ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಟವಾಡಬೇಕಾದ ವಯಸ್ಸಿನಲ್ಲಿ ವಿಚಿತ್ರ ಕಾಯಿಲೆ; ನೆರವಿಗೆ ಪೋಷಕರ ಮನವಿ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಅಕ್ಟೋಬರ್ 15: ಮನುಷ್ಯನ ದೇಹದಲ್ಲಿ ರಕ್ತದ ಪ್ರಮಾಣ ಸ್ವಲ್ಪ ಕಡಿಮೆಯಾದರೂ ಪ್ರಾಣಕ್ಕೆ ಅಪಾಯ ಎನ್ನುತ್ತಾರೆ ವೈದ್ಯರು. ಆದರೆ, ಈ ಬಾಲಕಿ ದೇಹದಲ್ಲಿ ರಕ್ತವೇ ಉತ್ಪತ್ತಿಯಾಗುತ್ತಿಲ್ಲ. ತಿಂಗಳ ಮಗುವಿದ್ದಾಗಲೇ ಈಕೆಯ ದೇಹದಲ್ಲಿ ರಕ್ತ ಉತ್ಪಾದನೆ ನಿಂತು ಹೋಗಿದೆ. ಇದ್ದಕ್ಕಿದ್ದಂತೆ ಊಟ ತಿಂಡಿ ಬಿಟ್ಟು ನೋವಿನಿಂದ ಬಳಲುತ್ತಿದ್ದ ಮಗಳ ವರ್ತನೆ ಕಂಡು ಪೋಷಕರು ಆಸ್ಪತ್ರೆ ಮೆಟ್ಟಿಲೇರಿದಾಗ ಇವಳಿಗೆ ದೇಹದಲ್ಲಿ ರಕ್ತ ಉತ್ಪತ್ತಿಯೇ ಆಗದ ವಿಚಿತ್ರ ಕಾಯಿಲೆ ಇದೆ ಎಂಬುದು ತಿಳಿದುಬಂದಿದೆ.

Recommended Video

ಪ್ರಶಂಸೆಗೆ ಕಾರಣವಾಯ್ತು ಕುಮಾರಸ್ವಾಮಿ ನಡೆ..!

ಶಿಕಾರಿಪುರ ತಾಲೂಕಿನ ಕಿಟ್ಟದಹಳ್ಳಿ ನಿವಾಸಿ ಮಂಜಪ್ಪ ಹಾಗೂ ಲಕ್ಷ್ಮಿ ದೇವಿ ದಂಪತಿ ಮಗಳಾದ ಹೇಮಾವತಿ ಈ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಬಾಲಕಿ. ಈಕೆಯ ದೇಹದಲ್ಲಿ ರಕ್ತ ಉತ್ಪಾದನೆ ನಿಂತು ಸುಮಾರು ಆರು ವರ್ಷಗಳೇ ಕಳೆದಿವೆ. ರಕ್ತ ಹೀನತೆಯಿಂದ ಒದ್ದಾಡುವ ಮಗಳ ಸಂಕಟ ನೋಡಲಾಗದೇ ಆಕೆಯ ಪೋಷಕರು ಅಲೆದಾಡದ ಆಸ್ಪತ್ರೆಗಳಿಲ್ಲ. ಆದರೆ ಸೂಕ್ತ ಚಿಕಿತ್ಸೆ ಸಿಗದೆ ಕಂಗಾಲಾಗಿದ್ದಾರೆ. ನಾನಾ ಪ್ರಯತ್ನದ ನಡುವೆಯೂ ಈ ಸಮಸ್ಯೆ ಗುಣಮುಖವಾಗದಿರುವುದು ವೈದ್ಯರಿಗೂ ಸವಾಲಾಗಿದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆ ಕೊಡಿಸುವಂತೆ ಸೂಚಿಸಿದ್ದಾರೆ.

ಕೂಲಿ ಕೆಲಸ ಮಾಡುವ ಯುವಕ ಮಕ್ಕಳ ಚಿಕಿತ್ಸೆಗೆ ಕೊಟ್ಟದ್ದು ಮೂವತ್ತೈದು ಲಕ್ಷಕೂಲಿ ಕೆಲಸ ಮಾಡುವ ಯುವಕ ಮಕ್ಕಳ ಚಿಕಿತ್ಸೆಗೆ ಕೊಟ್ಟದ್ದು ಮೂವತ್ತೈದು ಲಕ್ಷ

