ಕುವೆಂಪು ಹೀಗಿದ್ರಾ? ತೀರ್ಥಹಳ್ಳಿ ಪ್ರತಿಮೆ ಸರಿಯಿಲ್ಲ

By: ದಿವ್ಯಾ
Subscribe to Oneindia Kannada

ಆಂಧ್ರಪ್ರದೇಶದಲ್ಲಿ ಹುಟ್ಟಿ, ಕರ್ನಾಟಕದಲ್ಲಿ ವೃತ್ತಿ ಬದುಕು ಕಂಡುಕೊಂಡಿರುವ ದಿವ್ಯಾ ರೆಡ್ಡಿ ಅವರು ಕನ್ನಡದ ಬಗ್ಗೆ ಅಪಾರ ಅಭಿಮಾನ ಇರಿಸಿಕೊಂಡಿದ್ದಾರೆ. ಇತ್ತೀಚೆಗೆ ಕುಪ್ಪಳ್ಳಿ, ತೀರ್ಥಹಳ್ಳಿಗೆ ಪ್ರವಾಸ ಹೋಗಿದ್ದಾಗ, ತೀರ್ಥಹಳ್ಳಿ ಪಟ್ಟಣದ ಮಧ್ಯ ಭಾಗದಲ್ಲಿರುವ ಸರ್ಕಲ್ ನಲ್ಲಿ ರುವ ಕುವೆಂಪು ಪ್ರತಿಮೆಯನ್ನು ಕಂಡು, ಆಘಾತಕ್ಕೊಳಗಾಗಿದ್ದಾರೆ. ಕುವೆಂಪು ಅವರ ಹೋಲಿಕೆ ಇರದ ಪ್ರತಿಮೆ ಕುರಿತಂತೆ ಜಾಗೃತಿ ಮೂಡಿಸಲು ಈ ಪತ್ರ ಬರೆದಿದ್ದಾರೆ.

ತಮ್ಮ ಸಾಹಿತ್ಯದ ಪ್ರತಿಭೆಯಿಂದ ಜಗತ್ತನ್ನೇ ತನ್ನೆಡೆಗೆ ನೋಡುವಂತೆ ಮಾಡಿದ್ದ ರಾಷ್ಟ್ರಕವಿ ಕುವೆಂಪುರವರಿಂದಾಗಿ ಅವರ ಹುಟ್ಟೂರಾದ ತೀರ್ಥಹಳ್ಳಿಯ ಕುಪ್ಪಳಿಗೂ ಸಾಹಿತ್ಯ ವಲಯದಲ್ಲಿ ವಿಶೇಷ ಸ್ಥಾನ ದೊರಕಿದೆ. ಆದರೆ, ತೀರ್ಥಹಳ್ಳಿಯ ಕೇಂದ್ರ ಭಾಗದಲ್ಲಿ ನಿರ್ಮಿಸಿರುವ ಕುವೆಂಪುರವರ ಕುರೂಪ ಪ್ರತಿಮೆ ರಾಷ್ಟ್ರಕವಿಗೆ ಅವಮಾನ ಮಾಡುವಂತಿದೆ.[ಕನ್ನಡ ಸಾಹಿತಿಗಳ ಅಲಿಯಾಸ್ ಹೆಸರು ಕಾವ್ಯನಾಮಗಳ್]

ವರಕವಿ ಬೇಂದ್ರೆಯವರು ಕುವೆಂಪುರವರನ್ನು "ಯುಗದ ಕವಿ ಜಗದ ಕವಿ" ಎಂದು ಹೊಗಳಿದ್ದಾರೆ. ಮೇರು ವ್ಯಕ್ತಿತ್ವದ ಕುವೆಂಪುರವರ ಪ್ರತಿಮೆಯನ್ನು ಕುಬ್ಜವಾಗಿ ವಿರೂಪವಾಗಿ ಮಾಡಿರುವುದು ನಿರ್ಮಿಸಿದವರ ಕುಬ್ಜ ವ್ಯಕ್ತಿತ್ವವನ್ನು ತೋರಿಸುತ್ತಿದೆ ಎಂದರೆ ತಪ್ಪಾಗಲಾರದು.

