ಶಿವಮೊಗ್ಗ: ಕಿಸ್ ಆಫ್ ಲವ್ ಅಭಿಯಾನಕ್ಕೆ ಪೊಲೀಸರಿಂದ ಬ್ರೇಕ್

Posted By:
Subscribe to Oneindia Kannada

ಶಿವಮೊಗ್ಗ, ಜ. 31: ಪ್ರೇಮಿಗಳ ದಿನ (ಫೆಬ್ರವರಿ 14) ದಂದು ಕಿಸ್ ಆಫ್ ಲವ್ ಆಯೋಜಿಸಲು ಮುಂದಾಗಿದ್ದ ವಿದ್ಯಾರ್ಥಿ ಸಂಘಟನೆಗಳಿಗೆ ಮುಖಭಂಗವಾಗಿದೆ. ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳದ ತೀವ್ರ ವಿರೋಧಕ್ಕೆ ಮಣಿದ ಜಿಲ್ಲಾ ಪೊಲೀಸರು 'ಕಿಸ್ ಆಫ್ ಲವ್' ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದಾರೆ.

ಶಿವಮೊಗ್ಗ ನಗರದ ಗೋಪಿ ವೃತ್ತದಲ್ಲಿ ಸಂಜೆ 6 ರಿಂದ ರಾತ್ರಿ 11ರವರೆಗೆ ಕಿಸ್ ಆಫ್ ಲವ್ ಕಾರ್ಯಕ್ರಮ ಆಯೋಜಿಸುತ್ತಿದ್ದು, ಇದರಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ರಕ್ಷಣೆ ನೀಡಬೇಕು ಎಂದು ಎಸ್ಪಿ ರವಿ ಡಿ.ಚೆನ್ನಣ್ಣನವರ್ ಮತ್ತು ತಹಶೀಲ್ದಾರ್ ಅವರಿಗೆ ವಿದ್ಯಾರ್ಥಿ ಸಂಘಟನೆಗಳ ಅಧ್ಯಕ್ಷ ವಿನಯ್ ಕೆ.ಸಿ ಮನವಿ ಸಲ್ಲಿಸಿದ್ದರು. [ಕಿಸ್ ಆಫ್ ಲವ್ : ವಿದ್ಯಾರ್ಥಿಗಳು ಏನಂತಾರೆ?]

Shivamogga Police decline permission to conduct Kiss of Love Campaign

ಈಗ ಕಾರ್ಯಕ್ರಮಕ್ಕೆ ಪೊಲೀಸ್ ಅನುಮತಿ ನಿರಾಕರಿಸಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ ವಿನಯ್ ಅವರು, ಅಂದಿನ ಕಾರ್ಯಕ್ರಮ ರದ್ದಾದರೂ ಚಿಂತೆ ಇಲ್ಲ, ಫೆಬ್ರವರಿ ತಿಂಗಳಲ್ಲಿ ಯಾವುದಾದರೂ ಒಂದು ದಿನವನ್ನು ಆಯ್ಕೆ ಮಾಡಿ ಕಿಸ್ ಆಫ್ ಲವ್ ಆಚರಿಸಲಾಗುವುದು.

ಆದರೆ, ಈ ಬಾರಿ ರಾಷ್ಟ್ರಕ್ಕಾಗಿ ಹೋರಾಡಿದ ಧೀಮಂತರ ಭಾವಚಿತ್ರ, ಅಂಧರು, ಮಕ್ಕಳು, ವೃದ್ಧರನ್ನು ಚುಂಬಿಸುವ ಮೂಲಕ ಕಿಸ್ ಆಫ್ ಲವ್ ಆಚರಿಸಲಾಗುವುದು ಎಂದು ವಿನಯ್ ಕೆಸಿ ರಾಜಾವತ್ ಪ್ರತಿಕ್ರಿಯಿಸಿದ್ದಾರೆ.

ಪೊಲೀಸರ ಕ್ರಮವನ್ನು ವಿಶ್ವ ಹಿಂದೂ ಪರಿಷತ್ ನ ಶಿವಮೊಗ್ಗ ಜಿಲ್ಲಾಧ್ಯಕ್ಷ ರಮೇಶ್ ಬಾಬು ಜಾಧವ್ ಹಾಗೂ ಭಜರಂಗ ದಳದ ಸಂಚಾಲಕ ಮಾಲತೇಶ್ ಅವರು ಸ್ವಾಗತಿಸಿದ್ದಾರೆ.

2014ರ ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಕಿಸ್ ಆಫ್ ಲವ್ ಆಯೋಜಿಸಲು ಪೊಲೀಸರ ಅನುಮತಿ ಕೇಳಲಾಗಿತ್ತು. ಆದರೆ, ಪೊಲೀಸರು ಅನುಮತಿ ನೀಡಲು ನಿರಾಕರಿಸಿದ್ದರು. ಕಿಸ್‌ ಆಫ್‌ ಲವ್‌ಗೆ ಅನುಮತಿ ನೀಡದಂತೆ ಹಿಂದೂ ಸಂಘಟನೆಗಳು ಪೊಲೀಸರನ್ನು ಒತ್ತಾಯಿಸಿದ್ದವು. ಕೇರಳದಲ್ಲಿ ಕಿಸ್ ಆಫ್ ಲವ್ ಅಭಿಯಾನದ ರೂವಾರಿಗಳಾದ ರಾಹುಲ್ ಪಶುಪಾಲನ್ ಮತ್ತು ಆತನ ಪತ್ನಿ ರೇಶ್ಮಿ ನಾಯರ್ ಕೆಲವು ದಿನಗಳ ಹಿಂದೆ ವೇಶ್ಯಾವಾಟಿಕೆ ಜಾಲದಲ್ಲಿ ಸಿಕ್ಕಿಬಿದ್ದ ಕತೆ ಎಲ್ಲರಿಗೂ ಗೊತ್ತಿರಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Shivamogga Police decline permission to conduct Kiss of Love Campaign.Earlier Vishwa Hindu Parishad (VHP) and Bajrang Dal urged the Karnataka police to not to permit Kiss of Love campaign in BJP stronghold Shivamogga on February 14.
Please Wait while comments are loading...