ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ : ಮಾಜಿ ಸಂಸದ ಬಿವೈ ರಾಘವೇಂದ್ರ ಆಸ್ತಿ ದ್ವಿಗುಣವಾಗಿದೆ!

|
Google Oneindia Kannada News

Recommended Video

ಬಿ ಎಸ್ ಯಡಿಯೂರಪ್ಪ ಮಗ ಬಿ ವೈ ರಾಘವೇಂದ್ರರವರ ಆಸ್ತಿ ವಿವರ ಘೋಷಣೆ

ಶಿವಮೊಗ್ಗ, ಅಕ್ಟೋಬರ್ 16: ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ, ಶಿಕಾರಿಪುರದ ಶಾಸಕ ಯಡಿಯೂರಪ್ಪನವರ ರಾಜೀನಾಮೆಯಿಂದ ತೆರವಾಗಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ನವೆಂಬರ್ 3 ರಂದು ಉಪ ಚುನಾವಣೆ ನಡೆಯುತ್ತಿದೆ. ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಯಡಿಯೂರಪ್ಪನವರ ಪುತ್ರ ಬಿ.ವೈ. ರಾಘವೇಂದ್ರ ಸ್ಪರ್ಧಿಸುತ್ತಿದ್ದಾರೆ. ನಾಮಪತ್ರದ ಜತೆ ಸಲ್ಲಿಸಿರುವ ಆಸ್ತಿ, ಸಾಲ ವಿವರಗಳು ಇಲ್ಲಿವೆ.

ಮೈಸೂರು ದಸರಾ - ವಿಶೇಷ ಪುರವಣಿ

ಶಿವಮೊಗ್ಗ ಜಿಲ್ಲೆಯಲ್ಲಿ ಎಂಟು ವಿಧಾನಸಭಾ ಕ್ಷೇತ್ರ, ಮೂರು ನಗರಸಭೆ, ಆರು ಪಟ್ಟಣ ಪಂಚಾಯಿತಿ, ಒಂದು ಪುರಸಭೆ, 260ಕ್ಕೂ ಅಧಿಕ ಗ್ರಾಮ ಪಂಚಾಯಿತಿಗಳಲ್ಲಿ ಬಹುತೇಕ ಬಿಜೆಪಿ ತನ್ನ ಪ್ರಾಬಲ್ಯ ಹೊಂದಿದೆ. ಹೀಗಾಗಿ, ಪ್ರಜ್ಞಾವಂತರ ನಾಡಿನಲ್ಲಿ ಮತ್ತೊಮ್ಮೆ ಕಮಲ ಅರಳುವ ಲಕ್ಷಣಗಳಿವೆ.

ರಾಮನಗರ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ 100 ಕೋಟಿ ರೂ. ಆಸ್ತಿ ಒಡತಿರಾಮನಗರ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ 100 ಕೋಟಿ ರೂ. ಆಸ್ತಿ ಒಡತಿ

ಬಿ.ವೈ. ರಾಘವೇಂದ್ರ 67 ಕೋಟಿ ರೂಪಾಯಿ ಆಸ್ತಿಯ ಒಡೆಯರಾಗಿದ್ದಾರೆ. 2009ರಲ್ಲಿ ಮೊದಲಿಗೆ ಸ್ಪರ್ಧಿಸಿದ್ದಾಗ ಅವರ ಆಸ್ತಿ ಮೌಲ್ಯ 6 ಕೋಟಿ ರು ನಷ್ಟಿತ್ತು. ಇನ್ನಷ್ಟು ವಿವರ ಮುಂದಿದೆ.

