ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಚಕ್ರವರ್ತಿ ಸೂಲಿಬೆಲೆಯಿಂದ ಕೋಮು ಪ್ರಚೋದನೆ'

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜನವರಿ 08: ಕೋಮು ಭಾವನೆ ಕೆರಳಿಸುವಂತಹ ಬರವಣಿಗೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದನ್ನು ಚಕ್ರವರ್ತಿ ಸೂಲಿಬೆಲೆ ಕೈಬಿಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದರು.

ಶಿವಮೊಗ್ಗದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ರಾಜಕೀಯ ಪಕ್ಷ ಹಾಗೂ ಸಂಘಟನೆಗಳು ಶವದ ಮೇಲೆ ರಾಜಕೀಯ ಮಾಡುವುದನ್ನ ಬಿಟ್ಟಾಗ ಶಾಂತಿ ಕಾಪಾಡಬಹುದು ಎಂದರು.

ಮಗನನ್ನು ಕಳೆದುಕೊಂಡ ತಾಯಂದಿರು ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಿ ಎಂದು ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ ಎಂದರು.

ಇದು ಕೋಮು ಭಾವನೆ ಕೆರಳಿಸುವ ವಿಷಯವಾಗಿದೆ. ಈ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವುದನ್ನು ಕೈಬಿಡಬೇಕು ಎಂದರು.

ಜೆಡಿಎಸ್ ಪರ ವಾಲಿದರೆ ಸೂಲಿಬೆಲೆ?: ಸಂದರ್ಶನದಲ್ಲಿದೆ ಉತ್ತರಜೆಡಿಎಸ್ ಪರ ವಾಲಿದರೆ ಸೂಲಿಬೆಲೆ?: ಸಂದರ್ಶನದಲ್ಲಿದೆ ಉತ್ತರ

ಕರಾವಳಿಯಲ್ಲಿ ಬುಗಿಲೆದ್ದಿರುವ ಕೋಮು ದಳ್ಳುರಿ ಶಮನಗೊಳ್ಳಲು ಶವದ ಮೇಲೆ ರಾಜಕೀಯ ಮಾಡುವುದನ್ನ ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳು ಬಿಡಬೇಕು ಎಂದರು.

Sulibele provoking people: Siddaramaiah

ಕರಾವಳಿ ಹೊತ್ತಿ ಉರಿಯಲು ಆರ್.ಎಸ್.ಎಸ್. ಬಜರಂಗದಳ ಹಾಗೂ ಬಿಜೆಪಿ ಹಿಂದೂ ಗಳು ಸತ್ತರು ಎಂದು ಪ್ರತಿಭಟನೆ ನಡೆಸುತ್ತಾರೆ. ಆದರೆ ಕೋಮು ದಳ್ಳುರಿಗೆ ನಿನ್ನೆ ಮುಸ್ಲೀಂ ಯುವಕನೋರ್ವ ಸಾವನ್ನಪ್ಪಿದ್ದಾನೆ. ಇವರ ಸಾವಿಗೂ ಬಿಜೆಪಿ ಸ್ಪಂಧಿಸಬೇಕಿತ್ತು. ಆದರೆ ಈಗ ಯಾಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದರು.

ದಕ್ಷಿಣ ಕನ್ನಡ ಕೋಮುವಾದದ ಪ್ರಯೋಗಾಲಯ ಆಗಬಾರದು: ಸಿದ್ದರಾಮಯ್ಯದಕ್ಷಿಣ ಕನ್ನಡ ಕೋಮುವಾದದ ಪ್ರಯೋಗಾಲಯ ಆಗಬಾರದು: ಸಿದ್ದರಾಮಯ್ಯ

ಚುನಾವಣೆ ಕಣಕ್ಕ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯಾಗಿದೆಯಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಕೋರ್ ಕಮಿಟಿ, ಸ್ಟ್ಯಾಂಡಿಂಗ್ ಕಮಿಟಿ ಹಾಗೂ ಸ್ಕ್ರೀನಿಂಗ್ ಕಮಿಟಿಯಲ್ಲಿ ಚರ್ಚೆಯಾಗಿ ನಂತರ ಅಭ್ಯರ್ಥಿಗಳ ಪಟ್ಟಿ ಮಾಡಲಾಗುವುದು ಎಂದರು.

ಚುನಾವಣೆಯ ಕುರಿತು ಎಲ್ಲಾ ಎಲ್ಲಾ ದೃಶ್ಯ ಮಾಧ್ಯಮಗಳು ಈ ಬಾರಿ ಸಮೀಕ್ಷೆ ಪ್ರಕಾರ ಅತಂತ್ರ ವಿಧಾನ ಸಭೆ ಎಂದು ಬಿತ್ತರಿಸುತ್ತಿವೆ. ಆದರೆ ಜನರ ನಾಡಿ ಮಿಡಿತ ಅರಿತಿರುವ ಕಾಂಗ್ರೆಸ್ 'ಕಂಫರ್ಟಬಲ್' ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ ಎಂದು ವಿವರಿಸಿದರು.

English summary
Chief minister Siddaramaiah accused that Chakravarti Sulibele provoking people through social media appealing write letter to him by mothers who have lost their child in communal violence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X