• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚನ್ನಹಳ್ಳಿ ಗ್ರಾಮದ ಜಮೀನಿನಲ್ಲಿ ತಂತಿ ಬೇಲಿ ವಿದ್ಯುತ್ ಶಾಕ್, ಎರಡು ಕಾಡಾನೆಗಳು ಸಾವು

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಸೆಪ್ಟೆಂಬರ್‌ 26: ಜಮೀನಿಗೆ ಹಾಕಿದ್ದ ವಿದ್ಯುತ್ ತಂತಿ ಬೇಲಿ ಸ್ಪರ್ಶಿಸಿ ಎರಡು ಕಾಡಾನೆಗಳು ಸಾವನ್ನಪ್ಪಿವೆ. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಜಮೀನು ಮಾಲೀಕನನ್ನು ವಶಕ್ಕೆ ಪಡೆಯದು, ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಆಯನೂರು ಸಮೀಪದ ಚನ್ನಹಳ್ಳಿ ಗ್ರಾಮದ ಜಮೀನಿನಲ್ಲಿ ಘಟನೆ ಸಂಭವಿಸಿದೆ. ಎರಡು ಗಂಡು ಕಾಡಾನೆಗಳು ಜೋಳ ಹಾಕಿದ್ದ ಜಮೀನಿಗೆ ನುಗ್ಗಲು ಯತ್ನಿಸಿವೆ. ಈ ಸಂದರ್ಭದಲ್ಲಿ ಜಮೀನಿಗೆ ಹಾಕಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಆನೆಗಳು ಸ್ಥಳದಲ್ಲೇ ಮೃತಪಟ್ಟಿವೆ.

ಚನ್ನಹಳ್ಳಿ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಹಂದಿ, ಜಿಂಕೆ ಸೇರಿದಂತೆ ವಿವಿಧ ಪ್ರಾಣಿಗಳು ಜಮೀನಿಗೆ ನುಗ್ಗುತ್ತಿವೆ. ಸುಮಾರು ಒಂದು ವರ್ಷದಿಂದ ಕಾಡಾನೆ ಹಾವಳಿಯೂ ಕೂಡ ಹೆಚ್ಚಾಗಿದೆ. ಕಾಡು ಪ್ರಾಣಿಗಳಿಂದ ತಮ್ಮ ಬೆಳೆ ರಕ್ಷಣೆಗಾಗಿ ರೈತರು ವಿದ್ಯುತ್ ತಂತಿ ಬೇಲಿಗಳನ್ನು ಅಳವಡಿಸಿದ್ದಾರೆ. ಚಂದ್ರಾನಾಯ್ಕ್ ಎಂಬುವವರು ಜಮೀನಿನಲ್ಲಿ ಬೆಳೆದಿದ್ದ ಜೋಳದ ರಕ್ಷಣೆಗೆ ತಂತಿ ಬೇಲಿ ಹಾಕಿ, ನೇರವಾಗಿ ವಿದ್ಯುತ್ ಹರಿಬಿಟ್ಟಿದ್ದರು. ವಿದ್ಯುತ್‌ ತಂತಿ ಸ್ಪರ್ಷಚಾದ ಕಾರಣ ಎರಡು ಗಂಡು ಕಾಡಾನೆಗಳು ಸಾವನ್ನಪ್ಪಿವೆ.

ಶಿವಮೊಗ್ಗ; ತ್ಯಾವರೆಕೊಪ್ಪ ಸಫಾರಿಯ ಹಿರಿಯ ಹುಲಿ ಹನುಮ ಸಾವುಶಿವಮೊಗ್ಗ; ತ್ಯಾವರೆಕೊಪ್ಪ ಸಫಾರಿಯ ಹಿರಿಯ ಹುಲಿ ಹನುಮ ಸಾವು