ಬಿ.ವೈ. ರಾಘವೇಂದ್ರ 67 ಕೋಟಿ ರೂಪಾಯಿ ಆಸ್ತಿ

ಬಿ.ವೈ. ರಾಘವೇಂದ್ರ 67 ಕೋಟಿ ರೂಪಾಯಿ ಆಸ್ತಿ

2009 ರಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗ ರಾಘವೇಂದ್ರ ಅವರ ಆಸ್ತಿ ಮೌಲ್ಯ 6 ಕೋಟಿ ರೂಪಾಯಿ. 2014 ರಲ್ಲಿ ಬಿ.ವೈ. ರಾಘವೇಂದ್ರ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸ್ಪರ್ಧಿಸಿದ್ದು, ಈ ಸಂದರ್ಭದಲ್ಲಿ ಅವರ ಬಳಿ 30 ಕೋಟಿ ರೂಪಾಯಿ ಆಸ್ತಿ ಇತ್ತು. ಇದಾದ ನಾಲ್ಕು ವರ್ಷಗಳಲ್ಲಿ ಅವರ ಆಸ್ತಿ ದ್ವಿಗುಣಗೊಂಡಿದ್ದು, ರಾಘವೇಂದ್ರ ಅವರ ಪತ್ನಿ ತೇಜಸ್ವಿನಿ 9 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ

ಚರಾಸ್ತಿ ಅಂಕಿ ಅಂಶ

ಚರಾಸ್ತಿ ಅಂಕಿ ಅಂಶ

* ರಾಘವೇಂದ್ರ ಅವರು ಶಿಕಾರಿಪುರದ ಕೆನರಾ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್, ಡಿಸಿಸಿ ಬ್ಯಾಂಕ್, ಅಂಚೆ ಕಚೇರಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಶಿವಮೊಗ್ಗದ ಸಿಂಡಿಕೇಟ್ ಬ್ಯಾಂಕ್, ತೆಹ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್, ಬೆಂಗಳೂರಿನ ಕಾರ್ಪೊರೇಷನ್ ಬ್ಯಾಂಕ್ ಗಳಲ್ಲಿ ಉಳಿತಾಯ ಖಾತೆಗಳನ್ನು ಹೊಂದಿದ್ದಾರೆ.
* ಇವರ ಪತ್ನಿ ಬೆಂಗಳೂರಿನ ಕಾರ್ಪೊರೇಷನ್ ಬ್ಯಾಂಕ್, ಶಿವಮೊಗ್ಗದ ಸಿಂಡಿಕೇಟ್ ಬ್ಯಾಂಕ್ ಗಳಲ್ಲಿ ಖಾತೆಗಳನ್ನು ಹೊಂದಿದ್ದಾರೆ.

ಬಿ ವೈ ರಾಘವೇಂದ್ರ ಹೆಸರಿನಲ್ಲಿ ನಗದು 1,12,82,896 ರು
ಪತ್ನಿ ತೇಜಸ್ವಿನಿ ರಾಘವೇಂದ್ರ ಬಳಿ 29,51,064 ರು
ಒಟ್ಟು ಬ್ಯಾಂಕ್ ಠೇವಣಿ 51,549,999 ರು

ಶಿವಮೊಗ್ಗ ಉಪ ಚುನಾವಣೆ : ಮೂವರು ಮಾಜಿ ಸಿಎಂ ಪುತ್ರರು ಕಣದಲ್ಲಿ!ಶಿವಮೊಗ್ಗ ಉಪ ಚುನಾವಣೆ : ಮೂವರು ಮಾಜಿ ಸಿಎಂ ಪುತ್ರರು ಕಣದಲ್ಲಿ!

