ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗದ ಶಾಲಾ ಹಾಸ್ಟೆಲ್ ನಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜನವರಿ 20: ಶಿವಮೊಗ್ಗದ ಪ್ರತಿಷ್ಠಿತ ಶಾಲೆಯೊಂದರ ಹಾಸ್ಟೆಲ್ ಸ್ಟೋರ್ ರೂಂನಲ್ಲಿ ವಿದ್ಯಾರ್ಥಿನಿಯೊಬ್ಬಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

ನಗರದ ಮೇರಿ ಇಮ್ಯಾಕ್ಯುಲೇಟ್ ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಕಾವ್ಯಾ (15) ಹಾಸ್ಟೆಲ್ ಸ್ಟೋರ್ ರೂಂನಲ್ಲಿ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

 ಮಗುವಿಗೆ ಹೊಡೆಯಬೇಡ ಎಂದದ್ದಕ್ಕೆ ಹೆಂಡತಿ ಹೀಗೇಕೆ ಮಾಡಿಕೊಂಡಳು ಮಗುವಿಗೆ ಹೊಡೆಯಬೇಡ ಎಂದದ್ದಕ್ಕೆ ಹೆಂಡತಿ ಹೀಗೇಕೆ ಮಾಡಿಕೊಂಡಳು

ಈಕೆಯ ತಂದೆ ತಾಯಿ ಶಿಕಾರಿಪುರದಲ್ಲಿ ವಾಸವಾಗಿದ್ದು, ನಾಲ್ಕನೇ ತರಗತಿಯಿಂದ ಕಾವ್ಯಾ ಈ ಶಾಲೆಯಲ್ಲಿ ಓದುತ್ತಿದ್ದಳು. ತಾಯಿ ಆಶಾ ಬಾಯಿ ಅಲ್ಲಿನ ಬಿಸಿಎಂ ಹಾಸ್ಟೆಲ್ ನಲ್ಲಿ ಅಡುಗೆ ಕೆಲಸ ಮಾಡಿಕೊಂಡು ಮಗಳನ್ನು ಓದಿಸುತ್ತಿದ್ದರು.

9th Standard Student Committed Suicide In Shivamogga Hostel

ಈ ಆತ್ಮಹತ್ಯೆ ಕುರಿತು ಕಾವ್ಯಾ ಪೋಷಕರು ಶಾಲೆಯ ಆಡಳಿತ ಮಂಡಳಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. 15 ದಿನದ ಹಿಂದೆ ಆಕೆಯ ಅಣ್ಣಂದಿರು ಬಂದು ಯೋಗ ಕ್ಷೇಮ ವಿಚಾರಿಸಿಕೊಂಡು ಹೋಗಿದ್ದಾರೆ. ಆಗ ಯಾವ ವಿಷಯವನ್ನೂ ಹಂಚಿಕೊಂಡಿರಲಿಲ್ಲ. ಈಗ ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನುತ್ತಿದ್ದಾರೆ. ಈ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
A 9th standard student committed suicide by hanging herself in the hostel store room of a prestigious school in Shivamogga last night,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X