ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ಯಾಕ್ಟೀರಿಯಾ ಸೋಂಕು; ಶಿಕಾರಿಪುರದಲ್ಲಿ ರಾತ್ರಿ ಕಳೆದು ಬೆಳಗಾಗುವುದರಲ್ಲಿ 60 ಕುರಿಗಳು ಸಾವು

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿಕಾರಿಪುರ, ಅಕ್ಟೋಬರ್ 18: ಬ್ಯಾಕ್ಟೀರಿಯಾ ಸೋಂಕಿಗೆ ತುತ್ತಾಗಿ 60ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಶಿಕಾರಿಪುರ ತಾಲೂಕಿನ ಯರೆಕಟ್ಟೆ ಗ್ರಾಮದ ಬಳಿ ಇಂದು ಮುಂಜಾನೆ ನಡೆದಿದೆ.

ಸಂಚಾರಿ ಕುರಿಗಾರರು ನಿನ್ನೆ ರಾತ್ರಿ ಶಿಕಾರಿಪುರ ತಾಲೂಕಿನ ಯರೆಕಟ್ಟೆ ಬಳಿ ಕುರಿಗಳೊಂದಿಗೆ ತಂಗಿದ್ದರು. ಬೆಳಿಗ್ಗೆ ಅವನ್ನು ಮೇಯಿಸಲು ಹೋಗಿದ್ದ ಸಂದರ್ಭ ಒಂದಾದ ಮೇಲೊಂದು ಕುರಿಗಳು ಸಾವನ್ನಪ್ಪಿವೆ. ಸರಿಸುಮಾರು 65ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಬೆಂಕಿಯಲ್ಲಿ ಸುಟ್ಟು ಕರಕಲಾದವು ಮೇಯುತ್ತಿದ್ದ 300 ಕುರಿಗಳುಬೆಂಕಿಯಲ್ಲಿ ಸುಟ್ಟು ಕರಕಲಾದವು ಮೇಯುತ್ತಿದ್ದ 300 ಕುರಿಗಳು

ಘಟನಾ ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳ ತಂಡ ಧಾವಿಸಿ ಕುರಿಗಳ ಸಾವಿನ ಕುರಿತು ಪರೀಕ್ಷೆ ನಡೆಸಿದೆ. ಪ್ರಯೋಗಾಲಯದ ತಜ್ಞರು ಈ ಕುರಿಗಳ ಸಾವಿಗೆ (ಎಂಟರೋಟಾಕ್ಸಿಮಿಯ) ಕರಳುಬೇನೆ ಬ್ಯಾಕ್ಟೀರಿಯಾ ಕಾರಣ ಎಂದಿದ್ದಾರೆ. ಈ ಬ್ಯಾಕ್ಟೀರಿಯಾ ಸೋಂಕಿನಿಂದಾಗಿ ಕುರಿಗಳ ಕರುಳಿನಲ್ಲಿ ರಕ್ತಸ್ರಾವ ಉಂಟಾಗಿ ಕುರಿಗಳು ಸಾವನ್ನಪ್ಪಿವೆ ಎಂದು ತಿಳಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಉಳಿದ ಕುರಿಗಳಿಗೆ ಆಂಟಿ ಬಯೋಟಿಕ್ ಚುಚ್ಚುಮದ್ದು ನೀಡಲಾಗಿದೆ. ಗುರುವಾರ ಕೂಡ ನ್ಯಾಮತಿ ತಾಲೂಕಿನ ಜಯನಗರ ಗ್ರಾಮದಲ್ಲಿ ಇದೇ ಸಮಸ್ಯೆಯಿಂದ ನೂರಾರು ಕುರಿಗಳು ಸಾವನ್ನಪ್ಪಿದ್ದವು.

60 Sheep Death By Bacterial Infection In Shikaripura

ಈ ಕುರಿತು ಪ್ರತಿಕ್ರಿಯಿಸಿರುವ ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕರಾದ ಡಾ.ಜಯಣ್ಣ, "ಈಗಾಗಲೇ 68ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ್ದು ಇನ್ನುಳಿದ ಕುರಿಗಳಿಗೆ ಚುಚ್ಚು ಮದ್ದು ನೀಡಲಾಗಿದೆ. ಪಶು ಸಂಗೋಪನಾ ಇಲಾಖೆ ವತಿಯಿಂದ ಸಾವನ್ನಪ್ಪಿದ ಒಂದು ಕುರಿಗೆ 5000 ಸಾವಿರ ಪರಿಹಾರ ನೀಡಲು ಅವಕಾಶವಿದೆ. ತಹಶೀಲ್ದಾರ್ ಹಾಗೂ ತಾಲೂಕ್ ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿಗಳ ಬಳಿ ಚರ್ಚಿಸಿ ಪರಿಹಾರ ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದರು.

English summary
More than 60 sheeps have died after being infected with a bacterial infection at Yerekatte village in Shikaripura taluk this morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X