ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೋಗ ಜಲಪಾತಕ್ಕೆ ಹರಿದು ಬಂದ ಜನಸಾಗರ; ಒಂದೇ ದಿನ 2 ಲಕ್ಷ ಪ್ರವೇಶ ಶುಲ್ಕ ಸಂಗ್ರಹ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಆಗಸ್ಟ್ 24: ವಿಶ್ವವಿಖ್ಯಾತ ಜೋಗ ಜಲಪಾತ ನೋಡಲು ಆಗಸ್ಟ್ 23ರ ಭಾನುವಾರ ಪ್ರವಾಸಿಗರ ದಂಡೇ ಹರಿದುಬಂದಿತ್ತು. ಕೊರೊನಾ ಭೀತಿ ನಡುವೆಯೂ ಜೋಗದ ಸೌಂದರ್ಯ ನೋಡಲು ಜನರು ದಂಡು ದಂಡಾಗಿ ಆಗಮಿಸಿದ್ದರು.

ಪ್ರಾಧಿಕಾರದ ಮುಖ್ಯ ಪ್ರವೇಶ ದ್ವಾರದ ಮುಂದೆ ಉದ್ದಕ್ಕೆ ಸಾಲಾಗಿ ನಿಂತು ಪ್ರವೇಶ ಚೀಟಿ ಪಡೆದರು. ನಿನ್ನೆ ಒಂದೇ ದಿನ 12,918 ಜನರು ಭೇಟಿ ನೀಡಿದ್ದು, ಪ್ರಧಾನ ಪ್ರವೇಶ ದ್ವಾರದಲ್ಲಿ ₹ 2 ಲಕ್ಷಕ್ಕೂ ಹೆಚ್ಚು ಪ್ರವೇಶ ಶುಲ್ಕ ಸಂಗ್ರಹವಾಗಿದ್ದು ಹೊಸ ದಾಖಲೆ ಸೃಷ್ಟಿಸಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲ ದಿನ ಜೋಗ ಜಲಪಾತಕ್ಕೆ ಬಂದ ಪ್ರವಾಸಿಗರಿಗೆ ನಿರಾಸೆಮೊದಲ ದಿನ ಜೋಗ ಜಲಪಾತಕ್ಕೆ ಬಂದ ಪ್ರವಾಸಿಗರಿಗೆ ನಿರಾಸೆ

ಕಳೆದ ಸಾಕಷ್ಟು ದಿನಗಳಿಂದ ಸುರಿದ ಮಳೆಯಿಂದಾಗಿ ಜೋಗ ಜಲಪಾತದ ಸೌಂದರ್ಯ ಇಮ್ಮಡಿಗೊಂಡಿದೆ. ಈ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಜಲಪಾತ ಪ್ರದೇಶದ ಮುಂಭಾಗದಲ್ಲಿರುವ ಮೈಸೂರು ಬಂಗಲೆಯ ಆವರಣದಲ್ಲಿ ನೆರೆದಿದ್ದ ಸಾವಿರಾರು ಪ್ರವಾಸಿಗರು ಕೊರೊನಾ ಭಯವನ್ನು ಮರೆತು ಹೊಸ ಲೋಕಕ್ಕೆ ಬಂದಂತೆ ಸಂಭ್ರಮಿಸುತ್ತಿದ್ದರು. ಜಲಪಾತದ ಸಿರಿ ನೋಡುವ ತವಕದಲ್ಲಿ ನೂಕು ನುಗ್ಗಲು ಉಂಟಾಗಿತ್ತು.

Shivamogga: 12,918 people visit Jog Falls on August 23 Sunday

ರಾತ್ರಿ ವೇಳೆಯಲ್ಲಿಯೂ ಜಲಪಾತ ಕಾಣುವಂತೆ 2 ಸಾವಿರ ವ್ಯಾಟ್ ಬೆಳಗುವ 4 ವಿದ್ಯುತ್ ದೀಪಗಳನ್ನು ಭಾನುವಾರದಿಂದ ಅಳವಡಿಸಲಾಗಿದ್ದು ಪ್ರವಾಸಿಗರಿಗೆ ಅನುಕೂಲ ಮಾಡಲಾಗಿದೆ ಎಂದು ಪ್ರಾಧಿಕಾರದ ನಿರ್ದೇಶಕರು ತಿಳಿಸಿದ್ದಾರೆ.

English summary
12,918 people visit Jog Falls on August 23 Sunday and about 2 lakhs rupees entry fees collected in one day
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X