ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ ಉಪ ಚುನಾವಣೆ : ನಾಯಕರ ಏಟು, ತಿರುಗೇಟುಗಳು

|
Google Oneindia Kannada News

ಶಿವಮೊಗ್ಗ, ಅಕ್ಟೋಬರ್ 24 : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣಾ ಪ್ರಚಾರದ ಭರಾಟೆ ಜೋರಾಗಿದೆ. ಚುನಾವಣಾ ಪ್ರಚಾರ ವಿವಿಧ ಪಕ್ಷಗಳ ನಾಯಕರ ನಡುವಿನ ವಾಗ್ಯುದ್ಧಕ್ಕೆ ಕಾರಣವಾಗಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಾಯಕರು ಟೀಕಾ ಪ್ರಹಾರ ಮುಂದುವರೆಸಿದ್ದಾರೆ.

ನವೆಂಬರ್ 3ರಂದು ನಡೆಯಲಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ನಾಲ್ವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅಭ್ಯರ್ಥಿಗಳ ಪೈಕಿ ಮೂವರು ಮಾಜಿ ಮುಖ್ಯಮಂತ್ರಿಗಳ ಮಕ್ಕಳು. ಆದ್ದರಿಂದ, ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ.

'ಬಿ.ಎಸ್.ಯಡಿಯೂರಪ್ಪ ಅವರಿಗೆ ಪುತ್ರ ಸೋಲುತ್ತಾನೆ ಎನ್ನುವ ಭಯ''ಬಿ.ಎಸ್.ಯಡಿಯೂರಪ್ಪ ಅವರಿಗೆ ಪುತ್ರ ಸೋಲುತ್ತಾನೆ ಎನ್ನುವ ಭಯ'

ಬಿಜೆಪಿಯಿಂದ ಬಿ.ವೈ.ರಾಘವೇಂದ್ರ, ಜೆಡಿಎಸ್‌ನಿಂದ ಮಧು ಬಂಗಾರಪ್ಪ ಕಣದಲ್ಲಿದ್ದಾರೆ. ಇವರ ನಡುವೆಯೇ ಭಾರಿ ಪೈಪೋಟಿ ನಡೆಯುವ ಸಾಧ್ಯತೆ ಇದೆ. ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಪುತ್ರ ಮಹಿಮಾ ಪಟೇಲ್ ಅವರು ಕಣದಲ್ಲಿದ್ದಾರೆ.

ಮಧು ಬಂಗಾರಪ್ಪಗೆ ಹಲವು ಪ್ರಶ್ನೆ ಕೇಳಿದ ಕುಮಾರ್ ಬಂಗಾರಪ್ಪ!ಮಧು ಬಂಗಾರಪ್ಪಗೆ ಹಲವು ಪ್ರಶ್ನೆ ಕೇಳಿದ ಕುಮಾರ್ ಬಂಗಾರಪ್ಪ!

ಬಂಗಾರಪ್ಪ ಕುಟುಂಬದ ಬಗ್ಗೆ ಚುನಾವಣೆಯಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ನಾಯಕರ ಟೀಕೆಗಳು ಸಹ ಬಂಗಾರಪ್ಪ ಕುಟುಂಬದತ್ತಲೇ ಸಾಗುತ್ತಿವೆ. ಶಿವಮೊಗ್ಗ ಉಪ ಚುನಾವಣೆಯಲ್ಲಿ ಕೇಳಿಬಂದ ಹೇಳಿಕೆಗಳ ಸಂಗ್ರಹ ಇಲ್ಲಿವೆ ನೋಡಿ.....

ಕಾಂಗ್ರೆಸ್‌ ಅನ್ನು ಕೇಳಿಯೇ ಅಭ್ಯರ್ಥಿ ಹಾಕಿದ್ದೇವೆ: ದೇವೇಗೌಡಕಾಂಗ್ರೆಸ್‌ ಅನ್ನು ಕೇಳಿಯೇ ಅಭ್ಯರ್ಥಿ ಹಾಕಿದ್ದೇವೆ: ದೇವೇಗೌಡ

ಅಪ್ಪ ಮಕ್ಕಳ ಕ್ಷೇತ್ರವೇ?

ಅಪ್ಪ ಮಕ್ಕಳ ಕ್ಷೇತ್ರವೇ?

ಶಿವಮೊಗ್ಗದಲ್ಲಿ ಪ್ರಚಾರ ನಡೆಸಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, 'ಶಿವಮೊಗ್ಗ ಕ್ಷೇತ್ರ ಅಪ್ಪ-ಮಕ್ಕಳ ಪಕ್ಷವೇ?. ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಲು ಬೇರೆ ಯಾರೂ ಇಲ್ಲವೇ?' ಎಂದು ಪ್ರಶ್ನೆ ಮಾಡಿದ್ದರು.

ದಿನೇಶ್ ಗುಂಡೂರಾವ್ ಅವರ ಆರೋಪಕ್ಕೆ ತಿರುಗೇಟು ನೀಡಿದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರು, 'ನಿಮ್ಮದು ವಂಶಪಾರಂಪರ್ಯ ಪಕ್ಷವಲ್ಲವೇ?. ರಾಮನಗರದಲ್ಲಿ ನಿಮ್ಮ ಮಿತ್ರ ಪಕ್ಷ ಮುಖ್ಯಮಂತ್ರಿ ಅವರ ಪತ್ನಿಯನ್ನು ಕಣಕ್ಕಿಳಿಸಿಲ್ಲವೇ?' ಎಂದು ತಿರುಗೇಟು ಕೊಟ್ಟರು.

