ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ತನಿಖೆ ಎನ್ಐಎಗೆ ಹಸ್ತಾಂತರ

|
Google Oneindia Kannada News

ಶಿವಮೊಗ್ಗ, ಮಾರ್ಚ್ 24: ಫೆಬ್ರವರಿ 20 ರಂದು ನಡೆದ ರಾಜ್ಯದ ಶಿವಮೊಗ್ಗ ನಗರದಲ್ಲಿ ಭಜರಂಗದಳದ ಕಾರ್ಯಕರ್ತನ ಹತ್ಯೆಯ ತನಿಖೆಯನ್ನು ಕೇಂದ್ರ ಸರ್ಕಾರವು ರಾಷ್ಟ್ರೀಯ ತನಿಖಾ ದಳಕ್ಕೆ(ಎನ್‌ಐಎ) ಹಸ್ತಾಂತರಿಸಿ ಆದೇಶ ಹೊರಡಿಸಿದೆ.

ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ತನಿಖೆಗೆಂದು ಎನ್​ಐಎ ಅಧಿಕಾರಿಗಳು ಶೀಘ್ರದಲ್ಲೇ ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದಾರೆ. ಕೊಲೆ ಪ್ರಕರಣ ಸಂಬಂಧ ಎನ್​ಐಎ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದರು. ಕೊಲೆ ಪ್ರಕರಣದಲ್ಲಿ ಈವರೆಗೆ 10 ಆರೋಪಿಗಳನ್ನು ಬಂಧಿಸಲಾಗಿದ್ದು, ಇವರೆಲ್ಲರೂ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಹರ್ಷ ಕೊಲೆ ತನಿಖೆಯ ಆಧಾರದ ಮೇಲೆ ಮುಂದಿನ ಕ್ರಮ; ಬಸವರಾಜ ಬೊಮ್ಮಾಯಿಹರ್ಷ ಕೊಲೆ ತನಿಖೆಯ ಆಧಾರದ ಮೇಲೆ ಮುಂದಿನ ಕ್ರಮ; ಬಸವರಾಜ ಬೊಮ್ಮಾಯಿ

ಶಿವಮೊಗ್ಗದ ಬಜರಂಗದಳದ ಕಾರ್ಯಕರ್ತ ಹರ್ಷ ನಾಗರಾಜ್ ಅಲಿಯಾಸ್ ಹರ್ಷ ಹಿಂದೂ (27) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಬುಧವಾರ ನವದೆಹಲಿ ನ್ಯಾಯಾಲಯದಲ್ಲಿ ಔಪಚಾರಿಕ ದೂರು ದಾಖಲಿಸಿದ್ದು, ತನಿಖೆಯನ್ನು ಹಸ್ತಾಂತರಿಸಿದೆ ಎಂದು ಕರ್ನಾಟಕ ಪೊಲೀಸ್ ಮೂಲಗಳು ತಿಳಿಸಿವೆ.

Shivamogga: Bajrang Dal Activist Harsha Murder Case Handed Over Probe To NIA

ಮಾರ್ಚ್ 2ರಂದು, ಕರ್ನಾಟಕ ಪೊಲೀಸರು ಫೆಬ್ರವರಿ 21ರ ಕೊಲೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ 10 ಜನರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ, 1967ರ ಸೆಕ್ಷನ್‌ಗಳನ್ನು ಅನ್ವಯಿಸಿದರು. ಶಿವಮೊಗ್ಗದಲ್ಲಿ ತನಿಖೆ ನಡೆಸಲು ಎನ್‌ಐಎ ಅಧಿಕಾರಿಗಳು ಬಂಧಿತ ಶಂಕಿತರನ್ನು ಕಸ್ಟಡಿಗೆ ಪಡೆಯುವ ನಿರೀಕ್ಷೆಯಿದೆ.

ಈ ಕೊಲೆ ಪ್ರಕರಣದಲ್ಲಿ ಮಾರ್ಚ್‌ನಲ್ಲಿ ಯುಎಪಿಎ ಜಾರಿ ಮಾಡಿರುವುದು, ಬಿಜೆಪಿ ನಾಯಕರು ಬಯಸಿದಂತೆ ಪ್ರಕರಣದ ತನಿಖೆಯನ್ನು ಭಯೋತ್ಪಾದನಾ ವಿರೋಧಿ ಎನ್‌ಐಎಗೆ ಹಸ್ತಾಂತರಿಸುವ ಪೂರ್ವಭಾವಿಯಾಗಿ ಕಂಡುಬಂದಿದೆ ಎಂದು ವಿಪಕ್ಷಗಳು ಆರೋಪಿಸಿವೆ.

