ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ: ಬೊಲೇರೋ ಜೀಪಲ್ಲಿ ಬಂದು ಒಂಟಿ ಮನೆಯಲ್ಲಿ ದರೋಡೆಗೆ ಯತ್ನ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಏಪ್ರಿಲ್ 20: ಸೋಲಾರ್ ರಿಪೇರಿ ನೆಪದಲ್ಲಿ ಮನೆ ಬಳಿಗೆ ಬಂದವರು ದರೋಡೆ ವಿಫಲ ಯತ್ನ ನಡೆಸಿದ್ದಾರೆ. ಮಹಿಳೆಯರ ಧೈರ್ಯ ಮತ್ತು ಸಮಯ ಪ್ರಜ್ಞೆಯಿಂದ ದರೋಡೆ ತಪ್ಪಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಧೈರ್ಯ ಹೇಳಿದ್ದಾರೆ.

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ನೆರಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಬ್ಬಿ ಹೊರಣಿ ಬಳಿ ಸೋಮವಾರ ಸಂಜೆ ಘಟನೆ ಸಂಭವಿಸಿದೆ.

ಏನಿದು ಪ್ರಕರಣ?
ನೆರಟೂರು ಗ್ರಾ.ಪಂ ವ್ಯಾಪ್ತಿಯ ಹೊರಣಿ ಗ್ರಾಮದಲ್ಲಿ ಸೋಮವಾರ ಸಂಜೆ ಸೋಲಾರ್ ರಿಪೇರಿ ಮಾಡುವ ನೆಪದಲ್ಲಿ ಶ್ರೀನಾಥ್ ಎಂಬುವವರ ಒಂಟಿ ಮನೆಗೆ ನುಗ್ಗಿದ ದರೋಡೆಕೋರರಿಗೆ ಮನೆಯಲ್ಲಿದ್ದ ಕುಟುಂಬದವರು ಪ್ರತಿರೋಧ ವ್ಯಕ್ತಪಡಿಸುತ್ತಿದ್ದಂತೆ ಪರಾರಿಯಾಗಿದ್ದಾರೆ.

Shivamogga: Attempted Robbery In A Lonely House In Thirthahalli Taluk

ಬೊಲೇರೋ ವಾಹನದಲ್ಲಿ ಬಂದ ಆರು ದರೋಡೆಕೋರರು ಸೋಲಾರ್ ರಿಪೇರಿ ಮಾಡುವುದಾಗಿ ಪರಿಚಯಿಸಿಕೊಂಡಿದ್ದಾರೆ. ಎದುರಿಗೆ ಬಂದ ಶ್ರೀನಾಥ್ ಅವರ ಪತ್ನಿ ಪದ್ಮಾವತಮ್ಮ ಮತ್ತು ಇವರ ಮಗಳ ಮುಖಕ್ಕೆ ದರೋಡೆಕೋರರು ಕ್ಲೋರೋಫಾರ್ಮ್ ಸಿಂಪಡಿಸಿದ ಬಟ್ಟೆಯನ್ನು ಮುಖಕ್ಕೆ ಒತ್ತಿ ಹಿಡಿದಿದ್ದಾರೆ.

ಭಯದಿಂದ ಕೆಳಗೆ ಬಿದ್ದ ಪದ್ಮಾವತಮ್ಮ ಅವರ ನಾಲ್ಕು ಹಲ್ಲುಗಳು ಮುರಿದಿವೆ. ಆಗ ಮನೆಯಲ್ಲಿ ಐದು ಮಂದಿ ಸದಸ್ಯರು ಜೋರಾಗಿ ಕೂಗಿ ಪ್ರತಿರೋಧ ತೋರಿದ್ದಾರೆ. ಆಗ ಅಕ್ಕಪಕ್ಕದವರೆಲ್ಲರೂ ಬರುತ್ತಿದ್ದಂತೆ ದರೋಡೆಕೋರು ಪರಾರಿಯಾಗಿದ್ದಾರೆ.