ಉಪ ಚುನಾವಣೆಗೆ ಕಾರಣ ಯಾರು?

ಉಪ ಚುನಾವಣೆಗೆ ಕಾರಣ ಯಾರು?

'ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಯಡಿಯೂರಪ್ಪ ಮತ್ತು ರಾಘವೇಂದ್ರ ಅವರೇ ಕಾರಣ' ಎಂದು ದಿನೇಶ್ ಗುಂಡೂರಾವ್ ಆರೋಪಿಸಿದ್ದರು.

ಈ ಹೇಳಿಕೆಗೆ ತಿರುಗೇಟು ನೀಡಿದ ಸೊರಬ ಶಾಸಕ ಕುಮಾರ್ ಬಂಗಾರಪ್ಪ ಅವರು, 'ರಾಮನಗರ, ಮಂಡ್ಯ ಉಪ ಚುನಾವಣೆಗೆ ಯಾರು ಹೊಣೆ?. ಈ ವಿಷಯದ ಅರಿವು ಅವರಿಗೆ ಇಲ್ಲವೇ?' ಎಂದು ಪ್ರಶ್ನೆ ಮಾಡಿದ್ದರು.

ಜೆಡಿಎಸ್ ಪಕ್ಷಕ್ಕೆ ಗೊತ್ತಿಲ್ಲವೇ?

ಜೆಡಿಎಸ್ ಪಕ್ಷಕ್ಕೆ ಗೊತ್ತಿಲ್ಲವೇ?

'ಕುಮಾರ್ ಬಂಗಾರಪ್ಪ ಅವರು ಬಂಗಾರಪ್ಪ ಕುಟುಂಬದವರು ಎಂದು ಜೆಡಿಎಸ್‌ಗೆ ಗೊತ್ತಿಲ್ಲವೇ?. ಜೆಡಿಎಸ್ ಆಕಳು ಇದ್ದ ಕಡೆ ಚೆಂಬು ತೆಗೆದುಕೊಂಡು ಹೋಗಿ ಹಾಲು ಕರೆಯುವುದಿಲ್ಲ. ಚೊಂಬು ಇದ್ದ ಕಡೆಯೇ ಆಕಲು ಹೊಡೆದುಕೊಂಡು ಬರುತ್ತಾರೆ' ಎಂದು ಸಾಗರ ಶಾಸಕ ಹರತಾಳು ಹಾಲಪ್ಪ ಟೀಕಿಸಿದ್ದರು.

'ಚುನಾವಣೆ ಘೋಷಣೆಯಾದ ತಕ್ಷಣ ಗೆದ್ದೇ ಬಿಟ್ಟಿದ್ದೇವೆ ಎಂದು ಬೀಗುವ ಬಿಜೆಪಿ ಮುಖಂಡರು ಮತದಾರರಿಗೂ ಪ್ರಜ್ಞೆ ಇದೆ ಎಂಬುದನ್ನು ಮರೆಯಬಾರದು. 15 ಚುನಾವಣೆ ಎದುರಿಸಿದ್ದೇನೆ. ಎಲ್ಲವೂ ಕೊನೆಯ 2 ದಿನದಲ್ಲಿ ನಿರ್ಧಾರವಾಗುತ್ತದೆ. ಕಾದು ನೋಡಿ' ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

ಕುಮಾರ್ ಬಂಗಾರಪ್ಪ

ಕುಮಾರ್ ಬಂಗಾರಪ್ಪ

'ಮಧು ಬಂಗಾರಪ್ಪ ಅವರಿಗೆ ಕುಮ್ಮಕ್ಕು ಕೊಟ್ಟಿದ್ದು ಕಾಗೋಡು ತಿಮ್ಮಪ್ಪ. ಬಂಗಾರಪ್ಪ ಅವರನ್ನು ಕಾಂಗ್ರೆಸ್ ಬಳಸಿಕೊಂಡಿದೆಯೇ ಹೊರತು ಅವರಿಗೆ ಏನೂ ಮಾಡಲಿಲ್ಲ. ಈಗ ಮಧು ಬಂಗಾರಪ್ಪ ಅವರನ್ನೂ ಅದೇ ಸ್ಥಿತಿಗೆ ತಳ್ಳುತ್ತಿದ್ದಾರೆ' ಎಂದು ಕುಮಾರ್ ಬಂಗಾರಪ್ಪ ಆರೋಪಿಸಿದ್ದರು.

'2004ರಲ್ಲಿ ಬಂಗಾರಪ್ಪ ಅವರು ಬಿಜೆಪಿಗೆ ಬಂದ ಕಾರಣ ಆ ಪಕ್ಷ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಿಸಲು ಸಾಧ್ಯವಾಯಿತು. ನಂತರ ಬಂಗಾರಪ್ಪ ಅವರನ್ನು ಕೆಟ್ಟದಾಗಿ ನಡೆಸಿಕೊಂಡರು. ಆದ್ದರಿಂದ, ಪಕ್ಷ ತೊರೆದರು. ಬಂಗಾರಪ್ಪ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲ' ಎಂದು ಎಚ್.ಡಿ.ದೇವೇಗೌಡರು ತಿರುಗೇಟು ನೀಡಿದ್ದಾರೆ.

English summary
Shivamogga Lok Sabha by election campaign witnessed for war of words between BJP, Congress and JD(S) leaders. Election will be held on November 3, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X