ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಗಂದೂರು ದೇವಾಲಯ ಮುಜರಾಯಿ ಇಲಾಖೆಗೆ ನೀಡಲು ವಿರೋಧ

|
Google Oneindia Kannada News

ಶಿವಮೊಗ್ಗ, ಅಕ್ಟೋಬರ್ 14: ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿರುವ ಸಿಗಂದೂರು ಚೌಡೇಶ್ವರಿ ದೇವಾಲಯವನ್ನು ಮುಜರಾಯಿ ಇಲಾಖೆಗೆ ನೀಡಲು ವಿರೋಧ ವ್ಯಕ್ತವಾಗಿದೆ. ಆರ್ಯ ಈಡಿಗ ಸಂಘ ಈ ಕುರಿತು ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಿದೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರ್ಯ ಈಡಿಗ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, "ಸಿಗಂದೂರಿನ ಚೌಡೇಶ್ವರಿ ಡಾ. ರಾಮಪ್ಪ ಅವರ ಮನೆ ದೇವತೆ. ಶರಾವತಿ ಹಿನ್ನೀರಿನಲ್ಲಿ ಮುಳುಗಿ ಹೋಗಿದ್ದ ಮೂಲ ವಿಗ್ರಹವನ್ನು ತಂದು ಪುನರ್ ಪ್ರತಿಷ್ಠಾಪಿಸಿ, ದೇವಾಲಯ ನಿರ್ಮಿಸಿದ್ದಾರೆ" ಎಂದರು.

ಹೊಳೆಬಾಗಿಲು-ಸಿಗಂದೂರು ಸಂಪರ್ಕ ಸೇತುವೆಗೆ ಕೇಂದ್ರ ಅಸ್ತುಹೊಳೆಬಾಗಿಲು-ಸಿಗಂದೂರು ಸಂಪರ್ಕ ಸೇತುವೆಗೆ ಕೇಂದ್ರ ಅಸ್ತು

"ದೇವಾಲಯವನ್ನು ಹಂತ ಹಂತವಾಗಿ ಅಭಿವೃದ್ಧಿ ಮಾಡಿದ್ದಾರೆ. ಹೆಚ್ಚಿನ ಭಕ್ತರು ಬರುವ ಕಾರಣ ಈಗ ಧಾರ್ಮಿಕ ಮತ್ತು ಪ್ರವಾಸಿ ತಾಣವಾಗಿದೆ. ಈಗ ಮುಜರಾಯಿ ಇಲಾಖೆ ವ್ಯಾಪ್ತಿಗೆ ದೇವಾಲಯವನ್ನು ಸೇರಿಸಲು ಹೊರಟಿರುವುದು ಸರಿಯಲ್ಲ. ಆರ್ಯ ಈಡಿಗ ಸಂಘ ಇದನ್ನು ಖಂಡಿಸುತ್ತದೆ" ಎಂದು ಹೇಳಿದರು.

ಸಿಗಂದೂರು ಸೇತುವೆ ಕಾಮಗಾರಿಗೆ ನಿತೀನ್ ಗಡ್ಕರಿ ಚಾಲನೆ ಸಿಗಂದೂರು ಸೇತುವೆ ಕಾಮಗಾರಿಗೆ ನಿತೀನ್ ಗಡ್ಕರಿ ಚಾಲನೆ

Arya Ediga Community Opposed To Hand Over Sigandur Temple To Muzrai

"ದೇವಾಲಯವನ್ನುಮುಜರಾಯಿ ಇಲಾಖೆ ವ್ಯಾಪ್ತಿಗೆ ನೀಡದಂತೆ ಒತ್ತಡ ಹೇರಲು ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಸಾಗರ ಶಾಸಕ ಹರತಾಳು ಹಾಲಪ್ಪ, ಸೊರಬ ಶಾಸಕ ಕುಮಾರ್ ಬಂಗಾರಪ್ಪ ಹೀಗೆ ಎಲ್ಲಾ ಪಕ್ಷದ ನಾಯಕರು ಒಂದಾಗಿ ಹೋರಾಟ ಮಾಡಲು ತೀರ್ಮಾನಿಸಿದ್ದೇವೆ" ಎಂದು ಎಚ್ಚರಿಕೆ ನೀಡಿದರು.

ಹಿಂದೂ ಧರ್ಮದ ಪ್ರಸಿದ್ಧ ದೇವಾಲಯ ಚಿದಂಬರಂ ಬಗ್ಗೆ ಗಾಲಿ ರೆಡ್ಡಿ ಹಿಂದೂ ಧರ್ಮದ ಪ್ರಸಿದ್ಧ ದೇವಾಲಯ ಚಿದಂಬರಂ ಬಗ್ಗೆ ಗಾಲಿ ರೆಡ್ಡಿ

ಆರ್ಯ ಈಡಿಗರ ಸಂಘ ಈಗಾಗಲೇ ಸಂಸದ ಬಿ. ವೈ. ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ ಅವರನ್ನು ಭೇಟಿ ಮಾಡಿದೆ. ಕಾಗೋಡು ತಿಮ್ಮಪ್ಪ ಅವರು ಸಹ ಮುಖ್ಯಮಂತ್ರಿಗಳ ಜೊತೆ ಮಾತನಾಡುವುದಾಗಿ ಭರವಸೆ ನೀಡಿದ್ದಾರೆ. ಹಿಂದುಳಿದ ಸಮಾಜಕ್ಕೆ ಸೇರಿದ ದೇವಾಲಯವನ್ನು ಕಬಳಿಕೆ ಮಾಡುವ ಹುನ್ನಾರ ನಡೆಯುತ್ತಿದೆ. ಇದರ ವಿರುದ್ಧ ಈಡಿಗ ಸಮಾಜ ಒಂದಾಗಿ ಹೋರಾಟ ಮಾಡಲಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಸಿಗಂದೂರು ಚೌಡೇಶ್ವರಿ ದೇವಾಲಯ ಪ್ರಮುಖ ಧಾರ್ಮಿಕ ಮತ್ತು ಪ್ರವಾಸಿ ತಾಣವಾಗಿದೆ. ಶರಾವತಿ ಹಿನ್ನೀರಿನಲ್ಲಿನ ಕಣ್ಮನ ಸೆಳೆಯುವ ಪ್ರದೇಶದಲ್ಲಿ ದೇವಾಲಯವಿದೆ. ಪ್ರತಿನಿತ್ಯ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

English summary
Arya Ediga community leaders opposed to hand over Sigandur Chowdeshwari temple to muzrai department. Sigandur famous religious place in Shivamogga district of Sagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X