ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಗರ ಮಾರಿಕಾಂಬ ಜಾತ್ರೆ ಫೆಬ್ರವರಿ 14 ರಿಂದ ಆರಂಭ

ಸಾಗರ ನಗರದ ಮಧ್ಯದಲ್ಲಿ ನೆಲಸಿರುವ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯು ದೇಶದ ಕಲ್ಯಾಣಾರ್ಥವಾಗಿಯೂ, ಸುಭಿಕ್ಷಾರ್ಥವಾಗಿಯೂ ಸಾಗರದಲ್ಲಿ ಅತೀ ವಿಜೃಂಭಣೆಯಿಂದ, ವೈಭವದಿಂದ ಫೆಬ್ರವರಿ 14 ರಿಂದ ಫೆಬ್ರವರಿ 22ರವರೆಗೆ ನಡೆಯಲಿದೆ.

By Mahesh
|
Google Oneindia Kannada News

ಸಾಗರ, ಫೆಬ್ರವರಿ 03: ನಗರದ ಮಧ್ಯದಲ್ಲಿ ನೆಲಸಿರುವ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯು ದೇಶದ ಕಲ್ಯಾಣಾರ್ಥವಾಗಿಯೂ, ಸುಭಿಕ್ಷಾರ್ಥವಾಗಿಯೂ ಸಾಗರದಲ್ಲಿ ಅತೀ ವಿಜೃಂಭಣೆಯಿಂದ, ವೈಭವದಿಂದ ಫೆಬ್ರವರಿ 14 ರಿಂದ ಫೆಬ್ರವರಿ 22ರವರೆಗೆ ನಡೆಯಲಿದೆ.

ಜಾತಿ, ಮತ, ಬಡವಬಲ್ಲಿದರೆಂಬ ಭೇಧವಿಲ್ಲದೆ ಊರಿಗೆ ಊರೇ ಸಂಭ್ರಮಿಸುವ ಪ್ರತಿ ಮೂರು ವರ್ಷಗಳಿಗೊಮ್ಮೆ ಸಾಗರದಲ್ಲಿ ನಡೆಯುವ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಗೆ ಜನಸಾಗರವೇ ಸೇರಲಿದೆ.

ಮಂಗಳವಾರ ಬೆಳ್ಳಿಗ್ಗೆ 5 ಗಂಟೆಗೆ ಸುಮಾರು 16 ಅಡಿ ಎತ್ತರದ ಶ್ರೀ ಮಾರಿಕಾಂಬಾ ದೇವಿಯನ್ನು ತವರುಮನೆಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.

ಆ ದಿನ ಪೂಜಾ ಕಾರ್ಯಕ್ರಮ ಮತ್ತು ಕುಂಕುಮಾರ್ಚನೆಗಳ ಆನಂತರ ರಾತ್ರಿ 10 ಗಂಟೆಗೆ ಶ್ರೀ ಮಾರಿಕಾಂಬಾ ದೇವಿಯ ವೈಭವದ ರಥೋತ್ಸವವು ಬೀದಿ-ಬೀದಿಗಳಲ್ಲಿ ರಂಜನೀಯ ವಾದ್ಯ, ಡೊಳ್ಳು ಕುಣಿತ, ನಾದಸ್ವರ ಹಾಗೂ ಇನ್ನಿತರ ಮಂಗಳ ವಾದ್ಯಗಳೊಂದಿಗೆ ವಿಜೃಂಭಣೆಯಿಂದ ಸಾಗಿ ದೇವಿಯನ್ನು ಗಂಡನ ಮನೆಯಲ್ಲಿ ಪ್ರತಿಷ್ಠಾಪಿಸಲಾಗುವುದು.
(ಮಾಹಿತಿ ಕೃಪೆ: ನಮ್ಮ ಸಾಗರ.ಇನ್)

ಕಾರ್ಯಕ್ರಮಗಳು

ಕಾರ್ಯಕ್ರಮಗಳು

ಬುಧವಾರದಿಂದ ಬುಧವಾರದವರೆಗೆ ದೇವಿಯ ಕುಂಕುಮಾರ್ಚನೆ, ಉಡಿತುಂಬುವುದು, ಗಾವುಗುರಿ ಕಾರ್ಯಕ್ರಮ ಚಾಟಿ ಸೇವೆ ಇನ್ನಿತರ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ. ಬುಧವಾರ ರಾತ್ರಿ 10 ಗಂಟೆಗೆ ದೇವಿಯ ವಿಸರ್ಜನಾ ಕಾರ್ಯಕ್ರಮವನ್ನು ನಡೆಸುತ್ತಾರೆ. ಸಮಿತಿಯ ವತಿಯಿಂದ ನೆಹರು ಮೈದಾನದಲ್ಲಿ ರಾಜ್ಯಮಟ್ಟದ ಬಯಲು ಜಂಗಿ ಕುಸ್ತಿಗಳು ನಡೆಯುತ್ತವೆ.

