ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂ ತವರೂರು ಶಿವಮೊಗ್ಗದಲ್ಲಿ ವಿದ್ಯಾರ್ಥಿಗಳಿಗೆ ಇದೆಂತಹ ಪರಿಸ್ಥಿತಿ!

|
Google Oneindia Kannada News

ಶಿವಮೊಗ್ಗ, ಫೆಬ್ರವರಿ 04: ಮುಖ್ಯಮಂತ್ರಿಗಳ ತವರು ಜಿಲ್ಲೆಯಾದ ಶಿವಮೊಗ್ಗ ನಗರದ ಜಿಎಸ್ಪಿಎಲ್ ಸ್ಕ್ಯಾವೆಂಜರ್ಸ್ ಕಾಲೋನಿ ಶಾಲೆಯ ಮಕ್ಕಳು ಪ್ರತಿನಿತ್ಯ ಚರಂಡಿ ವಾಸನೆಯನ್ನು ಕುಡಿಯಬೇಕಾದ ಪರಿಸ್ಥಿತಿ ಬಂದಿದೆ.

ಶಿವಮೊಗ್ಗ ನಗರದ ಜಿಎಸ್ಪಿಎಲ್ ಸ್ಕ್ಯಾಂವೆಂಜರ್ಸ್ ಕಾಲೋನಿಯಲ್ಲಿ ಸರ್ಕಾರಿ ಶಾಲೆಯಿದ್ದು, ಪಕ್ಕದಲ್ಲಿಯೇ ಅತ್ಯಂತ ಕೆಟ್ಟವಾಸನೆಯಿಂದ ಕೂಡಿದ ಚರಂಡಿ ಇದೆ. ಇದರ ಬಗ್ಗೆ ನಗರ ಪಾಲಿಕೆಯಾಗಲಿ, ಶಿಕ್ಷಣ ಇಲಾಖೆಯಾಗಲಿ ಗಮನ ಹರಿಸಿಲ್ಲ ಎಂಬುದು ಮಕ್ಕಳ ಪಾಲಕರ ಆರೋಪವಾಗಿದೆ.

A Drainage Passes Through GSPL Scavengers Colony School In Shivamogga

"ಬಜೆಟ್ ನಲ್ಲಿ ನನ್ನ ಇಲಾಖೆಗೆ ಸಾಕಷ್ಟು ಅನುದಾನ ಸಿಕ್ಕಿದೆ"; ಕೆ.ಎಸ್.ಈಶ್ವರಪ್ಪ

ವಿದ್ಯಾರ್ಥಿಯ ಪಾಲಕರಾದ ಪೆಂಚಾಲಯ್ಯ ಎಂಬುವವರು ಶಾಲೆಯ ಪರಿಸ್ಥಿತಿ ಮಾತನಾಡಿದ್ದು, ""ಶಾಲೆಯ ಪಕ್ಕದಲ್ಲಿಯೇ ಒಳಚರಂಡಿ ಹಾದುಹೋಗುತ್ತದೆ ನನ್ನ ಮಗು ಸೇರಿದಂತೆ ಹಲವು ಮಕ್ಕಳು ಇಲ್ಲಿ ಅಧ್ಯಯನ ಮಾಡುತ್ತಿದ್ದಾರೆ.

A Drainage Passes Through GSPL Scavengers Colony School In Shivamogga

ಎರಡು ಶೌಚಾಲಯಗಳ ಮಾನವನ ಮಲವಿಸರ್ಜನೆಯು ಒಳಚರಂಡಿಯಲ್ಲಿ ತೇಲುತ್ತದೆ. ಶಾಲೆಯು ದುರ್ವಾಸನೆ ಬೀರುತ್ತದೆ ಮತ್ತು ಒಳಚರಂಡಿಯಿಂದಾಗಿ ವಿದ್ಯಾರ್ಥಿಗಳು ಹೆಚ್ಚಾಗಿ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ಹೇಳಿದ್ದಾರೆ.

A Drainage Passes Through GSPL Scavengers Colony School In Shivamogga

ಆಗುಂಬೆಯ ದಟ್ಟಕಾಡಿನಲ್ಲಿ ಹೆಣ್ಣು ಮಗು ಪತ್ತೆ.! ಮುಂದೆ ಆಗಿದ್ದೇನು?ಆಗುಂಬೆಯ ದಟ್ಟಕಾಡಿನಲ್ಲಿ ಹೆಣ್ಣು ಮಗು ಪತ್ತೆ.! ಮುಂದೆ ಆಗಿದ್ದೇನು?

ಶೌಚಾಲಯ ಸಂಪರ್ಕವನ್ನು ಕಡಿತಗೊಳಿಸಬೇಕು ಮತ್ತು ಶಾಲೆಯ ಪಕ್ಕದಲ್ಲಿರುವ ಚರಂಡಿಗೆ ಹಾಸುಗಲ್ಲು ಹಾಕಬೇಕು, ಮಕ್ಕಳಿಗೆ ರೋಗ ಹರಡದಂತೆ ಶಾಲೆಯ ಸುತ್ತಮುತ್ತ ಸ್ವಚ್ಛತೆಗೆ ಆದ್ಯತೆ ನೀಡಬೇಕು'' ಎಂದಿದ್ದಾರೆ.

English summary
The GSPL scavengers Colony school children had forced to smell drainage in Shimoga city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X