ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದೂವರೆ ತಿಂಗಳ ಬಳಿಕ ಆಗುಂಬೆ ಘಾಟಿಯಲ್ಲಿ ಮತ್ತೆ ಸಂಚಾರ ಆರಂಭ

|
Google Oneindia Kannada News

ಬೆಂಗಳೂರು, ಮೇ 17: ಒಂದೂವರೆ ತಿಂಗಳ ಕಾಮಗಾರಿ ಬಳಿಕ ಆಗುಂಬೆ ಘಾಟಿಯಲ್ಲಿ ಮತ್ತೆ ಸಂಚಾರ ಆರಂಭಗೊಂಡಿದೆ.

ಗುರುವಾರ (ಮೇ 16)ದಿಂದ ಸಂಜೆಯಿಂದಲೇ ದ್ವಿಚಕ್ರ ವಾಹನಗಳು ಮತ್ತು ಕಾರುಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಗುರುವಾರ ಬೆಳಗ್ಗೆಯಿಂದ ಈ ಮಾರ್ಗದಲ್ಲಿ ಮಿನಿ ಬಸ್ ಸಂಚಾರ ಆರಂಭಿಸಿವೆ.
ಒಂದೂವರೆ ತಿಂಗಳಿನಿಂದ ಸ್ಥಗತಗೊಂಡಿದ್ದ ಮಲೆನಾಡು-ಕರಾವಳಿ ಸಂಪರ್ಕ ಸೇತುವೆ ಆಗುಂಬೆ ಘಾಟಿ ರಸ್ತೆಯಲ್ಲಿ ವಾಹನ ಸಂಚಾರ ಮತ್ತೆ ಆರಂಭಿಸಿವೆ.

Agumbe Ghat road opens for vehicles
ಘಾಟಿ ರಸ್ತೆಯ 5 ಮತ್ತು 14ನೇ ತಿರುವಿನಲ್ಲಿ ಕಾಂಕ್ರೀಟ್ ಸ್ಲ್ಯಾಬ್ ಹಾಕಲಾಗಿದ್ದು ಇದರ ಕ್ಯೂರಿಂಗ್ ಗೆ ಕನಿಷ್ಠ ಮೂರು ವಾರಗಳ ಅಗತ್ಯ ಇರುವ ಕಾರಣ ಜೂನ್ ಒಂದರಿಂದ ಈ ಮಾರ್ಗವನ್ನು ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ಶಿವಮೊಗ್ಗ ಜಿಲ್ಲಾಡಳಿತ ತಿಳಿಸಿದೆ.

ಮೇ 16ರಿಂದ ಆಗುಂಬೆ ಘಾಟ್ ರಸ್ತೆ ವಾಹನ ಸಂಚಾರಕ್ಕೆ ಮುಕ್ತಮೇ 16ರಿಂದ ಆಗುಂಬೆ ಘಾಟ್ ರಸ್ತೆ ವಾಹನ ಸಂಚಾರಕ್ಕೆ ಮುಕ್ತ

ಕಳೆದ ವರ್ಷ ಜೂನ್ ಎರಡನೇ ವಾರ ಸುರಿದ ಭಾರಿ ಮಳೆಗೆ ಈ ಘಾಟಿ ರಸ್ತೆಯ 5.7 ಹಾಗೂ 14ನೇ ಸುತ್ತಿನಲ್ಲಿ ಗುಡ್ಡ ಕುಸಿದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಗುಡ್ಡ ಕುಸಿದ ಜಾಗಣದಲ್ಲಿ ಮರಳು ಚೀಲಗಳನ್ನು ಹಾಕಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.

ಶಾಶ್ವತವಾಗಿ ದುರಸ್ತಿಗೊಳಿಸುವ ಕಾಮಗಾರಿ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ಏಪ್ರಿಲ್ ಒಂದರಿಂದ 30ರವರೆಗೆ ಸ್ಥಗಿತಗೊಳಿಸಲಾಗಿತ್ತು.

ಕಾಮಗಾರಿಗೆ ಸಂಬಂಧಿಸಿ ವನ್ಯಜೀವಿ ವಿಭಾಗ ವಿಧಿಸಿ ನಿಯಮಗಳನ್ನು ಪಾಲಿಸಬೇಕಾದ ಹಿನ್ನೆಲೆಯಲ್ಲಿ ಇಲಾಖೆಯ ಅನುಮತಿ ದೊರೆಯುವುದು ತಡವಾಗಿತ್ತು. ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಇಲ್ಲಿ ರಸ್ತೆ ವಿಸ್ತರಣೆ ಮಾಡಬೇಕಿದೆ. ಆದರೆ ವನ್ಯಜೀವಿ ವಿಭಾಗ ತಕರಾರು ತೆಗೆದಿರುವ ಕಾರಣ ಈ ಕಾಮಗಾರಿಯನ್ನು ಕೈಬಿಡಲಾಗಿದೆ.

English summary
Vehicular movement along the Agumbe Ghat road, considered to be the main link between Malnad and coastal Karnataka, opened from Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X