ಕೆಳದಿ ನಾಯಕರ ಅಧಿದೇವತೆ

ಕೆಳದಿ ನಾಯಕರ ಅಧಿದೇವತೆ

ಸಾಗರವು ಒಂದು ಐತಿಹಾಸಿಕ ಮಹತ್ವವಿರುವ ನಗರ. ಇಲ್ಲಿನ ಸ್ಥಳ ಪುರಾಣ, ಇತಿಹಾಸಗಳ ಪ್ರಕಾರ ಶಿವಪ್ಪನಾಯಕ ಮೂಲ ಪುರುಷನು ಈ ಊರಿನ ಎಡಬಲದಲ್ಲಿರುವ ಇಕ್ಕೆರಿ, ಕೆಳದಿಯಲ್ಲಿ ರಾಜ್ಯಾಡಳಿತ ಮಾಡಿದ್ದಾರೆ. ಸದಾಶಿವನಾಯಕನು ತನ್ನ ಆಡಳಿತ ಅವಧಿಯಲ್ಲಿ ಸಾಗರದಲ್ಲಿ ಭವ್ಯವಾದ ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ಗಣಪತಿ ಕೆರೆಯನ್ನು ನಿರ್ಮಿಸಿದರು.

ಇಕ್ಕೇರಿ ಸಂಸ್ಥಾನದ ಗಡಿ ದೇವತೆ

ಇಕ್ಕೇರಿ ಸಂಸ್ಥಾನದ ಗಡಿ ದೇವತೆ

ಅನಂತರ ಕೆಳದಿ, ಇಕ್ಕೆರಿ ಸಂಸ್ಥಾನದ ಅರಸರು ತಮ್ಮ ಯುದ್ಧ ಸಾಮಗ್ರಿಗಳನ್ನು ಈ ಊರಿನಲ್ಲಿ ಸಂಗ್ರಹಿಸಿ ಅವುಗಳ ರಕ್ಷಣೆಗಾಗಿ ಈ ದೇವತೆಯ ಪೂಜೆ ನಿರಂತರವಾಗಿ ನಡೆಯಲು ಜಾತ್ರೆ, ಉತ್ಸವಗಳನ್ನು ನಡೆಸಲು ಅವಕಾಶ ಮಾಡಿ ಕೊಟ್ಟರಂತೆ, ಕೆಳದಿ ಇಕ್ಕೇರಿ ಸಂಸ್ಥಾನದ ಗಡಿ ದೇವತೆ ಮತ್ತು ಶಕ್ತಿ ದೇವತೆಯೇ ಈ ಮಾರಿಕಾಂಬಾ ದೇವಿಯೆಂದು ಊರಿನ ಹಿರಿಯರು ಅಭಿಪ್ರಾಯಪಡುತ್ತಾರೆ.

ಮನೋರಂಜನಾ ಕ್ರೀಡೆಗಳು

ಮನೋರಂಜನಾ ಕ್ರೀಡೆಗಳು

ಜಾತ್ರಾ ಸಂದರ್ಭದಲ್ಲಿ ಸುಮಾರು 300ಕ್ಕೂ ಮಿಕ್ಕಿ ವಸ್ತು ಪ್ರದರ್ಶನ ಮಳಿಗೆಗಳನ್ನು ರಚಿಸಲಾಗುತ್ತದೆ. ನಗರಸಭೆಯ ಗಾಂಧಿ ಮೈದಾನದಲ್ಲಿ, ಅಂತರಾಷ್ಟ್ರೀಯ ಖ್ಯಾತಿಯ ವಿವಿಧ ರೀತಿಯ ಅತ್ಯಾಧುನಿಕ ಮನೋರಂಜನಾ ಕ್ರೀಡೆಗಳು ಹಾಗೂ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಕುಸ್ತಿ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ.

ಬುಧವಾರದಿಂದ ಬುಧವಾರದವರೆಗೆ

ಬುಧವಾರದಿಂದ ಬುಧವಾರದವರೆಗೆ

ಬುಧವಾರದಿಂದ ಬುಧವಾರದವರೆಗೆ 8 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ಸುಂದರವಾದ ಶ್ರೀಮಾರಿಕಾಂಬಾ ಕಲಾ ಮಂಟಪದಲ್ಲಿ ನಡೆಯಲಿವೆ. ಅಲ್ಲದೆ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಹಾಗೂ ಅವರನ್ನು ಕರೆಸಿ ಇಲ್ಲಿ ಕಾರ್ಯಕ್ರಮವನ್ನು ನಡೆಸಲು ಅವಕಾಶ ಕೊಟ್ಟು ಅವರ ಪ್ರತಿಭೆಗಳನ್ನು ಹೊರಹೊಮ್ಮಲು ಉತ್ತಮ ಅವಕಾಶವನ್ನು ಕಲ್ಪಿಸಲಾಗಿದೆ.

English summary
Sagara Marikamba Temple Utsav is scheduled from Feb 14 to 22, 2017. The temple was built in the center of the city during the reign of Venkatappa Nayak who ruled over Keladi and Ikkeri kingdom during the 16th century. Marikamba was the family deity of the Nayaka dynasty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X