ನೀಡಬಹುದಾ?' ಎಂದು ಪ್ರಶ್ನಿಸಿದರು.

English summary
Former MLA and Congress leader Belur Gopalakrishna attacked against Karnataka BJP president B.S.Yeddyurappa and said that Yeddyurappa has no moral rights for talking about farmers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X