ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭದ್ರಾ ನದಿಯ ತಡೆಗೋಡೆ ಕುಸಿತ ಜನರಲ್ಲಿ ಸೃಷ್ಟಿಸಿದೆ ಆತಂಕ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಆಗಸ್ಟ್.16: ಭದ್ರಾ ನದಿಯ ತಡೆಗೋಡೆ ಕುಸಿದು ಇದೀಗ ಭಾರೀ ಅತಂಕ ಸೃಷ್ಟಿಯಾಗಿದೆ. ಭದ್ರಾ ಜಲಾಶಯದಿಂದ ಕೇವಲ 500 ಮೀಟರ್ ದೂರದಲ್ಲಿ ಈ ಘಟನೆ ಸಂಭವಿಸಿದೆ.

ತಡೆಗೋಡೆ ಕುಸಿದ ವಿಚಾರ ತಿಳಿಯುತ್ತಿದ್ದಂತೆ, ನೀರಾವರಿ ಇಲಾಖೆ ಅಧಿಕಾರಿಗಳು, ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ತಡೆಕೋಡೆ ಕುಸಿದ ಸ್ಥಳದ ಸುತ್ತಲೂ ಬ್ಯಾರಿಕೇಡ್ ಹಾಕಿ, ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.

Barrier of the Bhadra river has collapsed

ಮುಳ್ಳಯ್ಯನ ಗಿರಿ, ಬಾಬಾ ಬುಡನ್ ಗಿರಿಗೆ ಪ್ರವಾಸಿಗರು ಹೋಗದಿರುವುದೇ ಸೇಫ್ ಮುಳ್ಳಯ್ಯನ ಗಿರಿ, ಬಾಬಾ ಬುಡನ್ ಗಿರಿಗೆ ಪ್ರವಾಸಿಗರು ಹೋಗದಿರುವುದೇ ಸೇಫ್

ತಡೆಗೋಡೆ ಕುಸಿದಿರುವುದರಿಂದ, ಭದ್ರಾ ಜಲಾಶಯದ ಮುಂಭಾಗದಲ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಗೂ ಕಂಟಕವಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಭದ್ರಾ ಅಣೆಕಟ್ಟೆಗೆ ಸಂಜೆ ವೇಳೆ ಸುಮಾರು 45 ಸಾವಿರ ಕ್ಯೂಸೆಕ್ ನೀರು ಹರಿದು ಬಂದಿದೆ. ಅಷ್ಟೇ ಪ್ರಮಾಣದ ನೀರನ್ನು ಸಹ ಹೊರ ಬಿಡಲಾಗುತ್ತಿದೆ.

Barrier of the Bhadra river has collapsed

ಕೋಣಂದೂರಿನಲ್ಲಿ ಮಳೆ ಹೊಡೆತಕ್ಕೆ ಗೋಡೆ ಕುಸಿದು ಬಾಲಕ ಸಾವುಕೋಣಂದೂರಿನಲ್ಲಿ ಮಳೆ ಹೊಡೆತಕ್ಕೆ ಗೋಡೆ ಕುಸಿದು ಬಾಲಕ ಸಾವು

ಭದ್ರಾ ಡ್ಯಾಂನಿಂದ ಭಾರೀ ಪ್ರಮಾಣದ ನೀರು ಹೊರಬಿಡಲಾಗುತ್ತಿದ್ದು, ಕಳೆದೆರಡು ದಿನದಿಂದ ಗಂಟೆ ಗಂಟೆಗೂ, ನೀರಿನ ಒಳಹರಿವು ಮತ್ತು ಹೊರಹರಿವಿನಲ್ಲಿ ಏರಿಕೆ ಆಗುತ್ತಿದೆ. ನೀರಿನ ರಭಸ ಮತ್ತು ಈ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ಕುಸಿತ ಸಂಭವಿಸುವ ಸಾಧ್ಯತೆ ಹೆಚ್ಚಿದೆ.

English summary
The barrier of the Bhadra river has collapsed and is now a huge creation. Incident took place just 500 meters away from the Bhadra reservoir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X