ಮೇರಿ ಜೋಸೆಫ್ ಯಾರು?: ಮಧು ಬಂಗಾರಪ್ಪಗೆ ಹಾಲಪ್ಪ ಪ್ರಶ್ನೆ

Posted By:
Subscribe to Oneindia Kannada

ಸೊರಬ, ಆಗಸ್ಟ್ 23: ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ಅವರ ಹೆಸರನ್ನು ನೇರವಾಗಿ ಪ್ರಸ್ತಾವ ಮಾಡದೆ ಮಾಜಿ ಸಚಿವ ಹಾಲಪ್ಪ ಅವರು ಸೊರಬದಲ್ಲಿ ವಾಗ್ದಾಳಿ ನಡೆಸಿದ್ದಾರೆ. ನನ್ನ ವಿರುದ್ಧ ದೂರು ಕೊಟ್ಟವರ ಬಗ್ಗೆ ತಮಗೇನು ಗೊತ್ತು ಎಂದಿದ್ದವರು ನೂರಾ ನಲವತ್ತಾರು ಸಲ ಅವರ ಜತೆ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.

ಅತ್ಯಾಚಾರ ಕೇಸ್ : ಮಾಜಿ ಸಚಿವ ಹರತಾಳು ಹಾಲಪ್ಪಗೆ ಕ್ಲೀನ್ ಚಿಟ್

ಇದೇ ವೇಳೆ, ಮೇರಿ ಜೋಸೆಫ್ ಯಾರು? ಅವರಿಗೆ ಒಬ್ಬ ಮಗ ಇದ್ದಾನಲ್ಲಾ ಆತ ಯಾರು ಎಂದು ಬಹಿರಂಗಪಡಿಸಿ ಎಂದು ಹಾಲಪ್ಪ ಸವಾಲು ಹಾಕಿದ್ದಾರೆ. ಒಟ್ಟಿನಲ್ಲಿ ಮಾಜಿ ಸಚಿವ ಹಾಲಪ್ಪ ಅವರ ಮೇಲೆ ಕೇಳಿಬಂದಿದ್ದ ಅತ್ಯಾಚಾರ ಪ್ರಕರಣದಿಂದ ದೋಷಮುಕ್ತರಾದ ಮೇಲೆ ಶಿವಮೊಗ್ಗ ರಾಜಕಾರಣ ರಂಗೇರಿದೆ.

Who is Mary Joseph: Halappa questions Madhu Bangarappa

ಹಾಲಪ್ಪ ಅವರ ಹುಟ್ಟೂರು ಹೊಳೆಕೊಪ್ಪದಿಂದ ಸೊರಬದ ತನಕ ಪಾದಯಾತ್ರೆ ಮಾಡಿದ ಹಾಲಪ್ಪ, ಆ ನಂತರ ಸಮಾವೇಶದಲ್ಲಿ ಮಧು ಬಂಗಾರಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಇದೇ ವೇಳೆ ಹಾಲಪ್ಪ ಅವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿರುವ ಮಧು ಬಂಗಾರಪ್ಪ, ಯಾರೇನು ಹೇಳಿಕೊಳ್ಳುತ್ತಾರೋ ಹೇಳಿಕೊಳ್ಳಲಿ. ಕೇಳೋರಿಗೆಲ್ಲ ಉತ್ತರ ನೀಡೋಕೆ ಆಗಲ್ಲ. ನನಗೆ ಯಾರ ಜತೆಗೂ ಸಂಬಂಧವಿಲ್ಲ. ಇನ್ನು ಟೀಕೆ ಮಾಡಿದವರೇನೂ ಸಾಚಾ ಅಲ್ಲ ಎಂದು ಖಾರವಾಗಿ ಉತ್ತರ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Who is Mary Joseph, former minister Halappa questions Madhu Bangarappa in Soraba. After completing padayatra from Holekoppa to Soraba, Halppa participated in a convention.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