ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ : ರವಿ ಪೂಜಾರಿ ಬೆದರಿಕೆ ಬಗ್ಗೆ ತನಿಖೆಗೆ ವಿಶೇಷ ತಂಡ

|
Google Oneindia Kannada News

ಶಿವಮೊಗ್ಗ, ನವೆಂಬರ್ 24 : ತೀರ್ಥಹಳ್ಳಿಯ ಚಿನ್ನ, ಬೆಳ್ಳಿ ಉದ್ಯಮಿಯೊಬ್ಬರಿಗೆ ಭೂಗತ ಪಾತಕಿ ರವಿ ಪೂಜಾರಿ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ರಚನೆ ಮಾಡಲಾಗಿದೆ.

ಉದ್ಯಮಿ ಮೊದಲು ಭೂಗತ ಪಾತಕಿ ರವಿ ಪೂಜಾರಿ ಕರೆಯನ್ನು ನಿರ್ಲಕ್ಷಿಸಿದ್ದರು. ಪದೇ-ಪದೇ ಕರೆ ಬಂದ ನಂತರ ಶಿವಮೊಗ್ಗ ಎಸ್ಪಿ ಅಭಿನವ್ ಖರೆ ಅವರಿಗೆ ಮಾಹಿತಿ ನೀಡಿದ್ದರು. ಎಸ್ಪಿ ಅವರ ಸಲಹೆಯಂತೆ ದೂರನ್ನು ದಾಖಲು ಮಾಡಿದ್ದಾರೆ.

ಕಾಂಗ್ರೆಸ್ ನಾಯಕ ಎಚ್.ಎಂ.ರೇವಣ್ಣಗೆ ಕೊಲೆ ಬೆದರಿಕೆಕಾಂಗ್ರೆಸ್ ನಾಯಕ ಎಚ್.ಎಂ.ರೇವಣ್ಣಗೆ ಕೊಲೆ ಬೆದರಿಕೆ

Thirthahalli jeweller receives threat calls from Ravi Pujari

ಉದ್ಯಮಿಗೆ ಕರೆ ಮಾಡಿದ ರವಿ ಪೂಜಾರಿ 25 ಕೋಟಿ ಹಣ ನೀಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಉದ್ಯಮಿ ದೂರನ್ನು ಸ್ವೀಕರಿಸಿರುವ ಪೊಲೀಸರು, ಅವರ ಕುಟುಂಬಕ್ಕೆ ಭದ್ರತೆ ಒದಗಿಸಿದ್ದಾರೆ.

ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ರವಿ ಪೂಜಾರಿ ಕರೆಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ರವಿ ಪೂಜಾರಿ ಕರೆ

ಡಿಸಿಬಿಗೆ ತನಿಖೆ ಹಸ್ತಾಂತರ : ರವಿ ಪೂಜಾರಿ ಕರೆ ಮಾಡಿ, ಬೆದರಿಕೆ ಹಾಕಿರುವ ಪ್ರಕರಣದ ತನುಖೆಯನ್ನು ಜಿಲ್ಲಾ ಅಪರಾಧ ಪತ್ತೆ ದಳಕ್ಕೆ ವಹಿಸಲಾಗಿದೆ. ತನಿಖಾ ತಂಡ ದೂರವಾಣಿ ಕರೆಗಳ ಮಾಹಿತಿಯನ್ನು ಸಂಗ್ರಹಣೆ ಮಾಡುತ್ತಿದೆ.

ಭೂಗತ ಪಾತಕಿ ರವಿ ಪೂಜಾರಿ ಹಲವು ಬಾರಿ ರಾಜ್ಯದ ವಿವಿಧ ಉದ್ಯಮಿಗಳಿಗೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಕಳೆದ ವರ್ಷ ಶಿವಮೊಗ್ಗದ ಅಡಿಕೆ ವರ್ತಕರಿಗೂ ಬೆದರಿಕೆ ಕರೆ ಬಂದಿತ್ತು.

English summary
A jeweller from Thirthahalli town reportedly received a threat call from gangster Ravi Pujari demanding Rs 25 crore. The district crime branch staff are investigating. ಶಿವಮೊಗ್ಗ : ರವಿ ಪೂಜಾರಿ ಬೆದರಿಕೆ ಬಗ್ಗೆ ತನಿಖೆಗೆ ವಿಶೇಷ ತಂಡ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X