ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ವಚ್ಛ ಭಾರತಕ್ಕೆ ಆದರ್ಶವಾದ ತೀರ್ಥಹಳ್ಳಿಯ ಕುಟುಂಬ

|
Google Oneindia Kannada News

"ದಯವಿಟ್ಟು, ನಿಮ್ಮ ಮೋಜಿಗಾಗಿ ನಮ್ಮ ಸುಂದರ ಊರನ್ನು ಹಾಳು ಮಾಡಬೇಡಿ. ನಿಮ್ಮ ವೀಕೆಂಡ್ ಪಾರ್ಟಿ ಮುಗಿಸಿ ಹೋಗುವಾಗ ಜೊತೆಗೆ ನೀವು ಕುಡಿದು, ತಿಂದು ಖಾಲಿ ಮಾಡಿದ ಬಾಟ್ಲಿ, ಕವರ್, ತಟ್ಟೆ, ಲೋಟಗಳನ್ನು ನಿಮ್ಮ ಜೊತೆಗೆ ತೆಗೆದು ಕೊಂಡು ಹೋಗಿ. ಇದು ನಮ್ಮ ಮನವಿ.

Please... Don't spoil our beautiful place. Clean it before you leave."

ಹೀಗೆಂದು ಫೇಸ್ ಬುಕ್ ನಲ್ಲಿ ಮನವಿ ಮಾಡಿಕೊಂಡವರು ಶಿವಮೊಗ್ಗ ಜಿಲ್ಲೆಯ ಮೇಲಿಕೊಪ್ಪ ಗ್ರಾಮದ ರಶ್ಮಿ ರಾವ್ ಎಂಬ ಗೃಹಿಣಿ.

This Thirthahalli family became an ideal for Swachh Bharat campaign

ಸ್ವಚ್ಛತೆಯ ಬಗ್ಗೆ ಮಾತನಾಡಿದರೆ ಸಾಲದು, ಪ್ರತಿ ಕುಟುಂಬವೂ ಅದನ್ನು ಕಾರ್ಯರೂಪಕ್ಕೆ ತರಬೇಕು. ಆಗಲೇ ಸ್ವಚ್ಛಭಾರತದ ಕಲ್ಪನೆ ಸಾಕಾರವಾಗಲು ಸಾಧ್ಯ ಎಂಬುದನ್ನು ಮನಗಂಡ ರಶ್ಮಿ ರಾವ್ ಅವರ ಕುಟುಂಬ ತೀರ್ಥಹಳ್ಳಿ ರಸ್ತೆಯ ದಟ್ಟಡವಿಯ ಪ್ರವಾಸೀ ತಾಣಗಳಲ್ಲಿ ಸ್ವಚ್ಛತಾ ಕಾರ್ಯ ಆರಂಭಿಸಿದೆ. ಪ್ಲಾಸ್ಟಿಕ್ ಕವರ್ ಗಳು, ಬಾಟಲಿಗಳನ್ನೆಲ್ಲ ಆಯ್ದು ಪರಿಸರವನ್ನು ಶುದ್ಧಗೊಳಿಸುವತ್ತ ದೃಷ್ಟಿಹರಿಸಿದೆ.

ದಾವಣಗೆರೆ: ಐತಿಹಾಸಿಕ ಪುಷ್ಕರಣಿ ಸ್ವಚ್ಛಗೊಳಿಸಿದ ಜಿಪಂ ಸಿಇಒ ಅಶ್ವತಿ ದಾವಣಗೆರೆ: ಐತಿಹಾಸಿಕ ಪುಷ್ಕರಣಿ ಸ್ವಚ್ಛಗೊಳಿಸಿದ ಜಿಪಂ ಸಿಇಒ ಅಶ್ವತಿ

ಶಿವಮೊಗ್ಗ ಜಿಲ್ಲೆಯ ಮೇಲಿನಕೊಪ್ಪ ಗ್ರಾಮದ ಕೃಷಿಕ ಕುಟುಂಬದವರಾದ ರಶ್ಮಿ ರಾವ್ ಮತ್ತು ಸುನಿಲ್ ಕುಮಾರ್ ದಂಪತಿ ಮತ್ತು ಮಕ್ಕಳು, ಸುನಿಲ್ ಕುಮಾರ್ ಅವರ ಸಹೋದರ ಅರುಣ್ ಕುಮಾರ್ ಮತ್ತು ಅವರ ಮಕ್ಕಳು ಸೇರಿ ಗ್ಲೌಸ್ ಧರಿಸಿ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದ್ದಾರೆ.

This Thirthahalli family became an ideal for Swachh Bharat campaign

ಒಂದು ಕುಟುಂಬದಿಂದ ಇಡೀ ಪರಿಸರವನ್ನು ಸ್ವಚ್ಛಗೊಳಿಸಲು ಸಾಧ್ಯವಿಲ್ಲ. ಆದರೆ ಒಂದೊಂದೇ ಕುಟುಂಬವೇ ಹೀಗೆ ಮುಂದೆ ಬಂದು, ತಮ್ಮ ತಮ್ಮ ಊರನ್ನು, ಹಳ್ಳಿಯನ್ನೂ ಸ್ವಚ್ಛಗೊಳಿಸಿಕೊಳ್ಳುವ ಸಂಕಲ್ಪ ಮಾಡಿದರೆ ಸ್ವಚ್ಛ ಭಾರತದ ಪರಿಕಲ್ಪನೆ ಸಾಕಾರವಾಗುವುದೂ ಅಸಾಧ್ಯವಲ್ಲ. ಈ ಕುರಿತು ಸ್ವತಃ ರಶ್ಮಿ ರಾವ್ ಅವರು ತಮ್ಮ ಫೇಸ್ ಬುಕ್ಕಿನಲ್ಲಿ ಬರೆದ ಸಾಲುಗಳನ್ನು ನೀವೇ ಓದಿ.

