ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೋಗಿ ಸ್ಟೈಲಿನಲ್ಲಿ ಮತ ಕೇಳೋಕೆ ಸಂಸತ್ತು ಥಿಯೇಟ್ರಾ?

|
Google Oneindia Kannada News

ಶಿವಮೊಗ್ಗ, ಏ 3: ರಾಜಕೀಯರಂಗ ಎನ್ನುವುದು ಸಿನಿಮಾ ಅಲ್ಲ. ಜೋಗಿ ಸ್ಟೈಲಿನಲ್ಲಿ ಡ್ಯಾನ್ಸ್ ಮಾಡ್ಕೊಂಡು, ಹಾಡು ಹೇಳ್ಕೊಂಡು ಮತ ಕೇಳೋಕೆ ಲೋಕಸಭೆ ಅನ್ನೋದು ಮನೋರಂಜನೆಯ ಜಾಗನಾ? ಶಿವಮೊಗ್ಗದ ರಾಜಕಾರಣ ಎಲ್ಲಿಗೆ ಬಂತು ನಿಂತಿದೆ ನೋಡಿ ಎಂದು ಬಿಜೆಪಿ ಮುಖಂಡ ಮತ್ತು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಕಿಡಿಕಾರಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಜನರಿಗೆ ಕೈಮುಗಿಯುತ್ತಾ ಮತ ಕೇಳಿದರೆ, ಪತಿ ಶಿವರಾಜ್ ಕುಮಾರ್ ಡ್ಯಾನ್ಸ್ ಮಾಡ್ಕೊಂಡು ಮತ ಕೇಳ್ತಾರೆ. ಡ್ಯಾನ್ಸ್ ಮಾಡೋಕೆ ಸಂಸತ್ತು ಏನು ಸಿನಿಮಾ ಹಾಲ್ ಕೆಟ್ಟೋಯ್ತಾ ಎಂದು ಆಯನೂರು ಲೇವಡಿ ಮಾಡಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿ]

ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೊದಲು ಮಧು ಬಂಗಾರಪ್ಪ ವಾಸ್ತವತೆಯನ್ನು ಅರಿತುಕೊಳ್ಳಬೇಕಿತ್ತು. ಶಿವಮೊಗ್ಗದ ಜನತೆ ವಿದ್ಯಾವಂತರಿದ್ದಾರೆ, ಸಿನಿಮಾದವರ ಡ್ಯಾನ್ಸ್, ಡೈಲಾಗುಗಳಿಗೆ ಮರುಳಾಗುವವರಲ್ಲ ಎಂದು ಆಯನೂರು ಮಂಜುನಾಥ್ ಹೇಳಿದ್ದಾರೆ.

ಹಾಡು ಹೇಳಿಕೊಂಡು ಮತಯಾಚನೆ ಮಾಡುವ ಪರಿಪಾಠವನ್ನು ಶಿವಮೊಗ್ಗದ ಜನತೆ ಈ ಹಿಂದೆಂದೂ ನೋಡಿರಲಿಲ್ಲ. ಇಂತವರು ಆಯ್ಕೆಯಾದರೆ ಜನರ ಸಮಸ್ಯೆಗೆ ಏನು ಪರಿಹಾರ ನೀಡಬಲ್ಲರು. ಡ್ಯಾನ್ಸ್ ಮಾಡಿದ ಕೂಡಲೇ ಮತ ಹಾಕೋಕೆ ಶಿವಮೊಗ್ಗದ ಜನರು ದಡ್ಡರಲ್ಲ ಎಂದು ಆಯನೂರು ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ. [ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಿರುಪರಿಚಯ]

ಶಿವಮೊಗ್ಗದಲ್ಲಿ (ಏ 2) ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಆಯನೂರು, ಈ ರಾಜ್ಯ ಕಂಡ ಅತ್ಯಂತ ಭ್ರಷ್ಟ ರಾಜಕಾರಣಿಯೆಂದರೆ ಅದು ಬಂಗಾರಪ್ಪ. ಕ್ಲಾಸಿಕ್ ಕಂಪ್ಯೂಟರ್, ಆಶ್ರಯ ಯೋಜನೆ ಮುಂತಾದ ಹಗರಣಗಳಿಂದ ರಾಜ್ಯದ ಮಾನವನ್ನು ಹರಾಜು ಹಾಕಿದ್ದಾರೆಂದು ಟೀಕೆ ಮಾಡಿದ್ದಾರೆ.

ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನಿಂದ ಮಂಜುನಾಥ ಬಂಡಾರಿ, ಬಿಜೆಪಿಯಿಂದ ಬಿ ಎಸ್ ಯಡಿಯೂರಪ್ಪ ಮತ್ತು ಜೆಡಿಎಸ್ ನಿಂದ ಗೀತಾ ಶಿವರಾಜ್ ಕುಮಾರ್ ಸ್ಪರ್ಧಿಸುತ್ತಿದ್ದಾರೆ.

ಆಯನೂರು ವಿರುದ್ದ ತಿರುಗಿ ಬಿದ್ದ ಮಧು ಬಂಗಾರಪ್ಪ. ಮುಂದೆ ಓದಿ..

