ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ,ಭದ್ರಾವತಿಯಲ್ಲಿ ಎಸಿಬಿ ದಾಳಿ; ದಾಖಲೆಗಳ ಪರಿಶೀಲನೆ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಡಿಸೆಂಬರ್ 31; ಶಿವಮೊಗ್ಗ ಹಾಗೂ ಭದ್ರಾವತಿಯ ಹಲವು ಕಡೆಗಳಲ್ಲಿ ಗುರುವಾರ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸರ್ಕಾರಿ ಅಧಿಕಾರಿ ವಿರುದ್ಧ ಬಂದಿದ್ದ ದೂರುಗಳನ್ನು ಆದರಿಸಿ ದಾಳಿ ಮಾಡಿದ್ದು, ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.

ಭ್ರಷ್ಟಾಚಾರ ನಿಗ್ರಹ ದಳದ ದಾವಣಗೆರೆ ಎಸ್‌ಪಿ ಜಯಪ್ರಕಾಶ್, ಶಿವಮೊಗ್ಗ ಎಸಿಬಿ ಡಿವೈಎಸ್‌ಪಿ ಜೆ. ಲೋಕೇಶ್, ದಾವಣಗೆರೆ ಡಿವೈಎಸ್‌ಪಿ ಪರಮೇಶ್ವರ್, ಪೊಲೀಸ್ ನಿರೀಕ್ಷಕ ವೀರೇಶ್ ನೇತೃತ್ವದ ತಂಡ ಹಲವು ಕಡೆಗಳಲ್ಲಿ ಏಕಕಾಲಕ್ಕೆ ದಾಳಿಯನ್ನು ನಡೆಸಿದೆ.

ಮೈಸೂರು: ಲಂಚ ಪಡೆಯುತ್ತಿದ್ದ ವೇಳೆ‌ ಪುರಸಭೆ ಮುಖ್ಯಾಧಿಕಾರಿ ಎಸಿಬಿ ಬಲೆಗೆ ಮೈಸೂರು: ಲಂಚ ಪಡೆಯುತ್ತಿದ್ದ ವೇಳೆ‌ ಪುರಸಭೆ ಮುಖ್ಯಾಧಿಕಾರಿ ಎಸಿಬಿ ಬಲೆಗೆ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸುರೇಶ್‌ಗೆ ಸೇರಿದ ಒಟ್ಟು ನಾಲ್ಕು ಕಡೆಗಳಲ್ಲಿ ದಾಳಿ ನಡೆದಿದೆ. ಶಿವಮೊಗ್ಗ ನಗರದ ಗುಂಡಪ್ಪ ಶೆಡ್‌ನ ನಿವಾಸ, ಗೋಪಾಲ ಗೌಡ ಬಡಾವಣೆಯಲ್ಲಿನ ನಿವಾಸ, ಭದ್ರಾವತಿಯ ಹುಣಸೇಕಟ್ಟೆಯ ತೋಟದ ಮನೆಯ ಮೇಲೆ ದಾಳಿ ಮಾಡಲಾಗಿದೆ.

ಮೈಸೂರು; ಭ್ರಷ್ಟ ಅಧಿಕಾರಿಗಳಿಗೆ ನಡುಕ ಹುಟ್ಟಿಸಿದ ಎಸಿಬಿ ಮೈಸೂರು; ಭ್ರಷ್ಟ ಅಧಿಕಾರಿಗಳಿಗೆ ನಡುಕ ಹುಟ್ಟಿಸಿದ ಎಸಿಬಿ

ACB Conducts Raid On House Of Deputy Director

ಶಿವಮೊಗ್ಗದ ಆಲ್ಕೊಳದಲ್ಲಿರುವ ಇಲಾಖೆಯ ಕಚೇರಿಯಲ್ಲೂ ಸಹ ಅಧಿಕಾರಿಗಳ ತಂಡ ಪರಿಶೀಲನೆಯನ್ನು ನಡೆಸಿದೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ದಾಳಿಯನ್ನು ಮಾಡಲಾಗಿದೆ.

ಎಸಿಬಿ ದಾಳಿಯಲ್ಲಿ ಸಿಗಬೇಕಿದ್ದ ನೋಟುಗಳು ಗಾಳಿಯಲ್ಲಿ ಹಾರಾಟಎಸಿಬಿ ದಾಳಿಯಲ್ಲಿ ಸಿಗಬೇಕಿದ್ದ ನೋಟುಗಳು ಗಾಳಿಯಲ್ಲಿ ಹಾರಾಟ

English summary
The Anti Corruption Bureau police have conducted raid on the residence of women and child development deputy director house in Shivamogga and Bhadravati.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X