ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ; ಮಾಸ್ಕ್ ಕಾರ್ಯಾಚರಣೆ, 2 ಲಕ್ಷ ದಂಡ ಸಂಗ್ರಹ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಮಾರ್ಚ್ 31; ಕೊರೊನಾ ಎರಡನೇ ಅಲೆ ಭೀತಿಯಲ್ಲಿ ರಾಜ್ಯ ಸರ್ಕಾರ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಡ್ಡಾಯಗೊಳಿಸಿದೆ. ಶಿವಮೊಗ್ಗದಲ್ಲಿ ಮಾಸ್ಕ್ ಕಾರ್ಯಾಚರಣೆ ಶುರುವಾಗಿದೆ. ಹೆಚ್ಚು ಜನ ಸೇರುವ ಕಡೆ ಮಾಸ್ಕ್ ಧರಿಸದೇ ಓಡಾಡುತ್ತಿದ್ದವರಿಗೆ ಒಂದು ಕಡೆ ಪಾಲಿಕೆ, ಮತ್ತೊಂದು ಕಡೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ.

ಶಿವಮೊಗ್ಗ ನಗರದ ಗಾಂಧಿ ಬಜಾರ್‌ನಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ದಿಢೀರ್ ಮಾಸ್ಕ್ ಕಾರ್ಯಾಚರಣೆ ಆರಂಭಿಸಿದರು. ಬಸವೇಶ್ವರ ದೇವಾಲಯದ ಬಳಿ ಮಾಸ್ಕ್ ಧರಿಸದೇ ಬರುತ್ತಿದ್ದವರನ್ನು ತಡೆದು, ದಂಡ ಹಾಕಿದರು.

ಮಂಗಳೂರು: ಮಾಸ್ಕ್ ಡ್ರೈವ್ ದಾಳಿ; ಜಿಲ್ಲಾಧಿಕಾರಿ ಕ್ರಮಕ್ಕೆ ಕಾಂಗ್ರೆಸ್ ನಾಯಕಿ ಗರಂ!ಮಂಗಳೂರು: ಮಾಸ್ಕ್ ಡ್ರೈವ್ ದಾಳಿ; ಜಿಲ್ಲಾಧಿಕಾರಿ ಕ್ರಮಕ್ಕೆ ಕಾಂಗ್ರೆಸ್ ನಾಯಕಿ ಗರಂ!

ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಮಾಸ್ಕ್ ಧರಿಸದೇ ಬಂದ ಹಲವರು ಅಧಿಕಾರಿಗಳಿಗೆ ಸಿಕ್ಕಬಿದ್ದರು. ಕೆಲವರು ದಂಡ ಹಾಕುತ್ತಿರುವುದು ಗೊತ್ತಾಗುತ್ತಿದ್ದಂತೆ ಪರಾರಿಯಾದರು. ಒಬ್ಬ ಯುವಕ ತನ್ನಲ್ಲಿ ದಂಡ ಕಟ್ಟಲು ಹಣವಿಲ್ಲ ಎಂದು ಬೈಕ್ ಬಿಟ್ಟು ಹೋದ ಘಟನೆಯು ನಡೆಯಿತು.

ಧಾರವಾಡ; ಮಾಸ್ಕ್ ಹಾಕದವರಿಂದ 66,500 ರೂ. ದಂಡ ಸಂಗ್ರಹ ಧಾರವಾಡ; ಮಾಸ್ಕ್ ಹಾಕದವರಿಂದ 66,500 ರೂ. ದಂಡ ಸಂಗ್ರಹ

ಶಿವಮೊಗ್ಗ ಜಿಲ್ಲೆಯಲ್ಲಿ ದಿನೇ ದಿನೇ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಸದ್ಯ ಜಿಲ್ಲೆಯಲ್ಲಿ 170 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 67 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೂಗಿನ ಕೆಳಗೆ ಮಾಸ್ಕ್ ಇದ್ದರೆ ವಿಮಾನದಿಂದಲೇ ಇಳಿಸುತ್ತೇವೆ!: ಡಿಜಿಸಿಎ ಎಚ್ಚರಿಕೆಮೂಗಿನ ಕೆಳಗೆ ಮಾಸ್ಕ್ ಇದ್ದರೆ ವಿಮಾನದಿಂದಲೇ ಇಳಿಸುತ್ತೇವೆ!: ಡಿಜಿಸಿಎ ಎಚ್ಚರಿಕೆ

