ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೀರೂರು-ಶಿವಮೊಗ್ಗ-ತಾಳಗುಪ್ಪ ರೈಲ್ವೇ ವಿದ್ಯುದ್ದೀಕರಣಕ್ಕೆ 25 ಕೋಟಿ

|
Google Oneindia Kannada News

Recommended Video

B Y ರಾಘವೇಂದ್ರ ಮಾತಿಗೆ ಮಣಿದ ನರೇಂದ್ರ ಮೋದಿ | Narendra Modi | BJP | Oneindia Kannada

ಶಿವಮೊಗ್ಗ, ಫೆಬ್ರವರಿ 12: ಬೀರೂರು-ಶಿವಮೊಗ್ಗ-ತಾಳಗುಪ್ಪ ರೈಲು ಮಾರ್ಗದ ವಿದ್ಯುದ್ದೀಕರಣ ಯೋಜನೆಗೆ ಕೇಂದ್ರ ಸರ್ಕಾರವು 25 ಕೋಟಿ ರೂ, ಮಂಜೂರು ಮಾಡಿದೆ.

2020-21 ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಈ ಮಾರ್ಗದ ರೈಲ್ವೇ ವಿದ್ಯುದ್ದೀಕರಣ ಕಾಮಗಾರಿಗಾಗಿ 25 ಕೋಟಿ ರೂ.ಗಳನ್ನು ಘೋಷಿಸಲಾಗಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.

ಶಿವಮೊಗ್ಗ-ಯಶವಂತಪುರ ಹೊಸ ರೈಲು; ವೇಳಾಪಟ್ಟಿಶಿವಮೊಗ್ಗ-ಯಶವಂತಪುರ ಹೊಸ ರೈಲು; ವೇಳಾಪಟ್ಟಿ

ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಘವೇಂದ್ರ, ""ನಾನು ಸಂಸದನಾದ ಬಳಿಕ ಶಿವಮೊಗ್ಗಕ್ಕೆ ಹಲವು ರೈಲುಗಳನ್ನು ತರಲು ಶ್ರಮ ವಹಿಸಲಾಗಿತ್ತು. ಅದರ ಪರಿಣಾಮವಾಗಿ ಹಲವು ರೈಲುಗಳು ಲಭ್ಯವಾಗಿವೆ. ಮಲೆನಾಡಿನೊಂದಿಗೆ ಮಧ್ಯ ಮತ್ತು ಉತ್ತರ ಕರ್ನಾಟಕಕ್ಕೆ ನೇರ ಸಂಪರ್ಕ ಕಲ್ಪಿಸುವ ಪ್ರಯತ್ನದಲ್ಲೂ ಯಶಸ್ವಿಯಾಗಿದೆ ಎಂದು ತಿಳಿಸಿದರು.

25 Crore Grant For Electrification of Biruru-Shivamogga-Talaguppa railway

ಇದರ ಪರಿಣಾಮವಾಗಿಯೇ ಈಗಾಗಲೇ ಶಿವಮೊಗ್ಗ-ಶಿಕಾರಿಪುರ-ರಾಣೇಬೆನ್ನೂರು ಹಾಗೂ ಶಿವಮೊಗ್ಗ-ಹರಿಹರ ನೂತನ ರೈಲು ಮಾರ್ಗಗಳು ಮಂಜೂರು ಆಗಿದ್ದು ಯೋಜನೆಗಳು ಅನುಷ್ಠಾನದ ಹಂತದಲ್ಲಿವೆ ಎಂದರು.

ರೈಲ್ವೆ ಇಲಾಖೆಯಿಂದ ಶಿವಮೊಗ್ಗಕ್ಕೆ ಮತ್ತೊಂದು ಕೊಡುಗೆರೈಲ್ವೆ ಇಲಾಖೆಯಿಂದ ಶಿವಮೊಗ್ಗಕ್ಕೆ ಮತ್ತೊಂದು ಕೊಡುಗೆ

ಬೀರೂರು-ಶಿವಮೊಗ್ಗ-ತಾಳಗುಪ್ಪ ಮಾರ್ಗವನ್ನು ವಿದ್ಯುದ್ದೀಕರಣಗೊಳಿಸಬೇಕು ಎಂಬ ಒತ್ತಾಸೆಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ಇದರಿಂದ ಈ ಭಾಗದ ರೈಲುಗಳು ವಿದ್ಯುತ್ ಎಂಜಿನ್‍ಗಳ ಸಹಾಯದಿಂದ ಚಲಿಸಲಿವೆ. ಇದರಿಂದ ರೈಲುಗಳ ವೇಗ ಹೆಚ್ಚಾಗಲಿದ್ದು, ಮಾಲಿನ್ಯ ರಹಿತ ರೈಲು ಸಂಚಾರ ಸಾಕಾರಗೊಳ್ಳಲಿದೆ ಎಂದು ಹೇಳಿದರು.

25 Crore Grant For Electrification of Biruru-Shivamogga-Talaguppa railway

ನಮ್ಮ ಬೇಡಿಕೆಗೆ ಸ್ಪಂದಿಸಿದ ಪ್ರಧಾನಿ ನರೇಂದ್ರ ಮೋದಿ, ಇದಕ್ಕೆ ಸಹಕರಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರೈಲ್ವೆ ಸಚಿವರಾದ ಪಿಯುಶ್ ಗೋಯಲ್, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಸಂಸದ ಬಿ.ವೈ.ರಾಘವೇಂದ್ರ ಧನ್ಯವಾದ ತಿಳಿಸಿದರು.

English summary
The central government has sanctioned Rs 25 crore for the electrification project of the Biruru-Shivamogga-Talaguppa railway line.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X