ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ ಉಪ ಚುನಾವಣೆ : ಯಾವ ಕ್ಷೇತ್ರದಲ್ಲಿ ಯಾರಿಗೆ ಎಷ್ಟು ಮತ?

|
Google Oneindia Kannada News

Recommended Video

Shimoga By-elections Results 2018 : ಶಿವಮೊಗ್ಗ ಉಪಚುನಾವಣೆ | ಯಾವ ಕ್ಷೇತ್ರದಲ್ಲಿ ಯಾರಿಗೆ ಎಷ್ಟು ಮತ?

ಶಿವಮೊಗ್ಗ, ನವೆಂಬರ್ 07 : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು 52148 ಮತಗಳ ಅಂತರದಿಂದ ಚುನಾವಣೆಯಲ್ಲಿ ಜಯಗಳಿಸಿದ್ದಾರೆ.

ಬಿ.ವೈ.ರಾಘವೇಂದ್ರ ಮತ್ತು ಜೆಡಿಎಸ್-ಕಾಂಗ್ರೆಸ್ ಒಮ್ಮತದ ಅಭ್ಯರ್ಥಿ ಮಧು ಬಂಗಾರಪ್ಪ ನಡುವೆ ಚುನಾವಣೆಯಲ್ಲಿ ಭಾರಿ ಪೈಪೋಟಿ ನಡೆದಿದೆ. ಮಧು ಬಂಗಾರಪ್ಪ ಅವರು 4,91,158 ಮತಗಳನ್ನು ಪಡೆಯುವ ಮೂಲಕ 2ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.

ಶಿವಮೊಗ್ಗದಲ್ಲಿ ಕಾಂಗ್ರೆಸ್‌-ಜೆಡಿಎಸ್ ಸೋಲಿಗೆ 5 ಕಾರಣಗಳು!ಶಿವಮೊಗ್ಗದಲ್ಲಿ ಕಾಂಗ್ರೆಸ್‌-ಜೆಡಿಎಸ್ ಸೋಲಿಗೆ 5 ಕಾರಣಗಳು!

ಬಿ.ಎಸ್.ಯಡಿಯೂರಪ್ಪ, ದಿ.ಎಸ್.ಬಂಗಾರಪ್ಪ, ದಿ.ಜೆ.ಎಚ್.ಪಟೇಲ್ ಮೂವರು ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಚುನಾವಣಾ ಕಣದಲ್ಲಿದ್ದರು. ಜೆಡಿಯು ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಜೆ.ಎಚ್.ಪಟೇಲ್ ಪುತ್ರ ಮಹಿಮಾ ಪಟೇಲ್ 8713 ಮತಗಳನ್ನು ಪಡೆದಿದ್ದಾರೆ.

ಶಿವಮೊಗ್ಗ ಉಪ ಚುನಾವಣೆ : ಫಲಿತಾಂಶ ಅಂತಿಮ, ಯಾರಿಗೆ ಎಷ್ಟು ಮತ?ಶಿವಮೊಗ್ಗ ಉಪ ಚುನಾವಣೆ : ಫಲಿತಾಂಶ ಅಂತಿಮ, ಯಾರಿಗೆ ಎಷ್ಟು ಮತ?

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 46 ಮತಗಳನ್ನು ತಿರಸ್ಕಾರ ಮಾಡಲಾಗಿದೆ. ಉಪ ಚುನಾವಣೆ ಬೇಡವಾಗಿತ್ತು ಎಂಬುದು ಹಲವರ ಅಭಿಪ್ರಾಯವಾಗಿತ್ತು. 10687 ನೋಟಾ ಮತಗಳು ಚಲಾವಣೆಯಾಗಿವೆ. ಯಾವ ಕ್ಷೇತ್ರದಲ್ಲಿ ಯಾರಿಗೆ ಎಷ್ಟು ಮತ?, ಚಿತ್ರಗಳಲ್ಲಿ ನೋಡಿ.....

