ನಾಳೆಯಿಂದ ಮೂರು ದಿನ ಶ್ರೀಧರ ಸ್ವಾಮಿಗಳ ಆರಾಧನೆ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಸಾಗರ, ಏಪ್ರಿಲ್ 10: ಸಮರ್ಥ ರಾಮದಾಸರ ಶಿಷ್ಯರೂ, ಮರಾಠಿ-ಕನ್ನಡ ಸಂತರೂ ಆದ ಶ್ರೀ ಶ್ರೀಧರ ಸ್ವಾಮಿಗಳ ಆರಾಧನಾ ಮಹೋತ್ಸವ ಏಪ್ರಿಲ್ 11 ರಿಂದ 13 ರ ವರೆಗೆ ಸಾಗರ ತಾಲೂಕಿನ ವರದಳ್ಳಿಯ ಶ್ರೀಧರಾಶ್ರಮದಲ್ಲಿ ನಡೆಯಲಿದೆ.

ಸನಾತನ ವೈದಿಕ ಧರ್ಮದ ಪ್ರಸಾರಕ್ಕಾಗಿ ಅವತಾರವೆತ್ತಿದ ಶ್ರೀಧರ ಸ್ವಾಮಿಗಳ 44 ನೇ ಆರಾಧನಾ ಮಹೋತ್ಸವದಲ್ಲಿ, ಏಪ್ರಿಲ್ 11 ರಂದು ಗಣಪತಿ ಪೂಜೆ, ಪುಣ್ಯಾಹ, ಪಂಚಗವ್ಯ ಪ್ರಾಯಶ್ಚಿತ್ತಪೂರ್ವಕ ಋತ್ವಿಗ್ವರಣ, ಶ್ರೀಧರ ಚರಿತಾಮೃತ ಗಮಕ ವಾಚನ ಮುಂತಾದ ಕಾರ್ಯಕ್ರಮಗಳ ಜೊತೆ ಸಂಜೆ ಪಲ್ಲಕ್ಕಿ ಉತ್ಸವವೂ ಜರುಗಲಿದೆ.

Shridhara Swami Aradhana Mahotsav from tomorrow

ಏಪ್ರಿಲ್ 13 ರಂದು ಶ್ರೀಗಳ ಸದ್ಗುರು ಸಮಾಧಿಗೆ ಶತರುದ್ರಾಭಿಷೇಕ, ಶ್ರೀಧರ ಸ್ವಾಮಿಗಳ ಆರಾಧನಾ ಮಹೋತ್ಸವ, ಹಿಂದೂಸ್ತಾನಿ ಗಾಯನ, ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ನಡೆಯಲಿದೆ.

ಆರಾಧನಾ ಮಹೋತ್ಸವಕ್ಕೆ ಸಾವಿರಾರು ಭಕ್ತರು ಆಗಮಿಸಲಿದ್ದು, ಶ್ರೀಗಳ ಕೃಪೆಗೆ ಪಾತ್ರರಾಗಲಿದ್ದಾರೆ ಎಂದು ಶ್ರೀಧರ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಕಾನ್ಲೆ ಶ್ರೀಧರ ರಾವ್ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hindu saint and a great seer Shri Shridhara Swami's Aradhana Mahotsava will be held for 3 days in Varadalli a religious place in Sagar Taluk, Shivamogga District.
Please Wait while comments are loading...