ಚರಾಸ್ತಿ, ಆಭರಣ, ವಾಹನ, ಸಾಲ, ಇತ್ಯಾದಿ

ಚರಾಸ್ತಿ, ಆಭರಣ, ವಾಹನ, ಸಾಲ, ಇತ್ಯಾದಿ

* ಧವಳಗಿರಿ ಪ್ರಾಪರ್ಟಿಸ್ ಡೆವಲಪರ್ಸ್ ಪ್ರೈ ಲಿಮಿಟೆಡ್, ಸಹ್ಯಾದ್ರಿ ಹೆಲ್ತ್ ಕೇರ್, ಫ್ಲೂಯಿಡ್ ಪವರ್ ಟೆಕ್ನಾಲಜೀಸ್, ಭಗತ್ ಮೋಟರ್ಸ್, ಭದ್ರಾ ಕಾಂಕ್ರೀಟ್, ಮೈತ್ರಿ ಹಾಸ್ಟೆಲ್, ಆದಿತ್ಯಾ ಕಾಂಕ್ರೀಟ್, ಭಗತ್ ಹೋಮ್ಸ್, ಇಂದಿವಾರ್ ಕುಟೀರ್ ಮೇಲೆ ಕೋಟ್ಯಂತರ ರು ಬ್ಯಾಂಡ್, ಷೇರುಗಳು
* ಎನ್ ಎಸ್ಎಸ್, ಅಂಚೆ ಕಚೇರಿ, ಎಲ್ ಐ ಸಿ ವಿಮೆ ಮೊತ್ತ ಸುಮಾರು 20 ಲಕ್ಷ
* ಸಾಲ : ವೈಯಕ್ತಿಕ ಹಾಗೂ ಸಂಸ್ಥೆ ಮೇಲಿನ ಸಾಲ ಸುಮಾರು 20 ಕೋಟಿ ರು
* ವಾಹನ: ಅಂಬಾಸಡರ್, ಸ್ಕೋಡಾ, ಫರ್ಗುಸನ್ ಟ್ರ್ಯಾಕ್ಟರ್, ಸುಜುಕಿ ದ್ವಿಚಕ್ರವಾಹನ, ಹೀರೋ ಹೋಂಡಾಸ್ಪೆಂಡರ್- ಎಲ್ಲದರ ಬೆಲೆ ಸುಮಾರು 7 ಲಕ್ಷ
* ಚಿನ್ನಾಭರಣ, ವಜ್ರ, ಬೆಳ್ಳಿ ಸೇರಿದಂತೆ 50 ಲಕ್ಷ ಮೌಲ್ಯ

ಸ್ಥಿರಾಸ್ತಿ ಮೌಲ್ಯ

ಸ್ಥಿರಾಸ್ತಿ ಮೌಲ್ಯ

ರಾಘವೇಂದ್ರ ಅವರ ಸ್ಥಿರಾಸ್ತಿ ಮೌಲ್ಯ: 22,81,14,014 ರು
ತೇಜಸ್ವಿನಿ ರಾಘವೇಂದ್ರ : 4,04,54,498 ರು

* ಶಿಕಾರಿಪುರ ತಾಲೂಕು ಚನ್ನಹಳ್ಳಿಯಲ್ಲಿ11.35 ಎಕರೆ ಭೂಮಿ ಸುಮಾರು 55 ಲಕ್ಷ ಮೌಲ್ಯ
* ಬಂಡಿಭೈರನಹಳ್ಳಿ ಶಿಕಾರಿಪುರ ತಾಲೂಕು 6.2 ಎಕರೆ 5 ಲಕ್ಷ ಮೌಲ್ಯ
* ಮಾರೇನಹಳ್ಳಿಯಲ್ಲಿ 4.23 ಎಕರೆ, ಹರಕೆರೆಯಲ್ಲಿ 2.2 ಎಕರೆ, * * ಗಾಡಿಕೊಪ್ಪದಲ್ಲಿ 11456.81 ಚದರ ಅಡಿ ಭೂಮಿ
* ಉರುಗದೂರಿನಲ್ಲಿ 20691 ಚದರ ಅಡಿ ಭೂಮಿ ಹಾಗೂ 1.2 ಎಕರೆ
* ನಂದಿಹಳ್ಳಿ, ತಿಮ್ಮಲಾಪುರ 25 ಎಕರೆ
* ಶಿವಮೊಗ್ಗದ ನಗರದಲ್ಲಿ 2 ಕೋಟಿ ರು ಮೌಲ್ಯದ ವಾಣಿಜ್ಯ ಕಟ್ಟಡ
* ಶಿಕಾರಿಪುರ, ವಿನೋಭಾನಗರ, ಬೆಂಗಳೂರಿನಲ್ಲಿ ಮನೆ 5 ಕೋಟಿ ರು

ಶಿವಮೊಗ್ಗ ಉಪ ಚುನಾವಣೆ : ನಾಮಪತ್ರ ಸಲ್ಲಿಸಿದ ಬಿ.ವೈ.ರಾಘವೇಂದ್ರಶಿವಮೊಗ್ಗ ಉಪ ಚುನಾವಣೆ : ನಾಮಪತ್ರ ಸಲ್ಲಿಸಿದ ಬಿ.ವೈ.ರಾಘವೇಂದ್ರ