ಮಧು ಬಂಗಾರಪ್ಪಗೆ ಸಚಿವ ಸ್ಥಾನ, ಇದು ದೇವೇಗೌಡರ ಹೊಸ ತಂತ್ರ!ಮಧು ಬಂಗಾರಪ್ಪಗೆ ಸಚಿವ ಸ್ಥಾನ, ಇದು ದೇವೇಗೌಡರ ಹೊಸ ತಂತ್ರ!

ಬಿ.ವೈ.ರಾಘವೇಂದ್ರ ಮೇಲುಗೈ

ಬಿ.ವೈ.ರಾಘವೇಂದ್ರ ಮೇಲುಗೈ

ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಬಿ.ವೈ.ರಾಘವೇಂದ್ರ ಹೆಚ್ಚಿನ ಮತಗಳನ್ನು ಪಡೆದಿದ್ದಾರೆ.

ಶಿವಮೊಗ್ಗ ಗ್ರಾಮಾಂತರ
* ಬಿ.ವೈ.ರಾಘವೇಂದ್ರ 75181
* ಮಧು ಬಂಗಾರಪ್ಪ 67899

ಶಿವಮೊಗ್ಗ ನಗರ
* ಬಿ.ವೈ.ರಾಘವೇಂದ್ರ 77388
* ಮಧು ಬಂಗಾರಪ್ಪ 51815

ಭದ್ರಾವತಿಯಲ್ಲಿ ಮಧು, ತೀರ್ಥಹಳ್ಳಿಯಲ್ಲಿ ರಾಘವೇಂದ್ರ

ಭದ್ರಾವತಿಯಲ್ಲಿ ಮಧು, ತೀರ್ಥಹಳ್ಳಿಯಲ್ಲಿ ರಾಘವೇಂದ್ರ

ಕಾಂಗ್ರೆಸ್‌ ಶಾಸಕರು ಇರುವ ಭದ್ರಾವತಿ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ಹೆಚ್ಚಿನ ಮತ ಪಡೆದಿದ್ದಾರೆ. ಬಿಜೆಪಿ ಶಾಸಕರು ಇರುವ ತೀರ್ಥಹಳ್ಳಿಯಲ್ಲಿ ಬಿ.ವೈ.ರಾಘವೇಂದ್ರ ಅವರು ಹೆಚ್ಚಿನ ಮತಗಳಿಸಿದ್ದಾರೆ.

ಭದ್ರಾವತಿ
* ಬಿ.ವೈ.ರಾಘವೇಂದ್ರ 51469
* ಮಧು ಬಂಗಾರಪ್ಪ 62415

ತೀರ್ಥಹಳ್ಳಿ
* ಬಿ.ವೈ.ರಾಘವೇಂದ್ರ 65319
* ಮಧು ಬಂಗಾರಪ್ಪ 58105

ಸೊರಬರದಲ್ಲೂ ರಾಘವೇಂದ್ರಗೆ ಹೆಚ್ಚು ಮತಗಳು

ಸೊರಬರದಲ್ಲೂ ರಾಘವೇಂದ್ರಗೆ ಹೆಚ್ಚು ಮತಗಳು

ಯಡಿಯೂರಪ್ಪ ಪ್ರತಿನಿಧಿಸುವ ಶಿಕಾರಿಪುರ ಕ್ಷೇತ್ರದಲ್ಲಿ ಹೆಚ್ಚು ಮತಗಳನ್ನು ಗಳಿಸುವಲ್ಲಿ ಮಧು ಬಂಗಾರಪ್ಪ ಯಶಸ್ವಿಯಾಗಿದ್ದಾರೆ. ಅಂತೆಯೇ ಮಧು ಬಂಗಾರಪ್ಪ ಕ್ಷೇತ್ರ ಸೊರಬದಲ್ಲಿಯೂ ಬಿ.ವೈ.ರಾಘವೇಂದ್ರ ಹೆಚ್ಚು ಮತ ಪಡೆದಿದ್ದಾರೆ.