Shivamogga: Bajrang Dal Activist Harsha Murder Case Handed Over Probe To NIA

ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಮತ್ತು ಕರ್ನಾಟಕ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಅವರು ಫೆಬ್ರವರಿ 22ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಬಲಪಂಥೀಯ ಕಾರ್ಯಕರ್ತನ ಹತ್ಯೆಯನ್ನು ಎನ್‌ಐಎಯಿಂದ ತನಿಖೆ ನಡೆಸಬೇಕೆಂದು ಕೋರಿದ್ದರು.

"ಕೊಲೆ ಪ್ರಕರಣದಲ್ಲಿ ಯುಎಪಿಎ ಕೇಸ್ ಹಾಕಲಾಗಿದೆ. ಹತ್ಯೆಯ ಹಿಂದೆ ಸ್ಥಳೀಯ ಗಲಾಟೆಗಿಂತ ದೊಡ್ಡ ಪಿತೂರಿಯ ಶಂಕೆ ಇದೆ," ಎಂದು ಮೂರು ವಾರಗಳ ಹಿಂದೆ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದರು.

ರಾಷ್ಟ್ರೀಯ ಸಮಗ್ರತೆಯನ್ನು ಗುರಿಯಾಗಿಸುವ ಪಿತೂರಿಯ ಭಾಗವಾಗಿ ಅಪರಾಧವನ್ನು ನಡೆಸಲಾಗಿದೆ ಎಂಬುದಕ್ಕೆ ಪುರಾವೆಗಳಿದ್ದಾಗ ಸಾಮಾನ್ಯವಾಗಿ UAPAಯ ನಿಬಂಧನೆಗಳನ್ನು ಭಯೋತ್ಪಾದನೆಯ ಪ್ರಕರಣಗಳಲ್ಲಿ ಅನ್ವಯಿಸಲಾಗುತ್ತದೆ.

Shivamogga: Bajrang Dal Activist Harsha Murder Case Handed Over Probe To NIA

Recommended Video

IPL ನ ಕೆಟ್ಟ ದಾಖಲೆಗಳು: ಬೇಡವಾದ ದಾಖಲೆಯಲ್ಲಿ RCB ಕೂಡ ಇದೆ | Oneindia Kannada

ಹರ್ಷ ಹಿಂದೂ ಹತ್ಯೆ ಪ್ರಕರಣದಲ್ಲಿ ಯುಎಪಿಎಯನ್ನು ಅನ್ವಯಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಏಕೆಂದರೆ ಭಯವನ್ನು ಉಂಟುಮಾಡುವ ಅಪರಾಧವನ್ನು ನಡೆಸುವ ಪ್ರಕರಣಗಳಲ್ಲಿ ಕಾಯಿದೆಯನ್ನು ಅನ್ವಯಿಸಬಹುದಾಗಿದೆ.

UAPA ಶಂಕಿತರನ್ನು 30 ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ನೀಡುತ್ತದೆ ಮತ್ತು ಕಡಿಮೆ ಅಪರಾಧಗಳಲ್ಲಿ 90 ದಿನಗಳ ಸಮಯದ ಬದಲಿಗೆ ಚಾರ್ಜ್‌ಶೀಟ್ ಸಲ್ಲಿಸುವ ಮೊದಲು ತನಿಖೆ ನಡೆಸಲು 180 ದಿನಗಳನ್ನು ನೀಡುತ್ತದೆ. ಆರೋಪಿಗಳಿಗೆ ಜಾಮೀನು ನೀಡುವ ವಿಚಾರದಲ್ಲಿ ಕಾನೂನು ಕೂಡ ಅತ್ಯಂತ ಕಠಿಣವಾಗಿರುತ್ತದೆ.

English summary
The Central Government has Handed over the National Investigation Agency (NIA) to investigate the murder of Bajrang Dal activist in Shivamoga city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X