ಅರಣ್ಯಾಧಿಕಾರಿಗಳ ವಿರುದ್ಧ ಜನರ ಆರೋಪ
ಚನ್ನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ಇದಕ್ಕೆ ಮುಕ್ತಿ ನೀಡುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರು. ಆದರೆ ಈವರೆಗೂ ಯಾವುದೆ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. 'ಬೆಳೆ ಕೈಗೆ ಬಂದರಷ್ಟೆ ನಮ್ಮ ಬದುಕು ನಡೆಯುವುದು. ಕಾಡು ಪ್ರಾಣಿಗಳಿಂದಾಗಿ ಬೆಳೆ ಸಂಪೂರ್ಣ ಹಾಳುಗುತ್ತಿದೆ. ಇದಕ್ಕೆ ಸರ್ಕಾರ ಯಾವುದೇ ಪರಿಹಾರವನ್ನು ಕೊಡುವುದಿಲ್ಲ. ನಮ್ಮ ಬೆಳೆಗಳನ್ನು ನಾವು ರಕ್ಷಣೆ ಮಾಡಿಕೊಳ್ಳುವುದಕ್ಕೆ ತಂತಿ ಬೇಲಿಯನ್ನು ಹಾಕಿಕೊಳ್ಳಬೇಕಾಗಿದೆ. ಇದರಿಂದ ಇದೀಗ ಆನೆಗಳು ಸಾವನ್ನಪ್ಪಿವೆ. ರೈತ ಚಂದ್ರನಾಯ್ಕ ಅವರು ತುಂಬಾ ಕಷ್ಟದಲ್ಲಿದ್ದಾರೆ. ಕೃಷಿಯನ್ನೇ ನಂಬಿಕೊಂಡು ಬದುಕುತ್ತಿರುವ ಆತನ ಕುಟುಂಬದವರ ಭವಿಷ್ಯವೇನು? ಅರಣ್ಯ ಇಲಾಖೆ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲ. ಬದಲಾಗಿ ನಮ್ಮ ಮೇಲೆ ಆಪಾದನೆ ಮಾಡುತ್ತದೆ' ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ದೌಡಾಯಿಸಿದ ಇಲಾಖೆ ಅಧಿಕಾರಿಗಳು
ಜಮೀನಿಗೆ ತಂತಿ ಬೇಲಿ ಅಳವಡಿಕೆಗೆ ಮಾಡಲು ನಿಯಮವಿದೆ. ಆದರೆ ಈ ಭಾಗದಲ್ಲಿ ಬಹುತೇಕ ರೈತರಿಗೆ ನಿಯಮದ ಅರಿವಿಲ್ಲ, ಗೊತ್ತಿದ್ದವರು ಕ್ಯಾರೆ ಅನ್ನುತ್ತಿಲ್ಲ. ನೇರವಾಗಿ ತಂತಿ ಬೇಲಿಗೆ ವಿದ್ಯುತ್ ಕೊಡುತ್ತಿದ್ದಾರೆ. ಇದು ಕಾಡು ಪ್ರಾಣಿಗಳಿಗೆ ಅಷ್ಟೇ ಅಲ್ಲ, ಮನುಷ್ಯರಿಗೂ ಆಪತ್ತು ಉಂಟು ಮಾಡಲಿದೆ.

ತಂತಿ ಬೇಲಿಯಿಂದಾಗಿ ಎರಡು ಕಾಡಾನೆಗಳು ಮೃತಪಟ್ಟಿವೆ. ಈ ವಿಚಾರ ಇದೀಗ ಕಾಡ್ಗಿಚ್ಚಿನಂತೆ ಹಬ್ಬಿದೆ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಕೂಡ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

ಶಿವಮೊಗ್ಗ- ಭದ್ರಾವತಿ ನಡುವೆ ಇರುವುದು ಹೈವೆಯೋ, ಯಮಲೋಕದ ದಾರಿಯೋ?ಶಿವಮೊಗ್ಗ- ಭದ್ರಾವತಿ ನಡುವೆ ಇರುವುದು ಹೈವೆಯೋ, ಯಮಲೋಕದ ದಾರಿಯೋ?

