ಭದ್ರಾವತಿ : ಮೈದೊಳಲು ಗ್ರಾಮಕ್ಕೆ ಯಡಿಯೂರಪ್ಪ, ಕಾಗೋಡು ಭೇಟಿ

By: ಶಿವಮೊಗ್ಗ ಪ್ರತಿನಿಧಿ
Subscribe to Oneindia Kannada

ಶಿವಮೊಗ್ಗ, ಫೆಬ್ರವರಿ 13 : ಕಲುಷಿತ ಕುಡಿಯುವ ನೀರು ಸೇವಿಸಿ ಮೂವರು ಸಾವನ್ನಪ್ಪಿದ ಮೈದೊಳಲು ಗ್ರಾಮಕ್ಕೆ ಮಂಗಳವಾರ ಸಚಿವ ಕಾಗೋಡು ತಿಮ್ಮಪ್ಪ ಮತ್ತು ಶಿವಮೊಗ್ಗ ಸಂಸದ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿದರು.

ಗ್ರಾಮ ಪಂಚಾಯಿತಿ ಸರಬರಾಜು ಮಾಡಿದ್ದ ಕುಡಿಯುವ ನೀರು ಸೇವಿಸಿ ಭದ್ರಾವತಿ ತಾಲೂಕು ಮೈದೊಳಲು ಗ್ರಾಮದ ಮೂವರು ಮೃತಪಟ್ಟಿದ್ದರು. 40 ಅಧಿಕ ಮಂದಿ ಅಸ್ವಸ್ಥಗೊಂಡಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಿವಮೊಗ್ಗ : ಕಲುಷಿತ ನೀರು ಕುಡಿದು 2 ಸಾವು, 40 ಮಂದಿ ಅಸ್ವಸ್ಥ

ಮೈದೊಳಲು ಗ್ರಾಮದಲ್ಲಿ ರಾಜಕೀಯ ಜುಗಲ್ ಬಂಧಿ ನಡೆದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಶಿವಮೊಗ್ಗದ‌ ಮ್ಯಾಕ್ಸ್ ಹಾಗೂ ಮೈದೊಳಲು ಗ್ರಾಮಕ್ಕೆ ಭೇಟಿ ನೀಡಿ ಅಸ್ವಸ್ಥಗೊಂಡವರ ಆರೋಗ್ಯ ವಿಚಾರಿಸಿದರು.

ಕ್ಷೇತ್ರ ಪರಿಚಯ : ಜೆಡಿಎಸ್, ಕಾಂಗ್ರೆಸ್ ಭದ್ರ ಕೋಟೆ ಭದ್ರಾವತಿ!

ಮತ್ತೊಂದು ಕಡೆ ಜಿಲ್ಲಾ ಉಸ್ತುವಾರಿ ಮತ್ತು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥಗೊಂಡವರ ಆರೋಗ್ಯ ವಿಚಾರಿಸಿದರು. ಮೃತಪಟ್ಟ ಮೂವರಿಗೆ ಸರ್ಕಾರದ ವತಿಯಿಂದ ಪರಿಹಾರ ನೀಡುವ, ಅಸ್ವಸ್ಥಗೊಂಡವರಿಗೆ ಸರ್ಕಾರದ ವತಿಯಿಂದಲೇ ಚಿಕಿತ್ಸಾ ವೆಚ್ಚ ಭರಿಸುವ ಭರವಸೆ ನೀಡಿದರು.

ಶಿವಮೊಗ್ಗ ಸಂಸದರ ಭೇಟಿ

ಶಿವಮೊಗ್ಗ ಸಂಸದರ ಭೇಟಿ

ಶಿವಮೊಗ್ಗ ಸಂಸದ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, 'ಸರ್ಕಾರದ ವತಿಯಿಂದ ಮೃತ ಪಟ್ಟವರಿಗೆ ತಲಾ‌ 10ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಅಸ್ವಸ್ಥಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು' ಎಂದು ಒತ್ತಾಯಿಸಿದರು.

ನಿರೀನ ಪರೀಕ್ಷೆಗೆ ಸೂಚನೆ

ನಿರೀನ ಪರೀಕ್ಷೆಗೆ ಸೂಚನೆ

'ಸರ್ಕಾರ ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛವಾಗಿಡಬೇಕು. ಈ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು, 6ತಿಂಗಳಿಗೊಮ್ಮೆ ಕುಡಿಯುವ ನೀರಿನ ಪರೀಕ್ಷೆ ನಡೆಸಬೇಕು' ಎಂದು ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ಕಾಗೋಡು ತಿಮ್ಮಪ್ಪ ಭೇಟಿ

ಕಾಗೋಡು ತಿಮ್ಮಪ್ಪ ಭೇಟಿ

ಕಂದಾಯ ಹಾಗೂ ಜಿಲ್ಲಾ ಉಸ್ತವರಿ ಸಚಿವ ಕಾಗೋಡು ತಿಮ್ಮಪ್ಪ ಅವರು ಗ್ರಾಮಕ್ಕೆ ಭೇಟಿ ನೀಡಿ ಅಸ್ವಸ್ಥಗೊಂಡವರ ಆರೋಗ್ಯ ವಿಚಾರಿಸಿದರು. ಅಸ್ವಸ್ಥಗೊಂಡವರ ಆಸ್ಪತ್ರೆ ಖರ್ಚು ಹಾಗೂ ಮೃತ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.

ಮಲೆನಾಡಿನಲ್ಲಿ ಕೇಳುವಂತಾಗಿದೆ

ಮಲೆನಾಡಿನಲ್ಲಿ ಕೇಳುವಂತಾಗಿದೆ

ಎಲ್ಲೋ ದೂರದ ಗದಗ, ಕೊಪ್ಪಳದಂತಹ ಊರಿಗಳಲ್ಲಿ ಕಲುಷಿತ ನೀರಿನಿಂದ ಸಾವನ್ನಪ್ಪಿದ ಘಟನೆಯ ಬಗ್ಗೆ ಕೇಳುತ್ತಿದ್ದ ಮಲೆನಾಡಿನ ಜನ ಅಧಿಕಾರಿಗಳ ನಿರ್ಲಕ್ಷತನದಿಂದ ನಡೆದ ಈ ಅವಘಢಕ್ಕೆ ಬೆಲೆ ತೆತ್ತಿದ್ದಾರೆ. ಈ ಅಜಾಗರೂಕತೆಗೆ ಜವಬ್ದಾರಿ ಯಾರು? ಎಂಬುದು ತನಿಖೆಯಿಂದ ಹೊರಬರಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Shivamoga MP B.S.Yeddyurappa and district in-charge minister Kagodu Timmappa visited the Mydolalu village on February 13, 2018. 3 dead and more than 30 fall ill in Mydolalu village near Bhadravathi after drinking suspected polluted water.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