ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವರಾಜಕುಮಾರ್ ಪ್ರಚಾರಕ್ಕೆ ಬರೋಲ್ಲ: ಮಧು ಬಂಗಾರಪ್ಪ

By Srinath
|
Google Oneindia Kannada News

ಶಿವಮೊಗ್ಗ, ಮಾರ್ಚ್15: ಜೆಡಿಎಸ್ ಪಕ್ಷದ ವತಿಯಿಂದ ಡಾ ರಾಜ್ ಅವರ ಸೊಸೆ, ಬಂಗಾರಪ್ಪ ಅವರ ಪುತ್ರಿ ಗೀತಾ ಅವರು ಶಿವಮೊಗ್ಗದ ಲೋಕಸಭಾ ಚುನಾವಣೆ ಕಣದಿಂದ ಸ್ಪರ್ಧಿಸುವುದು ಖಚಿತವಾಗಿದೆ. ನಾಳೆ ಜೆಡಿಎಸ್ ಅಭ್ಯರ್ಥಿಗಳ ಎರಡನೆಯ ಪಟ್ಟಿ ಬಿಡುಗಡೆ ಮಾಡಲಿದ್ದು, ಅದರಲ್ಲಿ ಗೀತಾ ಹೆಸರು ನಾಳೆ ಕಾಣಿಸಿಕೊಳ್ಳುವುದು ಖಚಿತವಾಗಿದೆ.

ಇಂದು ಜೆಡಿಎಸ್ ಮುಖಂಡ, ಅಭ್ಯರ್ಥಿ ಗೀತಾ ಅವರ ಸೋದರ ಮಧು ಬಂಗಾರಪ್ಪ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ 'ನಟ ಶಿವರಾಜ್ ಕುಮಾರ್ ಅವರು ಜೆಡಿಎಸ್ ಸೇರಿದಂತೆ ಯಾವುದೇ ಪಕ್ಷ/ಯಾವುದೇ ಅಭ್ಯರ್ಥಿಯ ಪರ ಪ್ರಚಾರ ಮಾಡುವುದಿಲ್ಲ' ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ಈ ಚುನಾವಣೆಗೆ ತಾರಾ ಮೆರಗು ಹಚ್ಚದೆ ತಮ್ಮ ಕುಟುಂಬವು ತಂದೆ ಬಂಗಾರಪ್ಪ ಅವರ ಹೆಸರಿನಲ್ಲಿ ಪ್ರಚಾರ ಕಾರ್ಯ ನಡೆಸುತ್ತದೆ ಎಂದೂ ಮಧು ಹೇಳಿದ್ದಾರೆ.

ಪತ್ನಿ ಗೀತಾ ಪರ ಅಗತ್ಯವಾಗಿ ಪ್ರಚಾರ ನಡೆಸುವೆ

ಪತ್ನಿ ಗೀತಾ ಪರ ಅಗತ್ಯವಾಗಿ ಪ್ರಚಾರ ನಡೆಸುವೆ

ಆದರೆ ಇತ್ತೀಚೆಗೆ, ತಮ್ಮ ಪತ್ನಿ ಗೀತಾ ಅವರು ಚುನಾವಣಾ ಕಣಕ್ಕೆ ಇಳಿಯುವುದನ್ನು ಸಮರ್ಥಿಸಿಕೊಳ್ಳುತ್ತಾ 'ತಮ್ಮ ಪತ್ನಿ ಗೀತಾ ಪರ ಅಗತ್ಯವಾಗಿ ಪ್ರಚಾರ ನಡೆಸುವೆ' ಎಂದು ಸ್ಪಷ್ಟಪಡಿಸಿದ್ದರು.

ಕುಮಾರ್ ಬಂಗಾರಪ್ಪಗೆ ಠೇವಣಿ ನಷ್ಟ- ಮಧು

ಕುಮಾರ್ ಬಂಗಾರಪ್ಪಗೆ ಠೇವಣಿ ನಷ್ಟ- ಮಧು

ಇದೇ ವೇಳೆ 'ತಮ್ಮ ಅಣ್ಣ, ಕಾಂಗ್ರೆಸ್ ಮುಖಂಡ ಕುಮಾರ್ ಬಂಗಾರಪ್ಪ ಅವರ ವಿರುದ್ಧ ಕಿಡಿಕಾರಿದ ಮಧು, ಕುಮಾರ್ ಬಂಗಾರಪ್ಪ ಅವರಿಗೆ ಟಿಕೆಟ್ ನೀಡಿದರೆ ಆತ ಠೇವಣಿ ಕಳೆದುಕೊಳ್ಳುವುದು ನಿಶ್ಚಿತ' ಎಂದು ಮಧು ಕಟಕಿಯಾಡಿದ್ದಾರೆ. ಆದರೆ ಇತ್ತ ಬೆಂಗಳೂರಿನಲ್ಲಿ ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕುಮಾರ್ ಬಂಗಾರಪ್ಪ ಅವರ ಬೆಂಬಲಿಗರು ಕುಮಾರ್ ಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ. (ಗಮನಿಸಿ, ಕಾಂಗ್ರೆಸ್ ಪಕ್ಷವು ಮಂಜುನಾಥ್ ಭಂಡಾರಿ ಅವರಿಗೆ ಈಗಾಗಲೇ ಟಿಕೆಟ್ ಘೋಷಿಸಿದೆ)

