'ಸರಕಾರದಿಂದ ಬಹಮನಿ ಉತ್ಸವ ನಡೆಸ್ತಿರೋದು ಸಿದ್ದರಾಮಯ್ಯಗೆ ಗೊತ್ತಿಲ್ಲ'

By: ಶಿವಮೊಗ್ಗ ಪ್ರತಿನಿಧಿ
Subscribe to Oneindia Kannada

ಶಿವಮೊಗ್ಗ, ಫೆಬ್ರವರಿ 15: ರಾಜ್ಯ ಸರಕಾರದಿಂದ ಬಹಮನಿ ಉತ್ಸವ ನಡೆಸುತ್ತಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸ್ವತಃ ಗೊತ್ತಿಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರ ಮಧ್ಯೆಯೇ ತಾಳ ಇಲ್ಲ, ತಂತಿ ಇಲ್ಲದಂತಾಗಿದೆ. ಆದ್ದರಿಂದಲೇ ಇಂದಿನ ಪರಿಸ್ಥಿತಿ ಉದ್ಭವಿಸಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಗುರುವಾರ ಇಲ್ಲಿ ವಾಗ್ದಾಳಿ ನಡೆಸಿದರು.

ಬಹಮನಿ ಉತ್ಸವ ನಡೆಸುವುದು ಅಕ್ಷಮ್ಯ ಅಪರಾಧ. ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲರನ್ನು ಸಂಪುಟದಿಂದ ಕೂಡಲೇ ಕಿತ್ತು ಹಾಕಬೇಕು. ಯಾರ್ಯಾರು ಗೋರಿಗಳಲ್ಲಿ ಮಲಗಿದ್ದಾರೆ, ಅವರನ್ನು ಮೇಲೆ ತಂದು ಉತ್ಸವ ಮಾಡಿ. ಮೇಲಿರುವ ಹಿಂದುಗಳನ್ನು ಗೋರಿಗಳಲ್ಲಿ ಹಾಕಿ ಎಂದು ವಾಗ್ದಾಳಿ ನಡೆಸಿದರು.

Siddaramaiah not aware of government sponsor Bahamani utsav: KS Eshwarappa

ಬಹಮನಿ ಉತ್ಸವ ವಿವಾದ : ಮೌನ ಮುರಿದ ಸಿದ್ದರಾಮಯ್ಯ!

ಮಹಮ್ಮದ್ ಬಿನ್ ತುಘಲಕ್ ಗೆ ಇನ್ನೊಂದು ಹೆಸರೇ ಸಿದ್ದರಾಮಯ್ಯ. ಅವರ ಹೆಸರು ಸಿದ್ದ ರಹಮಾನ್‌ ಎಂದು ಈಶ್ವರಪ್ಪ ವ್ಯಂಗ್ಯವಾಡಿದರು. ಅವನೊಬ್ಬ ಕೊಲೆಗಡುಕ ಮುಸ್ಲಿಂ ರಾಜ ಎನ್ನುವ ಕಾರಣಕ್ಕೆ ಉತ್ಸವ ಮಾಡುತ್ತಿದ್ದಾರೆ. ರಾಜ್ಯದ ಜನ ದಂಗೆ ಏಳುವುದಕ್ಕೆ ಮುಂಚೆ ಕಾಂಗ್ರೆಸ್ ಸರಕಾರ ಎಚ್ಚೆತ್ತುಕೊಳ್ಳಬೇಕು ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Siddaramaiah not aware of government sponsor Bahamani utsav, there is no communication between ministers and chief minister, alleges BJP leader KS Eshwarappa on Thursday in Shivamogga.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