ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಬೆಂಗಳೂರಿನ ಹೋರಾಟಗಾರರಿಗೆ ಈವರೆಗೆ ಮಹಾದಾಯಿ ನೆನಪಾಗಿರಲಿಲ್ಲ'

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜನವರಿ 27 : ಬೆಂಗಳೂರಿನಲ್ಲಿರುವ ಹೋರಾಟಗಾರರಿಗೆ ಇದುವರೆಗೆ ಮಹಾದಾಯಿ ನೆನಪಾಗಿರಲಿಲ್ಲ. ಈಗ ಬಿಜೆಪಿ ಪರಿವರ್ತನಾ ಯಾತ್ರೆ ಸಮಯದಲ್ಲಿ ರಾಡಿ ಮಾಡುವುದಕ್ಕೆ ಹೊರಟಿದ್ದಾರೆ ಎಂದು ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಇಲ್ಲಿ ಹೇಳಿದ್ದಾರೆ.

ಫೆಬ್ರವರಿ ನಾಲ್ಕರಂದು ಅಡೆತಡೆಗಳ ಮಧ್ಯೆ ಬೆಂಗಳೂರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಬಂದೇ ಬರುತ್ತಾರೆ. ಸಮಾವೇಶ ಯಶಸ್ವಿ ಆಗುವಂತೆ ಮಾಡೇ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ. ಯಾರು ಅಡ್ಡಿ ಪಡಿಸುತ್ತಾ ಇದ್ದಾರೆ ಎಂಬುದು ಇಡೀ ರಾಜ್ಯದ ಜನತೆಗೆ ಗೊತ್ತಿದೆ. ಬೆಂಗಳೂರಿನಲ್ಲಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭವನ್ನು ಯಶಸ್ವಿಯಾಗಿ ಮಾಡುತ್ತೇವೆ ಎಂದು ಹೇಳಿದ್ದಾರೆ.

ಕರ್ನಾಟಕ ಬಂದ್ : ಕಾಂಗ್ರೆಸ್, ಬಿಜೆಪಿ ಟ್ವಿಟರ್ ವಾರ್!ಕರ್ನಾಟಕ ಬಂದ್ : ಕಾಂಗ್ರೆಸ್, ಬಿಜೆಪಿ ಟ್ವಿಟರ್ ವಾರ್!

ಕಾಂಗ್ರೆಸ್ ಸರಕಾರದ ವಿರುದ್ಧ ಕಿಡಿ ಕಾರಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿವೃದ್ಧಿ ಕಾರ್ಡ್ ಇಟ್ಟುಕೊಂಡು ಜನರ ಬಳಿ ಹೋಗುತ್ತಿಲ್ಲ. ಭಾಷೆ, ನೀರು, ಜಾತಿ ಹೆಸರಿನಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

Why they are remembering Mahadayi now?

ಫೆಬ್ರವರಿ ನಾಲ್ಕನೇ ತಾರೀಕು ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಬೆಂಗಳೂರಿನಲ್ಲಿದ್ದು, ಅದರಲ್ಲಿ ಪಾಲ್ಗೊಳ್ಳಲು ನರೇಂದ್ರ ಮೋದಿ ಬರುತ್ತಿದ್ದಾರೆ.

English summary
Why they are remembering Mahadayi now? We know who are there in Bengaluru bandh call, said by BJP's national joint organising secretary B.L.Santhosh in Shivamogga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X