• search

ಫೇಸ್ ಬುಕ್ ಲೈವ್ ನಲ್ಲಿ ವಿಷ ಸೇವಿಸಿದ ಹೊಸನಗರ ಯುವಕ

By ಶಿವಮೊಗ್ಗ ಪ್ರತಿನಿಧಿ
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ಫೇಸ್ ಬುಕ್ ಲೈವ್ ನಲ್ಲಿ ವಿಷ ಸೇವಿಸಿದ ಹೊಸನಗರ ಯುವಕ | Oneindia Kannada

    ಶಿವಮೊಗ್ಗ, ಸೆಪ್ಟೆಂಬರ್ 11: ಸಾಮಾಜಿಕ ಜಾಲತಾಣದಲ್ಲಿ ಬಹಳ ಚಟುವಟಿಕೆಯಿಂದ ಇದ್ದ ಹಾಗೂ ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೊಳ್ಳುವ ಯುವಕನೊಬ್ಬ, "ಪೊಲೀಸರು ನನಗೆ ಬಹಳ ಹಿಂಸೆ ಕೊಡ್ತಿದ್ದಾರೆ" ಎಂಬ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ, ವಿಷ ಸೇವಿಸಿದ ಘಟನೆ ಮಂಗಳವಾರ ಹೊಸನಗರದ ಬೈಸೆ ಗ್ರಾಮದಲ್ಲಿ ನಡೆದಿದೆ.

    ಬೈಸೆ ಗ್ರಾಮದ ಮಿಥುನ್ ಶೆಟ್ಟಿ ಆತ್ಮಹತ್ಯೆಗೆ ಯತ್ನಿಸಿದ ಯುವಕ. ನಾನೊಬ್ಬ ಬಿಜೆಪಿ ಕಾರ್ಯಕರ್ತ ಎಂಬ ಒಂದೇ ಕಾರಣಕ್ಕೆ ಪೊಲೀಸರು ನನ್ನನ್ನು ನಗರ ಪೊಲೀಸ್ ಠಾಣೆಗೆ ಕರೆಸಿ ಹಿಂಸೆ ಕೊಟ್ಟಿದ್ದಾರೆ. ಹೊಡೆದಿದ್ದಾರೆ. ಇದರಿಂದ ನಾನು ಮಾನಸಿಕವಾಗಿ ನೊಂದಿದ್ದೇನೆ ಎಂದು ಹೇಳಿಕೊಂಡಿದ್ದಾನೆ.

    ಆತ್ಮಹತ್ಯೆ ತಡೆಗೆ ಫೇಸ್ ಬುಕ್ ನಿಂದ ಹೊಸ ತಂತ್ರಜ್ಞಾನ

    ಆ ನಂತರ, "ನಾನು ಬಿಜೆಪಿ ಕಾರ್ಯಕರ್ತ ಎಂಬ ಕಾರಣಕ್ಕೆ ಪೊಲೀಸರು ನನಗೆ ಹಿಂಸೆ ನೀಡಿದ್ದಾರೆ. ತೀರ್ಥಹಳ್ಳಿ ಶಾಸಕರಾದ ಜ್ಞಾನೇಂದ್ರಣ್ಣ ನನಗೆ ನ್ಯಾಯ ಕೊಡಿಸಿ" ಎಂದು ಫೇಸ್ ಬುಕ್ ಲೈವ್ ನಲ್ಲಿ ವಿಷ ಸೇವಿಸಿದ್ದಾನೆ. ಈತನನ್ನು ಈಗ ಹೊಸನಗರ ಆಸ್ಪತ್ರೆಗೆ ಸೇರಿಸಲಾಗಿದೆ.

    Youth attempted to suicide in face book live

    ಸಾಮಾಜಿಕ ಜಾಲತಾಣವಾದ ವಾಟ್ಸಪ್ ಹಾಗೂ ಫೇಸ್ ಬುಕ್ ನಲ್ಲಿ ಶಾಂತಿ ಕದಡುವಂಥ ಪೋಸ್ಟ್ ಮಾಡುತ್ತಿದ್ದ ಮಿಥುನ್ ಶೆಟ್ಟಿಯನ್ನು ನಗರ ಪೊಲೀಸ್ ಠಾಣೆಗೆ ಕರೆಯಿಸಿ ಎಚ್ಚರಿಕೆ ನೀಡಿ ಕಳುಹಿಸಲಾಗಿತ್ತು. ಗಣೇಶ ಹಬ್ಬದ ಮುಂಜಾಗ್ರತಾ ಕ್ರಮವಾಗಿ ಹೀಗೆ ಮಾಡಲಾಗಿತ್ತು.

    ಗಣಪತಿ ಮೂರ್ತಿ ವಿಸರ್ಜನೆ ಸಮಯದಲ್ಲಿ ಗಲಾಟೆ ಮಾಡುವಂತಹ ಪೋಸ್ಟರ್ ಗಳನ್ನು ಮಿಥುನ್ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. ಇದರಿಂದ ನಗರ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಸಿ ಆರ್ ಪಿಸಿ 107ರ ಅನ್ವಯ ದೂರು ದಾಖಲಿಸಿಕೊಂಡು, ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

    ಲೋಕಸಭೆ: ಫೇಸ್‌ಬುಕ್‌, ಟ್ವಿಟ್ಟರ್‌ನಲ್ಲಿ ಸುಳ್ಳುಸುದ್ದಿ, ನಿಂದನೆಗೆ ಕಡಿವಾಣ

    ಮನೆಯ ಹತ್ತಿರ ಪೊಲಿಸರು ಬಂದು, ಹಿಂಸೆ ಕೊಟ್ಟಿದ್ದಾರೆ. ನಾನೊಬ್ಬ ಬಿಜೆಪಿ ಕಾರ್ಯಕರ್ತನಾಗಿದ್ದಕ್ಕೆ ಈ ರೀತಿ ಮಾಡುತ್ತಿದ್ದಾರೆ. ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ನನಗೆ ನ್ಯಾಯ ಕೊಡಿಸಬೇಕು. ನಾನೊಬ್ಬ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ನನಗೆ ಆದ ಅನ್ಯಾಯ ಯಾರಿಗೂ ಆಗಬಾರದು ಎಂದು ಹೇಳಿದ್ದಾನೆ.

    ನನ್ನ ಸಾವಿಗೆ ಸರಿಯಾದ ನ್ಯಾಯ ಸಿಗಲಿ ಎಂದು ಫೇಸ್ ಬುಕ್ ಲೈವ್ ನಲ್ಲಿಯೇ ವಿಷ ಕುಡಿದಿದ್ದಾನೆ. ಸದ್ಯಕ್ಕೆ ವಿಡಿಯೋ ವೈರಕ್ ಆಗಿದ್ದು, ಈ ಸಂಬಂಧ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Mithun Shetty, from Byse village, Hosanagara taluk, Shivamogga district, attempted to suicide on face book live, alleging harassment from police. Now, he has been admitted in hospital.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more