ಪಾಲಿಕೆ ಕ್ರಮಕ್ಕೆ ವರ್ತಕರ ಆಕ್ರೋಶ

ಪಾಲಿಕೆ ಕ್ರಮಕ್ಕೆ ವರ್ತಕರ ಆಕ್ರೋಶ

ಮಹಾನಗರ ಪಾಲಿಕೆ ಅಧಿಕಾರಿಗಳ ಕಾರ್ಯಾಚರಣೆಗೆ ಗಾಂಧಿ ಬಜಾರ್‌ ವರ್ತಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವ್ಯಾಪಾರ, ವಹಿವಾಟು ಇಲ್ಲದೆ ವ್ಯಾಪಾರಿಗಳು ನಲುಗಿದ್ದೇವೆ. ಈ ನಡುವೆ ಮಾಸ್ಕ್ ಕಾರ್ಯಾಚರಣೆಯಿಂದ ವ್ಯಾಪಾರಕ್ಕೆ ಮತ್ತಷ್ಟು ಪೆಟ್ಟು ಬೀಳಲಿದೆ. ರಾಜಕಾರಣಿಗಳ ಹುಟ್ಟುಹಬ್ಬ, ರಾಜಕೀಯ ಪ್ರಚಾರ, ಕಾರ್ಯಕ್ರಮಗಳಲ್ಲಿ ಮಾಸ್ಕ್ ಧರಿಸದೇ ಬಂದವರಿಗೆ ದಂಡ ಹಾಕುವ ಬದಲು ಸಾಮಾನ್ಯ ಜನರನ್ನು ಹಿಡಿದು ದಂಡ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಂದೇ ತಿಂಗಳಲ್ಲಿ 2 ಲಕ್ಷ ದಂಡ

ಒಂದೇ ತಿಂಗಳಲ್ಲಿ 2 ಲಕ್ಷ ದಂಡ

ಶಿವಮೊಗ್ಗ ಜಿಲ್ಲೆಯಾದ್ಯಂತ ಪೊಲೀಸರು ಮಾಸ್ಕ್ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮಾರ್ಚ್ ತಿಂಗಳಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ 1,694 ಪ್ರಕರಣ ದಾಖಲಿಸಿ, 2,23,350 ರೂ. ದಂಡ ವಿಧಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ. ಎಂ. ಶಾಂತರಾಜು ತಿಳಿಸಿದ್ದಾರೆ.

ಶಿವಮೊಗ್ಗ ತಾಲೂನಲ್ಲಿ 468 ಪ್ರಕರಣಗಳನ್ನು ದಾಖಲಿಸಿ 1,00,750 ರೂ. ದಂಡ ವಿಧಿಸಲಾಗಿದೆ. ಭದ್ರಾವತಿ ತಾಲೂಕಿನಲ್ಲಿ 827 ಪ್ರಕರಣಗಳನ್ನು ದಾಖಲಿಸಿ 82,700 ರೂ. ದಂಡ ಸಂಗ್ರಹ ಮಾಡಲಾಗಿದೆ.

ವಿವಿಧ ತಾಲೂಕುಗಳು

ವಿವಿಧ ತಾಲೂಕುಗಳು

ಸಾಗರ ತಾಲೂಕಿನಲ್ಲಿ 83 ಪ್ರಕರಣಗಳನ್ನು ದಾಖಲಿಸಿ 8,300 ರೂ. ದಂಡ, ಶಿಕಾರಿಪುರ ತಾಲೂಕಿನಲ್ಲಿ 160 ಪ್ರಕರಣ ದಾಖಲಿಸಿ 16 ಸಾವಿರ ರೂ. ದಂಡ, ಸೊರಬ ತಾಲೂಕಿನಲ್ಲಿ 67 ಪ್ರಕರಣಗಳನ್ನು ದಾಖಲಿಸಿ 6,700 ರೂ., ತೀರ್ಥಹಳ್ಳಿ ತಾಲೂಕಿನಲ್ಲಿ 44 ಪ್ರಕರಣಗಳನ್ನು ದಾಖಲಿಸಿ 4,400 ರೂ. ದಂಡ, ಹೊಸನಗರ ತಾಲೂಕಿನಲ್ಲಿ 45 ಪ್ರಕರಣ ದಾಖಲಿಸಿ 4,500 ರೂ. ದಂಡ ವಿಧಿಸಲಾಗಿದೆ.

ಪಾಲಿಕೆ ಕ್ರಮಕ್ಕೆ ವರ್ತಕರ ಆಕ್ರೋಶ

ಪಾಲಿಕೆ ಕ್ರಮಕ್ಕೆ ವರ್ತಕರ ಆಕ್ರೋಶ

ಮಹಾನಗರ ಪಾಲಿಕೆ ಅಧಿಕಾರಿಗಳ ಕಾರ್ಯಾಚರಣೆಗೆ ಗಾಂಧಿ ಬಜಾರ್‌ ವರ್ತಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವ್ಯಾಪಾರ, ವಹಿವಾಟು ಇಲ್ಲದೆ ವ್ಯಾಪಾರಿಗಳು ನಲುಗಿದ್ದೇವೆ. ಈ ನಡುವೆ ಮಾಸ್ಕ್ ಕಾರ್ಯಾಚರಣೆಯಿಂದ ವ್ಯಾಪಾರಕ್ಕೆ ಮತ್ತಷ್ಟು ಪೆಟ್ಟು ಬೀಳಲಿದೆ. ರಾಜಕಾರಣಿಗಳ ಹುಟ್ಟುಹಬ್ಬ, ರಾಜಕೀಯ ಪ್ರಚಾರ, ಕಾರ್ಯಕ್ರಮಗಳಲ್ಲಿ ಮಾಸ್ಕ್ ಧರಿಸದೇ ಬಂದವರಿಗೆ ದಂಡ ಹಾಕುವ ಬದಲು ಸಾಮಾನ್ಯ ಜನರನ್ನು ಹಿಡಿದು ದಂಡ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

English summary
In the month of March 1,694 case found people not wear mask in public place. 2,23,350 lakh fine collected in district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X