ಭೈರಪ್ಪರಿಂದ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ

Posted By:
Subscribe to Oneindia Kannada

ಶಿವಮೊಗ್ಗ , ಜನವರಿ 29: ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಫೆ. 4 ಮತ್ತು 5 ರಂದು ನಗರದ ಕುವೆಂಪು ರಂಗಮಂದಿರದಲ್ಲಿ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳನವನ್ನು ಹಮ್ಮಿಕೊಂಡಿದೆ. ಸರಸ್ವತಿ ಸಮ್ಮಾನ್ ಪುರಸ್ಕೃತ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.

ಬೆಳಿಗ್ಗೆ 10.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಸರಸ್ವತಿ ಸಮ್ಮಾನ್ ಪುರಸ್ಕೃತ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಸಮ್ಮೇಳನವನ್ನು ಉದ್ಘಾಟಿಸುವರು.

ಮಾಜಿ ಮುಖ್ಯಮಂತ್ರಿ ಹಾಗೂ ಲೋಕಸಭಾ ಸದಸ್ಯ ಬಿ.ಎಸ್. ಯಡಿಯೂರಪ್ಪರವರಿಂದ ಆಶಯ ನುಡಿ. ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್‌ರವರಿಂದ ತುಂಗ ಸ್ಮರಣಸಂಚಿಕೆ ಬಿಡುಗಡೆ. ಸಮ್ಮೇಳನದ ಸರ್ವಾಧ್ಯಕ್ಷ ವಿಶ್ರಾಂತ ಪ್ರಾಧ್ಯಾಪಕ ಡಾ|| ಸಣ್ಣರಾಮ. ಹಿರಿಯ ಸಾಹಿತಿ ನಾ. ಡಿಸೋಜ ಹಾಗೂ ಜಿಲ್ಲೆಯ ವಿವಿಧ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

SL Bhyappa to inaugurate Shivamogga district Sahitya Sammelana

ಅಂದು ಬೆಳಿಗ್ಗೆ 8.00ಕ್ಕೆ ಧ್ವಜಾರೋಹಣ ಹಾಗೂ ಬೆಳಿಗ್ಗೆ 8.30ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ವಿವಿಧ ಜಾನಪದ ಕಲಾತಂಡಗಳೊಂದಿಗೆ ರಾಮಣ್ಣಶೆಟ್ಟಿ ಪಾರ್ಕ್‌ನಿಂದ ವಿವಿಧ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕುವೆಂಪು ರಂಗಮಂದಿರಕ್ಕೆ ಬರಲಾಗುವುದು.

ಮಧ್ಯಾಹ್ನ 1 ರಿಂದ ಭಾಷೆ ಮತ್ತು ಸಾಹಿತ್ಯ, ಚಳುವಳಿ ಮತ್ತು ಸಾಹಿತ್ಯ, ಸರ್ವಾಧ್ಯಕ್ಷರ ಸಾಹಿತ್ಯ/ಚಿಂತನ, ಜಿಲ್ಲೆಯ ನೆಲ-ಜಲ-ಕೃಷಿ, ಕವಿಗೋಷ್ಠಿಗಳನ್ನು ಆಯೋಜಿಸಲಾಗಿದೆ. ಸಂಜೆ 8 ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದೆ.

ಫೆ. 5 ರಂದು ಸಂಜೆ 6ಕ್ಕೆ ಸಮಾರೋಪ ಸಮಾರಂಭವನ್ನು ಹಮ್ಮಿಕೊಂಡಿದ್ದು, ಮಧ್ಯಾಹ್ನ 3.45 ರಿಂದ 5ರವರೆಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿದೆ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಬಿ. ಶಂಕರಪ್ಪ ಅವರ ಅಧ್ಯಕ್ಷತೆಯಲ್ಲಿ ವಿಧಾನ ಪರಿಷತ್ ಸಭಾಪತಿ ಡಿ.ಹೆಚ್. ಶಂಕರಮೂರ್ತಿರವರು ಸನ್ಮಾನಿಸಲಿರುವರು.

ಬೆಳಿಗ್ಗೆ 8.30 ರಿಂದ ಸುಗಮ ಸಂಗೀತ, ಜಾನಪದ ಗೀತೆ ಹಾಗೂ ಭಾವಗೀತೆ ಗಾಯನ, ಕವಿಗೋಷ್ಠಿ, ಜಿಲ್ಲೆಯ ಕೈಗಾರಿಕಾ ಸವಾಲು ಮತ್ತು ಸಮಸ್ಯೆ, ಜಿಲ್ಲೆಯ ಸಾಹಿತ್ಯ: ಹೊಸದನಿಗಳು, ಮಹಿಳಾ ಗೋಷ್ಠಿ ಹಾಗೂ ವಿವಿಧ ಸ್ಪರ್ಧೆಗಳು; ಬಹುಮಾನ ವಿತರಣೆ, ಮಧ್ಯಾಹ್ನ ಸಂಜೆ 8 ರಿಂದ ಗೀತಾ ಗಾಯನ, ಚಂಡಮದ್ದಳೆ, ಚಮ್ಮಾವುಗೆ ನಾಟಕ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Saraswati Sanman awardeee Kannada Novelist SL Bhyrappa to inaugurate Shivamogga district Sahitya Sammelana. District Sammelena scheduled to be held on Feb 4 and 5, 2017
Please Wait while comments are loading...