ವಿದ್ಯುತ್ ಕಾಯ್ದೆ ಅಡಿ ಕೇಸ್ ದಾಖಲು?

ಚನ್ನಹಳ್ಳಿ ಗ್ರಾಮಕ್ಕೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಂಕರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿದ್ಯತ್ ಸ್ಪರ್ಶದಿಂದಲೇ ಆನೆಗಳು ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡರು. ಅಲ್ಲದೆ ಆನೆಗಳ ಶವ ಪರೀಕ್ಷೆ ಮತ್ತು ಸಂಸ್ಕಾರಕ್ಕೆ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು.

ಇದೆ ವೇಳೆ ಮಾತನಾಡಿದ ಸಿಸಿಎಫ್ ಶಂಕರ್ ಅವರು, 'ಸುಮಾರು 10 ವರ್ಷದ ಎರಡು ಆನೆಗಳು ತಂತಿ ಬೇಲಿಗೆ ಹಾಕಿದ್ದ ವಿದ್ಯುತ್ ತಾಗಿ ಮೃತಪಟ್ಟಿವೆ. ಕಂಬ ಮತ್ತು ತಂತಿ ಕೂಡ ಸ್ಥಳದಲ್ಲಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕರ ಇದು ಘೋರ ಅಪರಾಧ' ಎಂದು ತಿಳಿಸಿದರು.

2 Wild Elephants Die From Electric Fence Shock at Channahalli Near Ayanuru

ತಂತಿ ಬೇಲಿಗೆ ನೇರವಾಗಿ ವಿದ್ಯುತ್ ಹರಿಸಲಾಗಿದ್ದು, ಆನೆಗಳ ಸಾವಿಗೆ ಇದೆ ಕಾರಣ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಹೇಳುತ್ತಿದ್ದಾರೆ. ಹಾಗಾಗಿ ರೈತ ಚಂದ್ರನಾಯ್ಕ್ ವಿರುದ್ಧ ವಿದ್ಯುತ್ ಕಾಯ್ದೆ ಅಡಿ ಪ್ರಕರಣ ದಾಖಲಿಸಲು ಅರಣ್ಯಾಧಿಕಾರಿಗಳು ಚಿಂತಿಸಿದ್ದಾರೆ. 'ತಂತಿ ಬೇಲಿಗೆ ನೇರವಾಗಿ ವಿದ್ಯುತ್ ಹರಿಸುವುದು ಅಪರಾಧವಾಗಿದೆ. ಹಾಗಾಗಿ ಆರೋಪಿ ವಿರುದ್ಧ ವಿದ್ಯುತ್ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡುತ್ತೇವೆ. ಸೋಲಾರ್ ಮೂಲಕ ತಂತಿ ಬೇಲಿಗೆ ವಿದ್ಯುತ್ ಹರಿಸಬಹುದು. ನೇರವಾಗಿ ಹರಿಸವುದರಿಂದ ವನ್ಯಜೀವಿಗಳಿಗೆ ಸಮಸ್ಯೆ ಉಂಟಾಗಲಿದೆ' ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಂಕರ್ ಅವರು ತಿಳಿಸಿದ್ದಾರೆ.

ಎರಡು ಕಾಡಾನೆಗಳ ಸಾವು ಪ್ರಕರಣ ಈ ಭಾಗದಲ್ಲಿ ತಲ್ಲಣ ಸೃಷ್ಟಿಸಿದೆ. ತಂತಿ ಬೇಲಿಗೆ ನೇರವಾಗಿ ವಿದ್ಯುತ್ ಹರಿಸುವವರಿಗೆ ಇದೀಗ ಆತಂಕ ಮೂಡಿಸಿದೆ.

English summary
Two forest elephants died due to electric shock in Channahalli village land. Forest Department planning to file case under Electricity Act against villager Chandra Naik. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X