20 ದಿನಕ್ಕೊಮ್ಮೆ ರಕ್ತ: ಹೇಮಾವತಿಯ ದೇಹದಲ್ಲಿ ರಕ್ತ ಉತ್ಪಾದನೆ ಆಗದಿರುವುದರಿಂದ ಪ್ರತಿ 20 ದಿನಕ್ಕೊಮ್ಮೆ ರಕ್ತ ಕೊಡಿಸುವಂತೆ ವೈದ್ಯರು ಸೂಚಿಸಿದ್ದಾರೆ. ಆದರೆ, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಮಂಜಪ್ಪ ಅವರ ಕುಟುಂಬ ಪ್ರತಿ ತಿಂಗಳು ಮಗಳಿಗೆ ರಕ್ತ ಕೊಡಿಸುವುದಕ್ಕಾಗಿ 4 ಸಾವಿರಕ್ಕೂ ಖರ್ಚು ಮಾಡಬೇಕಿದೆ. 6 ವರ್ಷದಿಂದ ರಕ್ತ ಕೊಡಿಸಲಾಗುತ್ತಿದ್ದು, ಇಲ್ಲಿಯವರೆಗೆ ಸುಮಾರು 3 ಲಕ್ಷಕ್ಕೂ ಖರ್ಚಾಗಿದೆ. ಆಪರೇಷನ್ ಗೆ 32 ಲಕ್ಷ ಅಗತ್ಯವಿದೆ.

6 Year Old Girl Suffering From Rare Blood Disease And Need Help

"ನಾವು ಕೂಲಿಯಿಂದ ಜೀವನ ಸಾಗಿಸುತ್ತಿದ್ದೇವೆ. ಒಂದು ದಿನ ಕೂಲಿಗೆ ಹೋಗದಿದ್ದರೆ ಜೀವನವೇ ಕಷ್ಟ. ಹೇಗಾದರೂ ಮಾಡಿ ಮಗಳಿಗೆ ಪ್ರತೀ ತಿಂಗಳು ರಕ್ತ ಹೊಂದಿಸಬೇಕು. ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗಲಿಲ್ಲ. ಹೀಗಾಗಿ ನಾವು ಖಾಸಗಿ ಆಸ್ಪತ್ರೆಗೆ ಹೋದೆವು. ಮಗಳ ಚಿಕಿತ್ಸೆಗಾಗಿ ಈಗಾಗಲೇ ಸಾಕಷ್ಟು ಹಣ ಖರ್ಚು ಮಾಡಿದ್ದೇವೆ. ಮಗು ಸಂಪೂರ್ಣ ಗುಣವಾಗಬೇಕಿದ್ದರೆ ಆಪರೇಷನ್ ಮಾಡಬೇಕು. ಇದಕ್ಕೆ 32 ಲಕ್ಷ ರೂ. ಹಣ ಬೇಕು ಎನ್ನುತ್ತಾರೆ ವೈದ್ಯರು. ಹೊಟ್ಟೆಪಾಡೇ ಕಷ್ಟವಾಗಿರುವಾಗಿರುವಾಗ ಇಷ್ಟೊಂದು ಹಣ ಎಲ್ಲಿಂದ ತರುವುದು? ನಮಗೆ ಸಹಾಯ ಬೇಕು" ಎಂದು ತಂದೆ ಮಂಜಪ್ಪ ಮನವಿ ಮಾಡಿದ್ದಾರೆ.

'ನನ್ನ ಕೈ ಕತ್ತರಿಸಿ, ನೋವಿನಿಂದ ಮುಕ್ತಿ ಕೊಡಿ' ಎಂದ ಟ್ರೀಮ್ಯಾನ್ ಸಿಂಡ್ರೋಮ್ ರೋಗಿ'ನನ್ನ ಕೈ ಕತ್ತರಿಸಿ, ನೋವಿನಿಂದ ಮುಕ್ತಿ ಕೊಡಿ' ಎಂದ ಟ್ರೀಮ್ಯಾನ್ ಸಿಂಡ್ರೋಮ್ ರೋಗಿ

ವಿಚಿತ್ರ ಕಾಯಿಲೆಗೆ ಒಳಗಾಗಿರುವ ಈ ಬಾಲಕಿಯ ನೆರವಿಗೆ ಸಹಾಯ ಹಸ್ತ ಚಾಚಬೇಕಿದೆ. ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್, ಶಿಕಾರಿಪುರ ಶಾಖೆ, ಖಾತೆ ಸಂಖ್ಯೆ: 10803101013296, ಐಎಫ್ಎಸ್ ಸಿ ಕೋಡ್: ಪಿಕೆಜಿಬಿ 0010803 ಇಲ್ಲಿಗೆ ಕಳಿಸಬಹುದು ಮತ್ತು ಹೆಚ್ಚಿನ ಮಾಹಿತಿಗೆ 8151073504 ಸಂಪರ್ಕಿಸುವಂತೆ ಕೋರಿದ್ದಾರೆ.

English summary
Hemavathi, daughter of Manjappa and Lakshmi Devi, a resident of Kittadahalli in Shikharipura Taluk suffering from strange disease. Her parents requester for treatment money.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X