ಸಾರಿಗೆ ಬಸ್ಸುಗಳಲ್ಲಿ ಕಸದ ಬುಟ್ಟಿ, ಧರ್ಮಸ್ಥಳದಲ್ಲಿ ವಿನೂತನ ಪ್ರಯೋಗ ಸಾರಿಗೆ ಬಸ್ಸುಗಳಲ್ಲಿ ಕಸದ ಬುಟ್ಟಿ, ಧರ್ಮಸ್ಥಳದಲ್ಲಿ ವಿನೂತನ ಪ್ರಯೋಗ

""ನಿಮ್ಮ ಮೋಜಿಗಾಗಿ ನಮ್ಮ ಸುಂದರ ಊರನ್ನು ಹಾಳು ಮಾಡಬೇಡಿ. ನಿಮ್ಮ ವೀಕೆಂಡ್ ಪಾರ್ಟಿ ಮುಗಿಸಿ ಹೋಗುವಾಗ ಜೊತೆಗೆ ನೀವು ಕುಡಿದು, ತಿಂದು ಖಾಲಿ ಮಾಡಿದ ಬಾಟ್ಲಿ, ಕವರ್, ತಟ್ಟೆ, ಲೋಟಗಳನ್ನು ನಿಮ್ಮ ಜೊತೆಗೆ ತೆಗೆದು ಕೊಂಡು ಹೋಗಿ." ಇದು ನಮ್ಮ ಮನವಿ.

Please... Do n't spoil our beautiful place. Clean it before you leave.

ಶಿವಮೊಗ್ಗ -ತೀರ್ಥಹಳ್ಳಿ ರೋಡಲ್ಲಿ ಮಂಡಗದ್ದೆಗಿಂತ ಸುಮಾರು 4 ಕೀಮಿ ಮೊದಲು ಸಿಗುವ 15ನೇ ಮೈಲಿ ಕಲ್ಲು. ಇಲ್ಲಿ ಬಸ್ ಸ್ಟಾಪ್ ಇದ್ದರೂ ನಿಲ್ಲಿಸುವ ಬಸ್ಗಳ ಸಂಖ್ಯೆ ಕಡಿಮೆ. ಆದರೆ ವಿಕೆಂಡ್ನಲ್ಲಿ ಇಲ್ಲಿ ನಿಲ್ಲುವ ಕಾರುಗಳ ಹಾವಳಿ ಮಾತ್ರ ಕೇಳ್ಬೇಡಿ. ಸುಮ್ನೇ ನಿಂತು ಒಂದಷ್ಟು ಸೆಲ್ಫಿ ತಗೊಂಡು, ಕಾಡು ನೋಡಿ ಪರಿಸರನ್ನ ಆಸ್ವಾದಿಸಿ ಹೋದರೆ, ನಮಗೆ ಖಂಡಿತ ಸಂತೋಷ.

This Thirthahalli family became an ideal for Swachh Bharat campaign

ಆದರೆ, ಇವರು ಕುಡಿದು ತಿಂದು ಕಸ ಅಲ್ಲೇ ಎಸೆದು, ಬಾಟ್ಲಿ ಒಡೆದು ಇಡೀ ಪರಿಸರವನ್ನೇ ಗಬ್ಬೇಬ್ಬಿಸಿ ನಾರೋ ಹಾಗೇ ಮಾಡ್ತಿದ್ದಾರೆ. ಜೊತ್ಗೆ ಕ್ರಮ ತೆಗೆದು ಕೊಳ್ಳುವರು ಯಾವುದೇ ಕ್ರಮ ತೆಗೆದು ಕೊಳ್ಳದೇ ಇರೋದು ಸಹ ಅಷ್ಟೇ ಬೇಸರದ ವಿಷಯ.

ಹಾಗಂತ ನಾವು ಸುಮ್ನೆ ಇರೋಕ್ಕೆ ಆಗುತ್ತಾ... ನಿನ್ನೆಸಂಜೆ ನಮ್ ಮನೆ ಮಕ್ಕಳು ಜೊತೆಗೆ ಕ್ಲೀನ್ ಮಾಡೋ ಕೆಲಸ ಶುರು ಮಾಡಿದ್ದೀವಿ. ಸುಮಾರು 2 ಘಂಟೆಗಿಂತ ಹೆಚ್ಚು ಹೊತ್ತು ನಮ್ಗೆ ಕ್ಲೀನ್ ಮಾಡೊಕ್ಕೆ ಆಗಿದ್ದು ಬರೀ ಒಂದು ಫರ್ಲಾಂಗ್ ಮಾತ್ರ. "

English summary
A family in Melinakoppa village, Thirthahalli Taluk, Shivamogga district has come forward to become an ideal for Swachh Bharat camapaign. The family voluntarily started cleaning process in a tourism spot in their village.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X