ಆರೋಪಗಳು/ ಕ್ರಿಮಿನಲ್ ಕೇಸ್

ಆರೋಪಗಳು/ ಕ್ರಿಮಿನಲ್ ಕೇಸ್

* ಅಂಜನಾಪುರದಲ್ಲಿ ವಿವೇಕಾನಂದ ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಕುಮದ್ವತಿ ಕಾಲೇಜು ಆವರಣದಲ್ಲಿರುವ 25 ಎಕರೆ ಕೆರೆ ಜಮೀನನ್ನು ಯಡಿಯೂರಪ್ಪ ಅವರ ಪುತ್ರರು ತಮ್ಮ ಪ್ರಭಾವ ಬಳಸಿ ಕಬಳಿಸಿದ್ದಾರೆ ಎಂಬ ಆರೋಪ.

*ಬಿ.ವೈ.ರಾಘವೇಂದ್ರ ಅವರು ಶಿವಮೊಗ್ಗದ ಸಂಸದರಾಗಿ ಆಯ್ಕೆಯಾದ ಬಳಿಕ ಅವರ ಆಸ್ತಿಯಲ್ಲಿ ಹೆಚ್ಚಳವಾಗಿದೆ. ಅಕ್ರಮವಾಗಿ ಈ ಆಸ್ತಿಯನ್ನು ಅವರು ಸಂಪಾದನೆ ಮಾಡಿದ್ದಾರೆ ಎಂದು ಆರೋಪಿಸಿ ಶಿವಮೊಗ್ಗದ ವಕೀಲ ಬಿ.ವಿನೋದ್ ಎಂಬವರು ಸಿಬಿಐ ವಿಶೇಷ ಕೋರ್ಟ್‍ನಲ್ಲಿ 2013ರ ನವೆಂಬರ್‌ನಲ್ಲಿ ದೂರು ದಾಖಲಿಸಿದ್ದರು.

* 2010: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರ ಮಗ ಸಂಸದ ಬಿ.ವೈ.ರಾಘವೇಂದ್ರ ರಾತ್ರೋರಾತ್ರಿ ನನ್ನ ಭೂಮಿಯನ್ನು ಕಬಳಿಸಿದ್ದು, ಈ ಜಾಗದಲ್ಲಿ ಅಕ್ರಮ ಸಿಮೆಂಟ್ ಕಂಬಗಳನ್ನು ನಿಲ್ಲಿಸಿ ಹೋಟೆಲ್ ಕಾಂಪ್ಲೆಕ್ಸ್‌ವೊಂದನ್ನು ಕಟ್ಟಲು ಹೊರಟಿದ್ದಾರೆ ಎಂದು ಚನ್ನಪ್ಪಲೇಔಟ್‌ನ ವಾಸಿ ಆಡಿಟರ್ ಹಾಗೂ ಕೃಷಿಕರಾಗಿರುವ ಎಚ್.ಎಚ್.ಮಲ್ಲಿಕಾರ್ಜುನಪ್ಪ ಆರೋಪಿಸಿದ್ದರು. ಶಿವಮೊಗ್ಗ ಸಮೀಪದ ರಾಷ್ಟ್ರೀಯ ಹೆದ್ದಾರಿ 206ರ ಪಕ್ಕದಲ್ಲಿಯೇ 17 ಎಕರೆ 10 ಗುಂಟೆ ಜಮೀನಿದೆ. ಈ ಪೈಕಿ ಸರ್ವೆ ನಂ.3/ಪಿ ಜಮೀನಿಗೆ ಸಂಬಂಧಿಸಿದ ವ್ಯಾಜ್ಯ
* 5 ವಂಚನೆ, 4 ಫೋರ್ಜರಿ ಕೇಸ್ ಗಳು ಇವೆ.
* ಮೇಲ್ಕಂಡ ಎಲ್ಲಾ ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದು, ಲೋಕಾಯುಕ್ತ ಕೋರ್ಟಿನಲ್ಲಿ ಕೆಲ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.

English summary
Shivamogga Lok Sabha By Elections 2018 : BJP candidate BY Raghavendra Assets and liabilities, Raghavendra's assets growth is 10% increased compare with his 2009 declaration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X