ಶಿರೀಷಾಗೆ ಕೇಂದ್ರ ಸರಕಾರದ ಅತ್ಯುತ್ತಮ ಅಂಗವಿಕಲ ನೌಕರ ಪ್ರಶಸ್ತಿ

By: ಶಿವಮೊಗ್ಗ ಪ್ರತಿನಿಧಿ
Subscribe to Oneindia Kannada

ಶಿವಮೊಗ್ಗ, ನವೆಂಬರ್ 20: ವಿಶ್ವ ಅಂಗವಿಕಲರ ದಿನಾಚರಣೆಯಂದು ನೀಡುವ ಕೇಂದ್ರ ಸರಕಾರದ ಪ್ರತಿಷ್ಠಿತ "ಅತ್ಯುತ್ತಮ ಅಂಗವಿಕಲ ನೌಕರ" ಪ್ರಶಸ್ತಿಯು ಈ ಬಾರಿ ಕೈ ಹಾಗೂ ಕಾಲುಗಳಲ್ಲಿ ನ್ಯೂನತೆ ಇರುವ ಶಿರೀಶಾ ಅವರಿಗೆ ಒಲಿದಿದೆ.

ಭಿಕ್ಷೆ ಬೇಡಿ ಬಂದ 2 ಲಕ್ಷ ಯಾದವಗಿರಿ ಪ್ರಸನ್ನ ಆಂಜನೇಯನಿಗೆ ದಾನ

ಕಂಪ್ಯೂಟರ್ ಕೆಲಸ ಒಂದನ್ನು ಈಕೆ ಸ್ವಂತ ಮಾಡುತ್ತಾರೆ. ಉಳಿದಂತೆ ಇನ್ನೊಬ್ಬರ ಸಹಾಯದಿಂದಲೇ ದಿನ ದೂಡುತ್ತಿರುವ ಶಿರೀಶಾ, ಆರು ವರ್ಷಗಳ ಹಿಂದೆ ವಿಶ್ವ ಕನ್ನಡಿಗ ನ್ಯೂಸ್ ಇದರ ಸಲಹೆಗಾರ ಕೊಡಕ್ಕಲ್ ಶಿವಪ್ರಸಾದರ ಪ್ರಯತ್ನದ ಫಲವಾಗಿ ದೂರದ ಆಂಧ್ರಪ್ರದೇಶ ರಾಜ್ಯದ ಚಿತ್ತೂರ್ ನಿಂದ ಬೆಂಗಳೂರು ನಗರದ ವಿಂಧ್ಯಾ ಇನ್ಫೋಮಿಡಿಯಾ ಪ್ರೈವೇಟ್ ಲಿಮಿಟೆಡ್ ಎಂಬ ಕಂಪೆನಿಗೆ ಡೇಟಾ ಎಂಟ್ರಿ ಆಪರೇಟರ್ ಆಗಿ ನೇಮಕಗೊಂಡರು.

Sirishaa

ಕಳೆದ 5 ವರ್ಷಗಳಿಂದ ಅಲ್ಲಿ ದುಡಿದಿದ್ದರು. ಪ್ರತಿಯೊಂದಕ್ಕೂ ಇವರಿಗೆ ಕೊಡಕ್ಕಲ್ ಅವರು ಮಾರ್ಗದರ್ಶಕರಾಗಿದ್ದರು. ಪ್ರತಿಷ್ಠಿತ ಕೇಂದ್ರ ಸರಕಾರದ ಪ್ರಶಸ್ತಿ ಪಡೆದಿರುವ ಶಿರೀಶಾ ಅವರಿಗೆ ಅಂಗವಿಕಲರ ಪರವಾಗಿ ಅಭಿನಂದನೆಗಳು ತಿಳಿಸಲ್ಲಾಗಿದೆ. ಅಲ್ಲದೆ ಕೊಡಕ್ಕಲ್ ಶಿವಪ್ರಸಾದರ ನೇತೃತ್ವದಲ್ಲಿರುವ ಭಾರತೀಯ ದಿವ್ಯಾಂಗ ಸಬಲೀಕರಣ ಸಂಸ್ಥೆ ವತಿಯಿಂದ ಶಿರೀಶಾ ಅವರನ್ನು ಸನ್ಮಾನಿಸಲಾಗುವುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sirisa from Chittoor Village of Andrapradesh state, currently working in Bengaluru has been selected for prestigious best handicapped employee award.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