ಆಯನೂರಿಗೆ ಏನು ಯೋಗ್ಯತೆ ಇದೆ

ಆಯನೂರಿಗೆ ಏನು ಯೋಗ್ಯತೆ ಇದೆ

ನನ್ನ ತಂದೆಯ ಬಗ್ಗೆ ಮಾತಾಡೋಕೆ ಆಯನೂರು ಮಂಜುನಾಥಿಗೆ ಏನು ಯೋಗ್ಯತೆ ಇದೆ. ಐದಾರು ತಿಂಗಳ ಹಿಂದೆ ಯಡಿಯೂರಪ್ಪನವರನ್ನು ವಾಮಾಗೋಚರವಾಗಿ ನಿಂದಿಸುತ್ತಿದ್ದ ಆಯನೂರು ಇಂದು ಅವರ ಹಿಂದೆ ಸುತ್ತುತ್ತಿದ್ದಾರೆ. ಇವರಿಂದ ನಾನು ರಾಜಕೀಯ ಪಾಠ ಕಲಿಯಬೇಕಾಗಿಲ್ಲ - ಮಧು ಬಂಗಾರಪ್ಪ

ಯಡಿಯೂರಪ್ಪ ಅವರಿಂದ ಜಿಲ್ಲೆಗೆ ಕಳಂಕ

ಯಡಿಯೂರಪ್ಪ ಅವರಿಂದ ಜಿಲ್ಲೆಗೆ ಕಳಂಕ

ಯಡಿಯೂರಪ್ಪ ಅವರ ಸಾಲು ಸಾಲು ಭ್ರಷ್ಟಾಚಾರ ಹಗರಣಗಳಿಂದ ಜಿಲ್ಲೆಗೇ ಕೆಟ್ಟ ಹೆಸರು ಬಂತು. ಈಗ ನನ್ನ ಸಹೋದರಿ ಗೀತಾ ಶಿವರಾಜ್ ಕುಮಾರ್ ಅವರನ್ನು ಗೆಲ್ಲಿಸಿ ಈ ಕಳಂಕ ಅಳಿಸಬೇಕಾಗಿದೆ - ಮಧು ಬಂಗಾರಪ್ಪ

ಜೋಗಿ ಸ್ಟೈಲ್

ಜೋಗಿ ಸ್ಟೈಲ್

ಸಾಗರದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಶಿವಣ್ಣ, ನಾನು ಜೋಗಿ ಸ್ಟೈಲಿನಲ್ಲಿ ನಿಮ್ಮ ಮುಂದೆ ಮತ ಯಾಚನೆ ಮಾಡಲು ಬಂದಿದ್ದೇನೆ. ಜೋಳಿಗೆ ಬಿಚ್ಚಿ ನಿಮ್ಮ ಮತವನ್ನು ಕೇಳಲು ಬಂದಿದ್ದೇನೆ. ಗೀತಾಗೆ ಅನುಭವದ ಕೊರತೆಯಿರಬಹುದು. ಯಾರು ಹುಟ್ಟುತ್ತಲೇ ಅನುಭವ ಹೊಂದಿರುವುದಿಲ್ಲ.

ಬಂಗಾರಪ್ಪನವರಂತೆ ಜನಸೇವೆ

ಬಂಗಾರಪ್ಪನವರಂತೆ ಜನಸೇವೆ

ನೀವು ನನ್ನನ್ನು ಗೆಲ್ಲಿಸಿದರೆ ಶಿವಮೊಗ್ಗದಲ್ಲಿ ನೆಲೆಸಿ ತಂದೆ ಬಂಗಾರಪ್ಪನವರಂತೆ ಜನಸೇವೆ ಮಾಡುತ್ತೇನೆ. ಜಿಲ್ಲೆಯ ಸಮಸ್ಯೆಗಳನ್ನು ಪ್ರಚಾರದ ವೇಳೆ ಗಮನಿಸಿದ್ದೇನೆ. ನನಗೆ ಈ ಚುನಾವಣೆಯಲ್ಲಿ ಗೆಲ್ಲಿಸಿ ಜವಾಬ್ದಾರಿ ನೀಡಿದರೆ ಕ್ಷೇತ್ರದ ಸಮಸ್ಯೆ ಪರಿಹಾರಕ್ಕೆ ನನ್ನನ್ನು ತೊಡಗಿಸಿಕೊಳ್ಳುತ್ತೇನೆ - ಗೀತಾ ಶಿವರಾಜ್ ಕುಮಾರ್

ಗೌರವಯುತವಾಗಿ ನಡೆದುಕೊಳ್ಳಲಿ

ಗೌರವಯುತವಾಗಿ ನಡೆದುಕೊಳ್ಳಲಿ

ಆಯನೂರು ಮಂಜುನಾಥ್ ನನ್ನ ಕೇಶವಿನ್ಯಾಸದ ಬಗ್ಗೆ ಮಾತನಾಡುತ್ತಾರೆ. ಮತದಾನದ ದಿನದ ನಂತರ ಪುರುಷೊತ್ತು ಇದ್ದರೆ ನನ್ನ ಕೇಶವನ್ನು ಬಂದು ಕತ್ತರಿಸಿಅಲಿ - ಮಧು ಬಂಗಾರಪ್ಪ

English summary
Politicis is not a cinema hall, BJP Leader Ayanur Manjunath to Hatrick Hero Shivaraj Kumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X