ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೊದಲ ದಿನ ಜೋಗ ಜಲಪಾತಕ್ಕೆ ಬಂದ ಪ್ರವಾಸಿಗರಿಗೆ ನಿರಾಸೆ

|
Google Oneindia Kannada News

ಶಿವಮೊಗ್ಗ, ಜೂನ್ 18: ಲಾಕ್‌ಡೌನ್ ಸಡಿಲಿಕೆಯ ನಂತರ ಜೋಗ ಜಲಪಾತಕ್ಕೆ ಪ್ರವಾಸಿಗರ ಆಗಮನವಾಗಿದೆ. ನಿನ್ನೆಯಿಂದ ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ. ಆದರೆ, ಮೊದಲ ದಿನ ಬಂದ ಪ್ರವಾಸಿಗರಿಗೆ ಕೊಂಚ ಬೇಸರವಾಗಿದೆ.

Recommended Video

ವೀರಯೋಧ ಸಂತೋಷ್ ಬಾಬು ಅಂತಿಮಯಾತ್ರೆ | Colonel Santosh Babu | Oneindia Kannada

ಮೊದಲ ದಿನ ನೂರಾರೂ ಸಂಖ್ಯೆಯ ಜನರು ಜೋಗಕ್ಕೆ ಬಂದಿದ್ದರು. ಸಾಮಾಜಿಕ ಅಂತರ, ಮಾಸ್ಕ್‌ ಧರಿಸುವುದು ಕಡ್ಡಾಯವಾಗಿತ್ತು. ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ಕೂಡ ಮಾಡಲಾಯಿತು. ಕಳೆದ ಮೂರು ದಿನಗಳಿಂದ ಒಳ್ಳೆಯ ಮಳೆ ಬೀಳುತ್ತಿದ್ದು, ಜೋಗ ನೋಡುಗರ ಆಕರ್ಷಣೆಗೆ ಕಾರಣವಾಗಿದೆ.

ಜೋಗದಲ್ಲಿ ಪ್ರವಾಸಿಗರ ಊಟ, ತಿಂಡಿ ವ್ಯವಸ್ಥೆಗೆ ನಿರ್ಬಂಧಜೋಗದಲ್ಲಿ ಪ್ರವಾಸಿಗರ ಊಟ, ತಿಂಡಿ ವ್ಯವಸ್ಥೆಗೆ ನಿರ್ಬಂಧ

ಸದ್ಯಕ್ಕೆ ಜೋಗ ಜಲಪಾತಕ್ಕೆ ಬಂದ ಪ್ರವಾಸಿಗರಿಗೆ ಕಳೆಗೆ ಬಿಡದಿರಲು ನಿರ್ಧಾರ ಮಾಡಲಾಗಿದೆ. ಸಾಮಾನ್ಯ ದಿನಗಳಲ್ಲಿ ಜನರು ಮೆಟ್ಟಲುಗಳ ಮೂಲಕ ಹೋಗಿ ಜೋಗದ ಗುಂಡಿ ಹತ್ತಿರ ಇಳಿಯಬಹುದು. ಆದರೆ, ಸದ್ಯ ಮೇಲೆ ನಿಂತು ಮಾತ್ರ ನೋಡಬೇಕಿದೆ. ಇದರಿಂದ ಬಂದ ಪ್ರವಾಸಿಗರಿಗೆ ನಿರಾಸೆಯಾಗಿದೆ.

After Lockdown Relaxation Tourist Visiting Jog Falls From Yesterday

ಜಲಪಾತದ ಬಳಿ ನೆಟ್‌ವರ್ಕ್ ಸಮಸ್ಯೆ ಇದೆ. ಒಂದೆರಡು ದಿನಗಳಲ್ಲಿ ಬೂಸ್ಟರ್ ಬಳಸಲಿದ್ದು, ಪ್ರವಾಸಿಗರು ಆನ್ ಲೈನ್ ಮೂಲಕ ಶುಲ್ಕ ಪಾವತಿ ಮಾಡಬಹುದಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ರಾಮಕೃಷ್ಣ ತಿಳಿಸಿದ್ದಾರೆ.

ಕೆಎಸ್‌ಟಿಡಿಸಿ ಮೂಲಕ ಮಯೂರ ಹೋಟೆಲ್ ಹಾಗೂ ಲಾಡ್ಜ್‌ ಪ್ರಾರಂಭ ಮಾಡಲಾಗಿದೆ. ಈಗಾಗಲೇ ಜಲಪಾತದ ಹಲವು ಕಡೆ ಔಷಧಿ ಸಿಂಪಡನೆ ಮಾಡಿದ್ದು, ಅನೇಕ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮಳೆಗಾಲದ ಪ್ರಾರಂಭ ಆಗಿದ್ದು, ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗಿ ಇರಲಿದೆ.

English summary
After lockdown relaxation tourist visiting Jog Falls from yesterday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X