ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಂತಿ ಕದಡುವ ಸಂಘಟನೆಗಳು ಬ್ಯಾನ್ : ಸಿದ್ಧರಾಮಯ್ಯ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಸಾಗರ, ಜನವರಿ 06: ಶಾಂತಿ ಕದಡುವ ಸಂಘಟನೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಲ್ಲದೆ ಅವುಗಳನ್ನ ಬ್ಯಾನ್ ಮಾಡುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಅವರು ಸಾಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕರಾವಳಿ ಪ್ರದೇಶದಲ್ಲಿ ಬಿಜೆಪಿ ಶಾಂತಿ ಕದಡುವ ಕೆಲಸ ಮಾಡುತ್ತಿದೆ. ಆದುದರಿಂದ ಶಾಂತಿ ಕದಡುವ ಸಂಘಟನೆಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.

ಶಿವಮೊಗ್ಗ ಜಿಲ್ಲೆ ಅಭಿವೃದ್ಧಿಗೆ ಸಿದ್ದರಾಮಯ್ಯ ಸರ್ಕಾರದ ಕೊಡುಗೆಗಳುಶಿವಮೊಗ್ಗ ಜಿಲ್ಲೆ ಅಭಿವೃದ್ಧಿಗೆ ಸಿದ್ದರಾಮಯ್ಯ ಸರ್ಕಾರದ ಕೊಡುಗೆಗಳು

ಇಂತಹ ಸಂಘಟನೆಗಳನ್ನ ಬ್ಯಾನ್ ಮಾಡಲಾಗುವುದು ಎಂದು ಎಲ್ಲೂ ಹೇಳಿಲ್ಲ, ಇಂತಹ ಘಟನೆಗಳನ್ನ ಮರುಕಳಿಸಿ ಸರ್ಕಾರದ ಇಮೇಜ್ ಡ್ಯಾಮೇಜ್ ಮಾಡಲು ಬಿಜೆಪಿ ಯತ್ನಿಸುತ್ತಿದೆ. ಇದನ್ನ ಸರ್ಕಾರ ಸಮರ್ಥವಾಗಿ ಎದುರಿಸಲಿದೆ ಎಂದರು.

Siddaramaiah asserts organisations will ban which disturb peace

ಕಾಂಗ್ರೆಸ್ ಪಕ್ಷಕ್ಕೆ ಬರಲು ಹಲವು ಶಾಸಕರು ಸಿದ್ಧರಿದ್ದಾರೆ. ಆದರೆ ಆರ್.ಎಸ್.ಎಸ್. ಐಡಿಯಾಲಜಿ ಹಿನ್ನಲೆ ಇರುವವರನ್ನು ಸೇರಿಸಿಕೊಳ್ಳುವುದಿಲ್ಲ.

ಗೌರಿ ಲಂಕೇಶ್ ಹತ್ಯೆ ಆಗಿ ನಾಲ್ಕು ತಿಂಗಳು ಕಳೆದಿದೆ. ಹಂತಕರ ಹತ್ಯೆ ಕಂಡುಹಿಡಿಯಲು ಸರ್ಕಾರಕ್ಕೆ ಸಾದ್ಯವಾಗಿಲ್ಲ. ಹಾಗಾದರೆ ಇದು ಸರ್ಕಾರದ ವೈಪಲ್ಯವೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಗೌರಿಹಂತಕರ ಸುಳಿವು ಸಿಕ್ಕಿದೆ. ಪೂರ್ಣ ಸಾಕ್ಷಿಗಳು ದೊರೆತ ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ವಿರೋಧ ಪಕ್ಷದಿಂದ ಕಾಂಗ್ರೆಸ್ ಗೆ ವಲಸೆ ಬರುವವರಿದ್ದಾರೆ. ಅವರನ್ನ ಕಾಂಗ್ರೆಸ್ ಸ್ವಾಗತಿಸಲಿದೆಯೇ ಎಂದು ಕೇಳಿದ ಪ್ರಶ್ನೆಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಆರ್.ಎಸ್.ಎಸ್. ಐಡಿಯಾಲಾಜಿ ಇರುವವರನ್ನ ಕಾಂಗ್ರೆಸ್ ಗೆ ಸೇರಿಸಿಕೊಳ್ಳಲಾಗುವುದಿಲ್ಲ ಎಂದು ವಿವರಿಸಿದರು.

Siddaramaiah asserts organisations will ban which disturb peace

ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆದು ರಾಜಕಾರಣ ನಡೆಸುವ ಶಕ್ತಿಗಳನ್ನು ಜನರು ತಿರಸ್ಕರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು. ನಮ್ಮ ಸರ್ಕಾರ ಬಸವಣ್ಣ ಅವರ ಕಾಯಕದಲ್ಲಿ ವಿಶ್ವಾಸವಿರಿಸಿದ್ದು, ಅದೇ ಪ್ರಕಾರ ಕಾರ್ಯನಿರ್ವಹಿಸುತ್ತಿದೆ.

ಪ್ರತಿಯೊಬ್ಬರಿಗೂ ಆಹಾರ ಭದ್ರತೆ ಒದಗಿಸಬೇಕಾದುದು ಸರ್ಕಾರದ ಜವಾಬ್ದಾರಿ. ಇದನ್ನು ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಮೂಲಕ ಸಮಪರ್ಕವಾಗಿ ಅನುಷ್ಟಾನಗೊಳಿಸಲಾಗಿದೆ. ಅನ್ನಭಾಗ್ಯ ಕಾರ್ಯಕ್ರಮದಿಂದಾಗಿ ಯಾರೂ ಹಸಿವಿನಿಂದ ಸಾಯುವ ಪರಿಸ್ಥಿತಿ ಉಂಟಾಗಿಲ್ಲ ಹಾಗೂ ಬರಗಾಲದ ವರ್ಷಗಳಲ್ಲೂ ಯಾರೂ ಗುಳೆ ಹೋಗುವ ಪರಿಸ್ಥಿತಿ ಉಂಟಾಗಿಲ್ಲ. ಉಚಿತವಾಗಿ ಅಕ್ಕಿ ನೀಡುವ ಯೋಜನೆಯನ್ನು ಬೇರೆ ಯಾವ ರಾಜ್ಯದಲ್ಲೂ ಅನುಷ್ಟಾನಗೊಳಿಸಲಾಗಿಲ್ಲ ಎಂದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶದ ಕೊಟ್ಟಿರುವ ಸಂವಿಧಾನದ ಬಗ್ಗೆ ಗೌರವವಿಲ್ಲದವರು ಸಾಮಾಜಿಕ ಜೀವನದಲ್ಲಿ ಇರಲು ನಾಲಾಯಕ್ಕು. ಈ ಮಣ್ಣಿನ ಸಂಸ್ಕೃತಿ, ಇತಿಹಾಸದ ಬಗ್ಗೆ ಯಾರೂ ಪಾಠ ಹೇಳುವ ಅಗತ್ಯವಿಲ್ಲ. ಎಲ್ಲಾ ಮಹನೀಯರಿಗೆ, ಸಂತ ಶರಣರ ಜಯಂತಿಯನ್ನು ನಮ್ಮ ಸರ್ಕಾರ ಆಯೋಜಿಸುತ್ತಿದೆ ಎಂದರು.

English summary
Chief minister Siddaramaiah asserted that the state government is not hesitant to ban the organizations which would disturb the land and order in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X