ನಾಲಗೆಗೆ ಚಪಲ ಹುಟ್ಟಿಸುವ ತೀರ್ಥಹಳ್ಳಿಯ ವಿಘ್ನೇಶ್ ಪಾನಿಪುರಿ

Posted By: ಸುಧನ್ವ, ನೆಂಪೆ
Subscribe to Oneindia Kannada

ಬಿಸ್ಸಿಬಿಸಿ ಮಸಾಲೆ, ಬಟಾಣಿ, ಹುರಿದ ಕಡ್ಲೇಬೀಜ... ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಕೊಪ್ಪ ಸರ್ಕಲ್ ನಲ್ಲಿರುವ ವಿಘ್ನೇಶ್ ಪಾನಿಪುರಿ ಅಂದ ತಕ್ಷಣ ನೆನಪಾಗುತ್ತದೆ. ಮಸಾಲೆ ಪುರಿ, ಪಾನಿಪುರಿ, ಸೇವ್ ಪುರಿ ಹಾಗೂ ಬೇಲ್ ಪುರಿ...ಈ ನಾಲ್ಕನ್ನು ಮಾತ್ರ ಇಲ್ಲಿ ಮಾಡಲಾಗುತ್ತದೆ. ಬೆಲೆ ಇಪ್ಪತ್ತು ರುಪಾಯಿ ಮಾತ್ರ.

ಶಿಡ್ಲಘಟ್ಟ ಮೇಲೂರಿನ ಕಾಮಧೇನು ಸ್ವೀಟ್ಸ್ ಚೌಚೌ ಅಮೆರಿಕದವರೆಗೆ ಫೇಮಸ್

ನಾಗೇಶ್ ಹಾಗೂ ರಾಘವೇಂದ್ರ ಅವರು ದಶಕಕ್ಕೂ ಹೆಚ್ಚು ಕಾಲದಿಂದ ಇಲ್ಲಿ ಚಾಟ್ಸ್ ನಿಂದ ಖ್ಯಾತರಾಗಿದ್ದಾರೆ. ಸೇವ್ ಪುರಿ ಇವರ ಬಳಿ ಬಹಳ ಫೇಮಸ್. ಇಲ್ಲಿನ ಪುರಿಯನ್ನು ಮನೆಯಲ್ಲೇ ಸ್ವತಃ ನಾಗೇಶ್ ಹಾಗೂ ರಾಘವೇಂದ್ರ ತಯಾರಿಸುತ್ತಾರೆ. ಇನ್ನುಳಿದಂತೆ ಮಸಾಲೆ, ಪಾನಿ ಮತ್ಯಾವುದಕ್ಕೆ ಆಗಲಿ ಅಂಗಡಿಯಿಂದ ತಂದ ಪುಡಿಗಳ್ಯಾವುದನ್ನೂ ಬಳಸುವುದಿಲ್ಲ.

Vignesh panipuri- a brand name in Tirthahalli

ಎಲ್ಲವೂ ಮನೆಯಲ್ಲೇ ತಯಾರಾಗುವ ಹಾಗೂ ಕೃತಕವಾದ ಬಣ್ಣ ಬಳಸದ ಪದಾರ್ಥಗಳು. ಮಸಾಲೆ ಪುರಿ ಅಥವಾ ಬೇಲ್ ಪುರಿ ಇನ್ಯಾವುದಕ್ಕೆ ಆಗಲಿ ಹುರಿದ ಕಡ್ಲೇಬೀಜವನ್ನು ಮೇಲಕ್ಕೆ ಹಾಕುವುದು ಇವರ ವಿಶೇಷ. ಬಾಯಿಗೆ ಹುರಿದ ಕಡ್ಲೇಬೀಜ ಸಿಕ್ಕಾಗ ದೊರೆಯುವ ರುಚಿಯ ಮಜವೇ ಬೇರೆ ಎಂಬುದು ಇವರಿಬ್ಬರ ಮಾತು ಹಾಗೂ ಅದು ನಿಜ ಕೂಡ.

ಬಾಯಿ ರುಚಿ ತಣಿಸುವ ವಿಜಯಪುರದ ನಾಣಿ ಹೋಟೆಲ್ ನ ತಿಂಡಿ ಮಜಬೂತು

Vignesh panipuri- a brand name in Tirthahalli

ಸಂಜೆ ಐದು ಗಂಟೆ ಸುಮಾರಿಗೆ ಚಾಟ್ಸ್ ಹಾಕಲು ಶುರು ಮಾಡುತ್ತಾರೆ. ರಾತ್ರಿ ಒಂಬತ್ತು- ಒಂಬತ್ತೂವರೆವರೆಗೆ ಇರುತ್ತಾರೆ. ಕೆಲ ಸಲ ಬೇಗ ಖರ್ಚಾದರೆ ಹೊರಟು ಬಿಡುತ್ತಾರೆ. ಹತ್ತು ದಿನಕ್ಕೋ- ಹದಿನೈದು ದಿನಕ್ಕೋ ಒಮ್ಮೆ ರಜಾ ಮಾಡುತ್ತಾರೆ. ಇಂಥದ್ದೇ ದಿನ ಎಂಬ ನಿಯಮ ಹಾಕಿಕೊಂಡಿಲ್ಲ.

Vignesh panipuri- a brand name in Tirthahalli

ತೀರ್ಥಹಳ್ಳಿ ಬಹಳ ಬೆಳೆದಿದೆ. ಹತ್ತಿರದ ಹಳ್ಳಿಗಳಿಂದಲೂ ಜನರು ಇಲ್ಲಿಗೆ ಚಾಟ್ಸ್ ತಿನ್ನಲು ಬರುತ್ತಾರೆ. ಬೆಲೆಯೂ ತುಂಬ ದುಬಾರಿಯಲ್ಲ. ವಿಘ್ನೇಶ್ ಪಾನಿಪುರಿ ಅನ್ನೋದು ಈ ಊರಿನವರ ಬಾಯಲ್ಲಿ ನಲಿದಾಡುವ ರುಚಿಯ ಬ್ರ್ಯಾಂಡ್. ಒಮ್ಮೆ ಇಲ್ಲಿ ಚಾಟ್ಶ್ ತಿಂದು ನೋಡಿದರೆ ನಿಮಗೆ ಗೊತ್ತಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Vignesh panipuri, a chat centre at Koppa circle, Tirthahalli taluk, Shivamogga district. You can taste unique flavour of masala puri, pani puri, bhel puri and sev puri here. Raghavendra and Nagesh prepare all chats item at home. Reasonable price and tasty chats is identity of Vignesh panipuri.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