ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗದಲ್ಲಿ ಪಬ್ ಜಿ ಆಡುತ್ತಿದ್ದ ಬಾಲಕ ಸಾವು

|
Google Oneindia Kannada News

ಶಿವಮೊಗ್ಗ, ಆಗಸ್ಟ್ 29 : ಪಬ್ ಜಿ ಆಡುತ್ತಿದ್ದ ಬಾಲಕ ಮೃತಪಟ್ಟ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಮೃತಪಟ್ಟ ಬಾಲಕನನ್ನು ಪ್ರೀತಮ್ (16) ಎಂದು ಗುರುತಿಸಲಾಗಿದೆ. ಶಿವಮೊಗ್ಗ ನಗರದ ಹೊರವಲಯದ ಹಕ್ಕಿಪಿಕ್ಕಿ ಕ್ಯಾಂಪ್‌ನ ನಿವಾಸಿಯಾದ ಬಾಲಕ ಆಗಸ್ಟ್ 26ರಂದು ಗಾಯಗೊಂಡಿದ್ದ.

ಮೊಬೈಲ್ ಗೇಮ್‌ನ ಟಾಸ್ಕ್ ಪೂರ್ಣಗೊಳಿಸಲು ಆತ್ಮಹತ್ಯೆ ಮಾಡಿಕೊಂಡ ಯುವಕಮೊಬೈಲ್ ಗೇಮ್‌ನ ಟಾಸ್ಕ್ ಪೂರ್ಣಗೊಳಿಸಲು ಆತ್ಮಹತ್ಯೆ ಮಾಡಿಕೊಂಡ ಯುವಕ

ರಾತ್ರಿ 8 ಗಂಟೆ ಸುಮಾರಿಗೆ ಪಬ್ ಜಿ ಆಡುತ್ತಾ ರಸ್ತೆಯಲ್ಲಿ ತೆರಳುತ್ತಿದ್ದ ಬಾಲಕ ಹಂಪ್ ಗಮನಿಸದೇ ಎಡವಿ ಬಿದ್ದಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

Recommended Video

ಪಿಎಸ್ ಐ ವರ್ಗಾವಣೆ ವಿಚಾರ; ಬಿಜೆಪಿ ವಿರುದ್ಧ ಮತ್ತೊಂದು ಆರೋಪ ಮಾಡಿದ ಗೂಳಿಹಟ್ಟಿ

ಪಬ್‍ಜಿ ಮೊಬೈಲ್ ಪ್ರತಿಭೆಗಳಿಗೆ ಸವಾಲ್, ಆಟವಾಡಿ 1.5 ಕೋಟಿ ರು ಗೆಲ್ಲಿಪಬ್‍ಜಿ ಮೊಬೈಲ್ ಪ್ರತಿಭೆಗಳಿಗೆ ಸವಾಲ್, ಆಟವಾಡಿ 1.5 ಕೋಟಿ ರು ಗೆಲ್ಲಿ

16 Year Old Boy Died While Playing Pubg

ಚಿಕಿತ್ಸೆ ಫಲಕಾರಿಯಾಗದೆ ಪ್ರೀತಮ್ ಗುರುವಾರ ಮೃತಪಟ್ಟಿದ್ದಾನೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೈನಿಕರು ಪಬ್‌-ಜಿ ಆಡುವಂತಿಲ್ಲ: ಸಿಆರ್‌ಪಿಎಫ್‌ ಆದೇಶಸೈನಿಕರು ಪಬ್‌-ಜಿ ಆಡುವಂತಿಲ್ಲ: ಸಿಆರ್‌ಪಿಎಫ್‌ ಆದೇಶ

ಬೆಂಗಳೂರಿನಲ್ಲಿ ಪಬ್ ಜಿ ಆಡುತ್ತಾ ಮಾನಸಿಕ ಖಿನ್ನತೆಗೆ ಒಳಗಾಗುವ ಮಕ್ಕಳ ಪ್ರಮಾಣ ಹೆಚ್ಚಾಗುತ್ತಿದೆ ಎಂದು ನಿಮ್ಹಾನ್ಸ್ ಕೆಲವು ದಿನಗಳ ಹಿಂದೆ ಹೇಳಿತ್ತು. ಆಟದ ಚಟಕ್ಕೆ ಬಿದ್ದ ಮಕ್ಕಳು ಭ್ರಮಾ ಲೋಕದಲ್ಲಿ ತೇಲುತ್ತಾರೆ ಎಂದು ಮನಶಾಸ್ತ್ರಜ್ಞರು ಹೇಳಿದ್ದರು.

ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಜಿಮ್ ಟ್ರೈನರ್‌ವೊಬ್ಬ ಪಬ್ ಜಿ ಆಡುತ್ತಾ ಮಾನಸಿಕ ಸ್ಥಿಮಿತ ಕಳೆದುಕೊಂಡು ಗುಂಡು ಹಾರಿಸಿಕೊಂಡಿದ್ದ. ಆಟದ ಹುಚ್ಚಿಗೆ ಬಿದ್ದು 5 ಜನರು ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ವರದಿಗಳಿವೆ.

English summary
A 16 year old boy has died in the time of road crossing in Shivamogga. It is alleged that was playing PUBG game on mobile while crossing road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X