Vishwamanava Statue in Thirthahalli an insult to Kuvempu

ಕುಪ್ಪಳಿಗೆ ಬರುವ ಸಾಹಿತ್ಯಾಸಕ್ತರು ತೀರ್ಥಹಳ್ಳಿಯ ಮೂಲಕವೇ ಹಾದು ಹೋಗಬೇಕಾಗಿದ್ದು ಅಲ್ಲಿಗೆ ಬಂದ ಕೂಡಲೇ ಈ ವಿರೂಪ ಪ್ರತಿಮೆ ಕಣ್ಣಿಗೆ ಬೀಳುತ್ತದೆ. ಮುಂದಿನ ಪೀಳಿಗೆಯವರಿಗೆ ಕುವೆಂಪುರವರ ಅಗಾಧ ಪ್ರತಿಭೆಯ ಬಗ್ಗೆ ಅರಿವು ಮತ್ತು ಗೌರವ ಮೂಡಿಸುವುದರ ಹೊರತು ಅವರ ವ್ಯಕ್ತಿತ್ವಕ್ಕೆ ಧಕ್ಕೆ ಬರುವಂತಹ ಪ್ರತಿಮೆ ನಿರ್ಮಿಸಿದ್ದು, ಇದು ಈ ಪೀಳಿಗೆಯ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂದು ಯೋಚಿಸದಿರುವುದು ಇಲ್ಲಿನ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.[ವೈಚಾರಿಕ ದಿನವಾಗಲಿದೆ ಕುವೆಂಪು ಜನ್ಮದಿನಾಚರಣೆ]

ಸ್ಥಳೀಯರು ತಮಗೆ ಕುವೆಂಪುರವರ ಬಗೆಗಿನ ಗೌರವ ಸೂಚಕವಾಗಿ ಅವರ ಪ್ರತಿಮೆ ನಿರ್ಮಿಸಿರುವುದು ಸರಿಯಾದರೂ ಅಂತಹ ಧೀಮಂತ ವ್ಯಕ್ತಿಯ ವ್ಯಕ್ತಿತ್ವಕ್ಕೆ ಕುಂದು ಬರದಂತೆ ಎಚ್ಚರ ವಹಿಸಬೇಕಾಗಿತ್ತು.[ವಿಶ್ವವಿದ್ಯಾಲಯಗಳಲ್ಲೂ ನಾಡಗೀತೆ ಹಾಡುವುದು ಕಡ್ಡಾಯ]

Vishwamanava Statue in Thirthahalli an insult to Kuvempu

ತೇಜಸ್ವಿಯವರು ಬರೆದಿರುವ "ಅಣ್ಣನ ನೆನಪು " ಪುಸ್ತಕದಲ್ಲಿ ಕುವೆಂಪುರವರು ಫೋಟೋಗ್ರಫಿಗೆ ಹೇಳಿ ಮಾಡಿಸಿದ ಮಾಡೆಲಿನ ಹಾಗಿದ್ದರು ಎಂದಿದ್ದಾರೆ. ಹಾಗೂ ಈಗಲೂ ಕುವೆಂಪುಯವರ ಅನೇಕ ಭಾವ ಭಂಗಿಗಳ ಭಾವಚಿತ್ರಗಳು ದೊರೆಯುತ್ತವೆ.[ಕುವೆಂಪು ಹುಟ್ಟೂರಲ್ಲಿ ರೆಸಾರ್ಟ್ ಏಕೆ?]

ಇಷ್ಟೆಲ್ಲದರ ಸಹಾಯವಿದ್ದೂ ಕೂಡಾ ಈ ರೀತಿಯ ಕುರೂಪ ಪ್ರತಿಮೆ ನಿರ್ಮಾಣ ಮಾಡಿ ,ಹಲವಾರು ವರ್ಷಗಳೇ ಕಳೆದಿದ್ದರೂ ಸಂಬಂಧಪಟ್ಟವರು ಯಾರೂ ಗಮನ ಹರಿಸದಿರುವುದು ವಿಷಾದನೀಯ.ಈಗಲಾದರೂ ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸುವುದು ಒಳ್ಳೆಯದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Vishwamanava Kuvempu(K.V Puttappa) statue erected at Thirthahalli is in good structure. This statue face and posture is not similar to the literary giant from this region. The administration is not at all bothered about this and its an insult writes Divya Reddy.
Please Wait while comments are loading...