ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ: ಕರ್ತವ್ಯದ ವೇಳೆ ಏಕಾಏಕಿ ಕುಸಿದು ಬಿದ್ದ ಆಶಾ ಕಾರ್ಯಕರ್ತೆ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜೂನ್ 30: ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಏಕಾಏಕಿ ಆಶಾ ಕಾರ್ಯಕರ್ತೆಯೊಬ್ಬರು ಅಸ್ವಸ್ಥರಾಗಿ ಕುಸಿದು ಬಿದ್ದ ಘಟನೆ ಮಂಗಳವಾರ ಶಿಕಾರಿಪುರದಲ್ಲಿ ನಡೆದಿದೆ.

ಶಿಕಾರಿಪುರ ಪಟ್ಟಣದ ಕಂಟೆನ್ಮೆಂಟ್ ವಲಯ ಕುಂಬಾರಗುಂಡಿ ಬೀದಿಯಲ್ಲಿ ಕಳೆದ ಒಂದು ವಾರದ ಹಿಂದೆ ಇಲ್ಲಿನ ನಿವಾಸಿಯೊಬ್ಬರಿಗೆ ಕರೊನಾ ವೈರಸ್ ಪಾಸಿಟಿವ್ ಬಂದಿದ್ದು, ಒಂದು ವಾರದಿಂದ ಇಲ್ಲಿನ ನಿವಾಸಿಗಳ ಆರೋಗ್ಯ ತಪಾಸಣೆ ನಡೆಸಿರುವುದಿಲ್ಲ ಎಂದು ಸ್ಥಳೀಯರು ಪ್ರತಿಭಟಿಸಿದ್ದರು.

3 ರೂ 46 ಪೈಸೆ ಕಟ್ಟಲು 15 ಕಿ.ಮೀ ನಡೆದ ಶಿವಮೊಗ್ಗದ ರೈತ!3 ರೂ 46 ಪೈಸೆ ಕಟ್ಟಲು 15 ಕಿ.ಮೀ ನಡೆದ ಶಿವಮೊಗ್ಗದ ರೈತ!

ಈ ಹಿನ್ನೆಲೆಯಲ್ಲಿ ಇಂದು ಆರೋಗ್ಯ ಇಲಾಖೆ ಸಿಬ್ಬಂದಿಗಳು ಜನರ ಆರೋಗ್ಯ ತಪಾಸಣೆಗಾಗಿ ಆಗಮಿಸಿದ್ದು, ಆಶಾ ಕಾರ್ಯಕರ್ತೆಯಾದ ನೇತ್ರಾವತಿ ಅವರು ನಿಶ್ಯಕ್ತಿಯಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಆರೋಗ್ಯ ಇಲಾಖೆ ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

Shivamogga: Asha Activist Who Fall Down While On Duty

ಈ ಕುರಿತು ತಪಾಸಣೆ ನಡೆಸಿದ ವೈದ್ಯ ಡಾ.ವಿನಯ್ ಮಾತನಾಡಿ, ಆಶಾ ಕಾರ್ಯಕರ್ತೆ ಕರ್ತವ್ಯ ವೇಳೆ ಧರಿಸಿದ ಪಿಪಿಟಿ ಕೀಟ್ ಹಾಗೂ ಪೇಸ್ ಮಾಸ್ಕ್ ನಿಂದ ಉಸಿರಾಡಲು ತೊಂದರೆಯಾಗಿರಬದುದು, ಯಾವುದೇ ರೀತಿಯ ರೋಗದ ಲಕ್ಷಣಗಳಿಲ್ಲ ಯಾರೂ ತೊಂದರೆ ಪಡುವ ಅಗತ್ಯವಿಲ್ಲ, ಬಿಸಿಲಿನ ತಾಪಮಾನಕ್ಕೆ ನಿಶ್ಯಕ್ತಿ ಉಂಟಾಗಿದೆ ಎಂದು ತಿಳಿಸಿದ್ದಾರೆ.

ತೀರ್ಥಹಳ್ಳಿ; ಮನೆ ಖಾಲಿ ಮಾಡಲು ಡಾಕ್ಟರ್‌ಗೆ ಒತ್ತಡ; ದೂರುತೀರ್ಥಹಳ್ಳಿ; ಮನೆ ಖಾಲಿ ಮಾಡಲು ಡಾಕ್ಟರ್‌ಗೆ ಒತ್ತಡ; ದೂರು

ಒಂದು ಕಡೆ ರಾಜ್ಯಾದ್ಯಂತ ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಗಾಗಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸುತ್ತಿದ್ದರೆ, ಇತ್ತ ತಮ್ಮ ಕರ್ತವ್ಯಕ್ಕೆ ಮೋಸ ಮಾಡದೇ ಆಶಾ ಕಾರ್ಯಕರ್ತೆಯರು ಸೇವೆ ನಿರ್ವಹಿಸುತ್ತಿದ್ದು, ಅವರಿಗೆ ಸೇವಾ ಭದ್ರತೆ ಹಾಗೂ ಸೂಕ್ತ ವೇತನ ನೀಡಲು ಸರ್ಕಾರ ಮುಂದಾಗಬೇಕಿದೆ.

English summary
The incident took place in Shikaripur on Tuesday when an Asha activist fell ill while on duty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X