ಜಾಫರ್ ಗೆ ಸ್ವಾಗತ ಕೋರಿದ ಜಮೀರ್- ಕುಮಾರಸ್ವಾಮಿ:

ಜಾಫರ್ ಗೆ ಸ್ವಾಗತ ಕೋರಿದ ಜಮೀರ್- ಕುಮಾರಸ್ವಾಮಿ:

ಕಾಂಗ್ರೆಸ್ಸಿನಿಂದ ವಿಮುಖವಾಗಿರುವ ಹಿರಿಯ ನಾಯಕ ಜಾಫರ್ ಷರೀಫ್ ಅವರು ಇಂದು ಪದ್ಮನಾಭನಗರದತ್ತ ಹೆಜ್ಜೆ ಹಾಕಿದ್ದು, ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್ ಡಿ ದೇವೇಗೌಡರನ್ನು ಭೇಟಿ ಮಾಡಿ, ಪಕ್ಷ ಸೇರ್ಪಡೆ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಾತನಾಡಿರುವ ಚಾಪಮರಾಪೇಟೆ ಶಾಸಕ ಜಮೀರ್ ಅಹಮದ್ ಮತ್ತು ಎಚ್ ಡಿ ಕುಮಾರಸ್ವಾಮಿ ಅವರುಗಳು ಹಿರಿಯ ನಾಯಕ ಜಾಫರ್ ಅವರು ತಮ್ಮ ಪಕ್ಷಕ್ಕೆ ಸೇರ್ಪಡೆಯಾದರೆ ಸ್ವಾಗತಿಸುವುದಾಗಿ ಪ್ರತಿಕ್ರಿಯಿಸಿದ್ದಾರೆ.

'ಹಿರಿಯ ಮುಖಂಡ ಜಾಫರ್ ಷರೀಫ್ ಅವರನ್ನು ಕಾಂಗ್ರೆಸ್ ಪಕ್ಷವು ಹೀನಾಯವಾಗಿ ನಡೆಸಿಕೊಂಡಿದೆ. ಅವರಿಗೆ ಟಿಕೆಟ್ ಸಹ ನೀಡಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದ ಶಾಸಕ ಜಮೀರ್ ಅವರು 'ಜಾಫರ್ ತಮ್ಮ ಪಕ್ಷಕ್ಕೆ ಬರುವುದರಿಂದ ನಮಗೆ ಆನೆಬಲ ಬಂದಂತಾಗುತ್ತದೆ' ಎಂದರು.

ಚಿಕ್ಕಬಳ್ಳಾಪುರ: ವೀರಪ್ಪ ಮೊಯ್ಲಿ vs ಎಚ್ ಡಿ ಕುಮಾರಸ್ವಾಮಿ

ಚಿಕ್ಕಬಳ್ಳಾಪುರ: ವೀರಪ್ಪ ಮೊಯ್ಲಿ vs ಎಚ್ ಡಿ ಕುಮಾರಸ್ವಾಮಿ

ಕುತೂಹಲಕಾರಿ ಬೆಳವಣಿಗೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರ ವಿರುದ್ಧ ರಾಮನಗರ ಶಾಸಕ ಎಚ್ ಡಿ ಕುಮಾರಸ್ವಾಮಿ ಅವರು ಸ್ಪರ್ಧಿಸುವ ಮಾತುಗಳು ಮತ್ತೆ ಕೇಳಿಬಂದಿವೆ. ಗಮನಿಸಿ, ಬಿಜೆಪಿಯಿಂದ ಮಾಜಿ ಜೆಡಿಎಸ್ ನಾಯಕ ಬಚ್ಚೇಗೌಡ ಅವರು ಕಣಕ್ಕಿಳಿದಿದ್ದಾರೆ.

English summary
Lok Sabha Polls 2014- Kannada Actor Shivarajkumar wont campaign for Shimoga JDS candidate Geetha says Madhu Bangarappa, JDS leader and Geetha's young brother. In the meanwhile according to sources HD Kumaraswamy may be fielded in Chickballapur constituency against Union Minister Veerappa Moily.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X