ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೇಸರಿಮಯ ಶಿವಮೊಗ್ಗದಲ್ಲಿ ದೇಶಭಕ್ತಿ ಘೋಷಣೆಗಳದ್ದೇ ಸದ್ದು

|
Google Oneindia Kannada News

ಶಿವಮೊಗ್ಗ, ಸೆಪ್ಟೆಂಬರ್. 28: ಭಾನುವಾರ ಸಂಪೂರ್ಣ ಶಿವಮೊಗ್ಗ ಕೇಸರಿ ಮಯ. ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಸಂಭ್ರಮ. ಬೆಳಗ್ಗೆ ಆರಂಭವಾದ ಮೆರವಣಿಗೆ ರಾತ್ರಿ 11 ಗಂಟೆ ವರೆಗೂ ನಡೆಯಿತು. ರಾತ್ರಿ 11.30ರ ಸುಮಾರಿಗೆ ಮಹಾಗಣಪತಿಯನ್ನು ತುಂಗಾ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.

ಮೆರವಣಿಗೆಗೆ ಶಾಸಕ ಪ್ರಸನ್ನ ಕುಮಾರ್ ಮೆರವಣಿಗೆಗೆ ಚಾಲನೆ ನೀಡಿದರು. ವಿಧಾನ ಪರಷತ್ ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ, ಆಯನೂರು ಮಂಜುನಾಥ ಸೇರಿದಂತೆ ಮುಖಂಡರು ಪಾಲ್ಗೊಂಡಿದ್ದರು.[ಗಣೇಶ ವಿಸರ್ಜನೆ: ಬೆಂಗಳೂರು ಪೂರ್ವದಲ್ಲಿ ಮದ್ಯ ಮಾರಾಟ ನಿಷೇಧ]

ನಾಗಸ್ವರ, ಡೋಲು, ಡೊಳ್ಳು- ವೀರಗಾಸೆ- ತಮಟೆ ಇನ್ನಿತರ ವಾದ್ಯವೃಂದಗಳಿಂದ ಕೂಡಿದ್ದ ಮೆರವಣಿಗೆಯಲ್ಲಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂಧ ಆಗಮಿಸಿದ್ದವರು ಪಾಲ್ಗೊಂಡಿದ್ದರು. ಮೆರವಣಿಗೆ ಉದ್ದಕ್ಕೂ ದೇಶಭಕ್ತಿಯ ಘೋಷಣೆಗಳನ್ನು ಕೂಗುತ್ತ ಭಕ್ತರು ಸಾಗಿದರು. ಪ್ರತಿ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜನ ಸಾಗರವೇ ಹರಿದು ಬಂದಿತ್ತು. ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಸಂಭ್ರಮದ ಕೆಲ ಫೋಟೋಗಳು ಇಲ್ಲಿವೆ(ಚಿತ್ರಗಳು ಫೇಸ್ ಬುಕ್)

ಗಾಂಧಿ ಬಜಾರ್ ಕೇಸರಿ ಮಯ

ಗಾಂಧಿ ಬಜಾರ್ ಕೇಸರಿ ಮಯ

ಸದಾ ಜನರಿಂದ ತುಂಬಿರುತ್ತಿದ್ದ ಶಿವಮೊಗ್ಗದ ಗಾಂಧೀ ಬಜಾರ್ ಸಂಪೂರ್ಣ ಪೂರ್ಣ ಕೇಸರಿ ಮಯವಾಗಿದ್ದು, ಇಕ್ಕೆಲಗಳಲ್ಲಿ ಭಕ್ತರಿಗೆ ಮಜ್ಜಿಗೆ, ನೀರು, ಮೊಸರನ್ನ, ಪಾನಕ ನೀಡಲಾಗುತ್ತಿತ್ತು.

