ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ: ಗಣೇಶ ವಿಸರ್ಜನೆ ವೇಳೆ 12 ಜನ ನೀರುಪಾಲು

By Madhusoodhan
|
Google Oneindia Kannada News

ಶಿವಮೊಗ್ಗ, ಸೆಪ್ಟೆಂಬರ್ 07 : ಶಿವಮೊಗ್ಗ ಸಮೀಪದ ಹಾಡೋಹಳ್ಳಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಅವಘಡ ಸಂಭವಿಸಿದ್ದು 12 ಕ್ಕೂ ಅಧಿಕ ಮಂದಿ ಯುವಕರು ತುಂಗಭದ್ರಾ ನದಿ ಪಾಲಾಗಿದ್ದಾರೆ.

ಶಿವಮೊಗ್ಗ ಸಮೀಪದ ಹಾಡೋಹಳ್ಳಿಯಲ್ಲಿ ಬುಧವಾರ ಮಧ್ಯಾಹ್ನ ದುರ್ಘಟನೆ ಸಂಭವಿಸಿದೆ. ಗಣೇಶ ಮೂರ್ತಿ ವಿಸರ್ಜನೆಗೆ ನದಿ ಮಧ್ಯಕ್ಕೆ ಯುವಕರ ತಂಡ ತೆರಳಿದ್ದ ವೇಳೆ ತೆಪ್ಪ ಮಗುಚಿ ಅವಘಡ ಸಂಭವಿಸಿದೆ.[ಅಡಿಕೆ ಪಾಲಿಗೆ ಕೊಳೆ ರೋಗಕ್ಕೆ ಮಳೆ ಜೊತೆಯಾಗಿದೆ]

shivamogga

ಒಟ್ಟು 25 ಜನ ಯುವಕರ ತಂಡ ಗಣೇಶ ವಿಸರ್ಜನೆಗೆ ತೆರಳಿತ್ತು. ನದಿ ಮಧ್ಯದಲ್ಲಿ ಮೂರ್ತಿ ವಿಸರ್ಜನೆ ಮಾಡುತ್ತಿದ್ದಾಗ ತೆಪ್ಪ ಮಗುಚಿದೆ. ನಾಲ್ವರು ಯುವಕರು ಈಜಿ ದಡ ಸೇರಿದ್ದಾರೆ. ಆದರೆ ಉಳಿದವರು ನೀರಿನಲ್ಲಿ ಮುಳುಗಿ ಕೊನೆ ಉಸಿರು ಎಳೆದಿದ್ದಾರೆ. ಒಂದೇ ಕುಟುಂಬದ ಆರು ಜನ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಾರೆ.[ಗಣೇಶ ವಿಸರ್ಜನೆಗೆ ಬಂದು ನೊಂದ ಹಿರಿಯ ನಾಗರಿಕ]

ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು ಸದ್ಯ ಒಂದು ಶವ ಮಾತ್ರ ಸಿಕ್ಕಿದೆ. ಉಳಿದ ಶವಗಳಿಗೆ ಹುಡುಕಾಟ ಮುಂದುವರಿದಿದ್ದು ಅಗ್ನಿ ಶಾಮಕ ದಳ ಮತ್ತು ಪೊಲೀಶ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ಕೈಗೊಂಡಿವೆ.

English summary
Shivamogga: Shivamogga witnessed a tragic incident on Wednesday 07 September. Several youths died in the time of Ganesh immersion at Tunga Bhadra River, Near Hadohalli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X