ನಂಬರ್ ಪ್ಲೇಟ್‌ಗೆ ಸೆಗಣಿ ಮೆತ್ತಿದ್ದರು
ಸಿನಿಮೀಯ ಮಾದರಿಯಲ್ಲಿ ನಡೆದ ಈ ಪ್ರಕರಣದಲ್ಲಿ ಮನೆಯಲ್ಲಿದ್ದವರ ಸಕಾಲಿಕ ಸಮಯಪ್ರಜ್ಞೆ ಮತ್ತು ತೋರಿದ ಧೈರ್ಯದಿಂದಾಗಿ ಯಾವುದೇ ವಸ್ತುಗಳು ಅಪಹರಣವಾಗಿಲ್ಲ. ದರೋಡೆಕೋರರು ಸುಮಾರು 25ರಿಂದ 30 ವರ್ಷ ವಯಸ್ಸಿನವರಾಗಿದ್ದು, ವಾಹನದ ನಂಬರ್ ಪ್ಲೇಟ್‌ಗೆ ಸೆಗಣಿ ಮೆತ್ತಿದ್ದರು ಎನ್ನಲಾಗಿದೆ.

ಸಚಿವರು, ಮಾಜಿ ಸಚಿವರು ಭೇಟಿ
ವಿಚಾರ ತಿಳಿಯುತ್ತಿದ್ದ ಹಾಗೆ ಗೃಹ ಸಚಿವ ಮತ್ತು ಮಾಜಿ ಸಚಿವರು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗೃಹ ಸಚಿವ ಆರಗ ಜ್ಞಾನೇಂದ್ರ ಮಂಗಳವಾರ ಮನೆಗೆ ಭೇಟಿ ನೀಡಿ, ಈ ಭಾಗದಲ್ಲಿ ನಡೆದಿರುವ ಅತ್ಯಂತ ಆತಂಕದ ಘಟನೆಯಾಗಿದೆ. ದರೋಡೆಕೋರರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಮುಖ್ಯವಾಗಿ ಮನೆಯವರು ದರೋಡೆಕೋರರನ್ನು ಧೈರ್ಯದಿಂದ ಎದುರಿಸಿದ ಪರಿಣಾಮ ಹಾನಿಗೆ ಅವಕಾಶವಾಗಿಲ್ಲ ಎಂದರು. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಕೂಡ ಮನೆಗೆ ಭೇಟಿ ನೀಡಿ ಧೈರ್ಯ ಹೇಳಿದರು.

ಸರ್ಕಾರಿ ಹಾಸ್ಟೆಲ್ ಬೀಗ ಮುರಿದ ಕಳ್ಳತನ
ಸರ್ಕಾರಿ ಹಾಸ್ಟೆಲ್ ಒಂದರ ಬೀಗ ಒಡೆದು ಬ್ಯಾಟರಿ, ಸಿಸಿ ಕ್ಯಾಮರಾ, ಹಿತ್ತಾಳೆ ಪಾತ್ರೆಗಳನ್ನು ಕಳವು ಮಾಡಲಾಗಿದೆ. ಭದ್ರಾವತಿಯ ಸೀಗೆಬಾಗಿ ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್‌ನಲ್ಲಿ ಘಟನೆ ಸಂಭವಿಸಿದೆ.

ವಿದ್ಯಾರ್ಥಿನಿಲಯದ ಕಚೇರಿಯ ಬೀಗ ಮರಿದು ಕಳ್ಳತನ ಮಾಡಲಾಗಿದೆ. 6 ಯುಪಿಎಸ್ ಬ್ಯಾಟರಿಗಳು, ಸಿಸಿ ಕ್ಯಾಮೆರಾ, ಹಿತ್ತಾಳೆ ಪಾತ್ರೆಗಳನ್ನು ಕಳವು ಮಾಡಲಾಗಿದೆ. ಇನ್ನು ಅಡುಗೆ ಕೋಣೆಯ ಬೀಗ ಮುರಿದು, ಭೋಜನಾಲಯದಲ್ಲಿದ್ದ ಟಿವಿಯನ್ನು ಒಡೆದು ಹಾಕಲಾಗಿದೆ. ಘಟನೆ ಸಂಬಂಧ ಭದ್ರಾವತಿ ಓಲ್ಡ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Recommended Video

DK ಸಾಂಸಾರಿಕ ಜೀವನದಲ್ಲಿ ಮುರಳಿ ವಿಜಯ್ ವಿಲನ್ ಆಗಿದ್ದು ಹೇಗೆ? | Oneindia Kannada

English summary
An unsuccessful robbery attempt in the name of solar repairs took place in Neraturu Gram Panchayat in Thirthahalli Taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X