ಶಿಕಾರಿಪುರ
* ಬಿ.ವೈ.ರಾಘವೇಂದ್ರ 77570
* ಮಧು ಬಂಗಾರಪ್ಪ 58787

ಸೊರಬ ಕ್ಷೇತ್ರ
* ಬಿ.ವೈ.ರಾಘವೇಂದ್ರ 67108
* ಮಧು ಬಂಗಾರಪ್ಪ 68605

ಸಾಗರ ಮತ್ತ ಬೈಂದೂರು ಕ್ಷೇತ್ರ

ಸಾಗರ ಮತ್ತ ಬೈಂದೂರು ಕ್ಷೇತ್ರ

ಸಾಗರ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ಅವರು ಹೆಚ್ಚು ಮತಗಳನ್ನು ಪಡೆದಿದ್ದಾರೆ. ಹಾಗೆಯೇ ಬೈಂದೂರು ಕ್ಷೇತ್ರದಲ್ಲಿ ರಾಘವೇಂದ್ರ ಮಧು ಬಂಗಾರಪ್ಪ ಅವರಿಗಿಂತ ಹೆಚ್ಚು ಮತಗಳನ್ನು ಪಡೆದಿದ್ದಾರೆ.

ಸಾಗರ ಕ್ಷೇತ್ರ
* ಬಿ.ವೈ.ರಾಘವೇಂದ್ರ 60256
* ಮಧು ಬಂಗಾರಪ್ಪ 68993

ಬೈಂದೂರು ಕ್ಷೇತ್ರ
* ಬಿ.ವೈ.ರಾಘವೇಂದ್ರ 68992
* ಮಧು ಬಂಗಾರಪ್ಪ 54522

ಮಹಿಮಾ ಪಟೇಲ್ ಪಡೆದ ಮತಗಳು

ಮಹಿಮಾ ಪಟೇಲ್ ಪಡೆದ ಮತಗಳು

ಜೆಡಿಯು ಅಭ್ಯರ್ಥಿಯಾಗಿ ಉಪ ಚುನಾವಣಾ ಕಣಕ್ಕಿಳಿದಿದ್ದ ಜೆ.ಎಚ್.ಪಟೇಲ್ ಪುತ್ರ ಮಹಿಮಾ ಪಟೇಲ್ 8713 ಮತಗಳನ್ನು ಪಡೆದಿದ್ದಾರೆ.

* ಶಿವಮೊಗ್ಗ ಗ್ರಾಮಾಂತರ 1108
* ಶಿವಮೊಗ್ಗ ನಗರ 734
* ಭದ್ರಾವತಿ 1005
* ತೀರ್ಥಹಳ್ಳಿ1148
* ಶಿಕಾರಿಪುರ 1066
* ಸೊರಬ 968
* ಸಾಗರ 1049
* ಬೈಂದೂರು 1635

ಶಶಿಕುಮಾರ್ ಎಸ್.ಗೌಡ

ಶಶಿಕುಮಾರ್ ಎಸ್.ಗೌಡ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಗೆ ಶಶಿಕುಮಾರ್ ಎಸ್.ಗೌಡ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಚುನಾವಣೆಯಲ್ಲಿ ಅವರು 17189 ಮತಗಳನ್ನು ಪಡೆದಿದ್ದಾರೆ.

* ಶಿವಮೊಗ್ಗ ಗ್ರಾಮಾಂತರ 2473
* ಭದ್ರಾವತಿ 1606
* ಶಿವಮೊಗ್ಗ 940
* ತೀರ್ಥಹಳ್ಳಿ 2476
* ಶಿಕಾರಿಪುರ 2078
* ಸೊರಬ 2305
* ಸಾಗರ 2046
* ಬೈಂದೂರು 3265

English summary
Shivamogga Lok Sabha By election 2018 result. BJP candidate B.Y.Raghavendra won the election. Here is a list of assembly constituency wise vote share for the candidates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X