ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಧ್ವನಿವರ್ಧಕ ವಿವಾದ - ಕುರಿತು ಎರಡು ದಿನದಲ್ಲಿ ಮಾರ್ಗಸೂಚಿ ಎಂದ ಗೃಹ ಸಚಿವ

|
Google Oneindia Kannada News

ಶಿವಮೊಗ್ಗ, ಮೇ9: ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಈಗಾಗಲೇ ಆದೇಶ ಹೊರಡಿಸಿದ್ದು, ಅನುಷ್ಠಾನ ಕುರಿತು ಇನ್ನೆರಡು ದಿನಗಳಲ್ಲಿ, ಮಾರ್ಗದರ್ಶಿ ಸೂಚಿಯನ್ನು ಹೊರಡಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

Azaan vs Hanuman Chalisa Row: Guidelines Release within 2 days

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕರ್ನಾಟಕ ಸರಕಾರವೂ 2002ರಲ್ಲಿ ಆದೇಶ ಮಾಡಿದ್ದು, ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು, ಸಾರ್ವಜನಿಕ ಧ್ವನಿವರ್ಧಕ ಉಪಯೋಗದ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶವಿದೆ. ಯಾವ ಸಂದರ್ಭಗಳಲ್ಲಿ ಹಾಗೂ ಧ್ವನಿವರ್ಧಕಗಳಲ್ಲಿ ಎಷ್ಟು ಪ್ರಮಾಣದ ಡೆಸಿಬಿಲ್ ಇರಬೇಕು ಎನ್ನುವ ಕೋಷ್ಟಕ ಇದೆ. ವಸತಿ ಪ್ರದೇಶ, ಕೈಗಾರಿಕ ಹಾಗೂ ವಾಣಿಜ್ಯ ಪ್ರದೇಶ ಗಳಿಗೆ ಪ್ರತ್ಯೇಕ ವಾದ ಡೆಸಿಬೆಲ್ ಪ್ರಮಾಣವನ್ನು ನಿಗದಿ ಪಡಿಸಿ, ಮಾರ್ಗಸೂಚಿಗಳನ್ನು, ಹೊರಡಿಸಲಿದ್ದು ಅದನ್ನು ಅನುಷ್ಠಾನಕ್ಕೆ ತರಲಾಗುವುದು," ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

Azaan vs Hanuman Chalisa Row: Guidelines Release within 2 days

ಇನ್ನು "ವರ್ಷವಿಡೀ ಸಾರ್ವಜನಿಕ ಧ್ವನಿವರ್ಧಕ ಬಳಸುವವರು ಪರವಾನಗಿ ತೆಗೆದುಕೊಳ್ಳುವುದೂ ಸೇರಿದಂತೆ ಹಲವಾರು ವಿಚಾರಗಳು ಮಾರ್ಗಸೂಚಿಗಳು ಒಳಗೊಳ್ಳಲ್ಲಿದ್ದು, ಈ ಎಲ್ಲ ಅಂಶಗಳ ಪರಿಪಾಲನೆಗೆ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು.

English summary
Azaan vs Hanuman Chalisa Controversy : home minister said Release of Guidelines as per Supreme Court old Orders another two days Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X