ಯಶವಂತಪುರ-ಶಿವಮೊಗ್ಗ ರೈಲು ವಾರದಲ್ಲಿ 3 ದಿನ ಸಂಚಾರ

Posted By:
Subscribe to Oneindia Kannada

ಶಿವಮೊಗ್ಗ, ಸೆಪ್ಟೆಂಬರ್ 01 : ಯಶವಂತಪುರ-ಶಿವಮೊಗ್ಗ-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಇನ್ನು ಮುಂದೆ ವಾರದಲ್ಲಿ ಮೂರು ದಿನ ಸಂಚಾರ ನಡೆಸಲಿದೆ. ಇದುವರೆಗೂ ವಾರಕ್ಕೆ ಎರಡು ಬಾರಿ ಈ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸುತ್ತಿತ್ತು.

ಶಿವಮೊಗ್ಗ ಸಂಸದ ಬಿ.ಎಸ್.ಯಡಿಯೂರಪ್ಪ ಅವರು ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಸೆಪ್ಟೆಂಬರ್ 5ರಿಂದ ಯಶವಂತಪುರ-ಶಿವಮೊಗ್ಗ-ಯಶವಂತಪುರ ಎಕ್ಸ್‌ಪ್ರೆಸ್ ರೈಲು (ರೈಲು ಸಂಖ್ಯೆ 16579/16580) ವಾರದಲ್ಲಿ ಮೂರು ದಿನ ಸಂಚಾರ ನಡೆಸಲಿದೆ.[ಸೆ.10ರಂದು ರಾಜ್ಯದಲ್ಲಿ ರೈಲು ಸಂಚಾರ ಬಂದ್]

indian railways

2014ರಲ್ಲಿ ಈ ರೈಲು ಸೇವೆಯನ್ನು ಆರಂಭಿಸಲಾಗಿತ್ತು. ವಾರದಲ್ಲಿ ಎರಡು ದಿನ ಈ ರೈಲು ಶಿವಮೊಗ್ಗ-ಯಶವಂತಪುರ ನಡುವೆ ಸಂಚಾರ ನಡೆಸುತ್ತಿತ್ತು. ಪರಿಷ್ಕೃತ ವೇಳಾಪಟ್ಟಿಯಂತೆ ರೈಲು ಶನಿವಾರ, ಭಾನುವಾರ ಮತ್ತು ಸೋಮವಾರ ಶಿವಮೊಗ್ಗ-ಯಶವಂತಪುರ ನಡುವೆ ಸಂಚಾರ ನಡೆಸಲಿದೆ.[ಬೆಂಗಳೂರಿಂದ ಸಂಚರಿಸುವ ರೈಲ್ವೆ ಪ್ರಯಾಣಿಕರೇ ಗಮನಿಸಿ]

ವೇಳಾಪಟ್ಟಿ : ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ಬೆಳಗ್ಗೆ 9 ಗಂಟೆಗೆ ಹೊರಡಲಿರುವ ರೈಲು ಮಧ್ಯಾಹ್ನ 2.45ಕ್ಕೆ ಶಿವಮೊಗ್ಗ ತಲುಪಲಿದೆ. ಶಿವಮೊಗ್ಗದಿಂದ ಮಧ್ಯಾಹ್ನ 3.30ಕ್ಕೆ ಹೊರಡಲಿರುವ ರೈಲು ರಾತ್ರಿ 9 ಗಂಟೆಗೆ ಯಶವಂತಪುರ ತಲುಪುತ್ತದೆ.[ಕೋಟ್ಯಂತರ ರೈಲ್ವೆ ಪ್ರಯಾಣಿಕರಿಗೆ ನಿರಾಳದ ಸಂಗತಿ ಇಲ್ಲಿದೆ]

ಯಶವಂತಪುರದಿಂದ ಹೊರಡುವ ರೈಲು ತುಮಕೂರು, ಅರಸೀಕೆರೆ, ಭದ್ರಾವತಿ ಮಾರ್ಗವಾಗಿ ಶಿವಮೊಗ್ಗ ತಲುಪಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Yeshwantpur–Shivamogga City Express The biweekly train (16579/16580) will be operated on three days (Saturday, Sunday, Monday) in a week from September 5, 2016. The train will depart from Yeshwantpur at 9 a.m. and reach Shivamogga at 2.45 p.m. Train will depart from Shivamogga at 3.30 p.m. and arrive at Yeshwantpur at 9 p.m.
Please Wait while comments are loading...