ಯುವಕರ ನೃತ್ಯ

ಯುವಕರ ನೃತ್ಯ

ವಿವಿಧೆಡೆಯಿಂದ ಆಗಮಿಸಿದ್ದ ಯುವಕರು ತಂಡೋಪತಂಡವಾಗಿ ಬಂದು ಮೆರವಣಿಗೆಯಲ್ಲಿ ನಾನಾ ವಾದ್ಯಗಳ ಸದ್ದಿಗೆ ತಕ್ಕಂತೆ ಮೈಮರೆತು ಕುಣಿಯುತ್ತಿದ್ದರು. ಕೇಸರಿ ಧ್ವಜಗಳನ್ನು ಹಿಡಿದ ಯುವರ ತಂಡದ ನೃತ್ಯಕ್ಕೆ ಅಂತ್ಯವೇ ಇರಲಿಲ್ಲ.

 ಹೊಸ ಬಗೆಯ ಬಂದೋಬಸ್ತ್

ಹೊಸ ಬಗೆಯ ಬಂದೋಬಸ್ತ್

ಈ ಬಾರಿ ಪೊಲೀಸರು ಸಾಮಾನ್ಯ ಉಡುಪಿನಲ್ಲೇ ಪರಿಸ್ಥಿತಿ ನಿತಂತ್ರಣ ಮಾಡಿದ್ದು ವಿಶೇಷ. ಅಲ್ಲದೇ ಯುವಕರೊಂದಿಗೆ ಅರು ಹೆಜ್ಜೆ ಹಾಕುತ್ತ ಮುಂದೆ ಸಾಗುತ್ತಿದ್ದರು. ಯಾವ ಬಗೆಯ ಅಹಿತಕರ ಘಟನೆಗೂ ಆಸ್ಪದ ನೀಡದಂತೆ ಎಸ್ ಪಿ ರವಿ ಚಿನ್ನಣ್ಣನವರ್ ಸಕಲ ಮುಂಜಾಗೃತೆ ತೆಗೆದುಕೊಂಡಿದ್ದರು.

ಜನಸಾಗರ

ಜನಸಾಗರ

ಇಡೀ ಶಿವಮೊಗ್ಗದಲ್ಲಿ ಹಿಂದೂ ಮಹಾ ಸಭಾ ಗಣಪತಿ ವಿಸರ್ಜನೆಯ ಸಂಭ್ರಮ. ನೆಹರು ರಸ್ತೆ, ಗಾಂಧಿಬಝಾರ್, ಬಿಚ್ ರಸ್ತೆ ಎಲ್ಲ ಕಡೆಯೂ ಕಾಣುತ್ತಿದ್ದದ್ದು ಬರಿ ಜನರೇ.

ಶಿವಪ್ಪ ನಾಯಕ ವೃತ್ತ ನೋಡಿ

ಶಿವಪ್ಪ ನಾಯಕ ವೃತ್ತ ನೋಡಿ

ಬಿಎಚ್ ರಸ್ತೆಯ ಶಿವಪ್ಪ ನಾಯಕ ವೃತ್ತಕ್ಕೆ ವಿಶೇಷ ಅಲಂಕಾರ. ಕೇಸರಿ ಬಣ್ಣದಿಂದ ಕೂಡಿದ ನಾಯಕರ ಪತ್ಥಳಿಗೆ ಹೂವಿನ ಅಲಂಕಾರ ಮಾಡಲಾಗಿತ್ತು. ರಂಗೋಲಿ, ಕರ್ಪೂರದ ಆರತಿ ಸಾಮಾನ್ಯವಾಗಿತ್ತು.

ಮೆರವಣಿಗೆಯಲ್ಲಿ ಮಹಾಗಣಪತಿ

ಮೆರವಣಿಗೆಯಲ್ಲಿ ಮಹಾಗಣಪತಿ

ವಿಸರ್ಜನೆಗೆ ಮೆರವಣಿಗೆಯಲ್ಲಿ ಹೊರಟ ಹಿಂದೂಮಹಾಸಭಾ ಗಣಪತಿ. ಗಾಂಧಿಬಜಾರ್, ನೆಹರು ರಸ್ತೆ, ಜೈಲ್ ಸರ್ಕಲ್ ಮಾರ್ಗವಾಗಿ ಸಂಚಾರ ಮಾಡಿತು.

English summary
Shivamogga: On Sunday 27 September the city Shivamogga is completely shine under Saffron color. The historical Hindu Mahasabha Ganapati Visarjan event witnessed by thousands of people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X