'ಸಾಗರದಲ್ಲಿ ಬಿಜೆಪಿ ಟಿಕೆಟ್ ನನಗೆ ಕೊಡಿ, ಇಲ್ಲ ಬ್ರಾಹ್ಮಣರ ಸಿಟ್ಟು ಎದುರಿಸಿ'

Posted By: ಶಿವಮೊಗ್ಗ ಪ್ರತಿನಿಧಿ
Subscribe to Oneindia Kannada

ಸಾಗರ (ಶಿವಮೊಗ್ಗ ಜಿಲ್ಲೆ), ಏಪ್ರಿಲ್ 7: ಯಡಿಯೂರಪ್ಪ ಅವರೇ ಬ್ರಾಹ್ಮಣ ಸಮುದಾಯದ ಆಕ್ರೋಶಕ್ಕೆ ಕಾರಣ ಆಗಬೇಡಿ. ಈ ಸಲ ಸಾಗರದಿಂದ ಬ್ರಾಹ್ಮಣ ಸಮುದಾಯದವರಿಗೆ ಟಿಕೆಟ್ ಕೊಡಿ ಎಂದು ಸ್ಪರ್ಧಾಕಾಂಕ್ಷಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ. ಸಾಗರ ತಾಲೂಕಿನ ಕರೂರು ಹೋಬಳಿಯ ಸತ್ಯನಾರಾಯಣ್ ಭಟ್ ಈಗ ಹೊಸದಾಗಿ ಉದಯಿಸಿರುವ ಸಾಗರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಹತ್ತು ವರ್ಷಗಳಿಂದ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದಿದ್ದೇನೆ. ಆದ್ದರಿಂದ ನನಗೆ ಟಿಕೆಟ್ ನೀಡಬೇಕು. ಈ ಸಲ ಬ್ರಾಹ್ಮಣ ಸಮುದಾಯದವರಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಪತ್ರಿಕಾ ಗೋಷ್ಠಿಯಲ್ಲಿ ಮನವಿ ಮಾಡಿದ್ದಾರೆ. ಆ ಮೂಲಕ ಇದೀಗ ಟಿಕೆಟ್ ಹಂಚಿಕೆ ವಿಚಾರವಾಗಿ ಹೊಸ ಪೀಕಲಾಟ ಶುರುವಾಗಿದೆ.

 Sagara constituency BJP ticket should be given to Brahmin community

ಯಾವುದೇ ಕಾರಣಕ್ಕೂ ಗೋಪಾಲಕೃಷ್ಣ ಬೇಳೂರುಗೆ ಬಿಜೆಪಿಯ ಟಿಕೆಟ್ ನೀಡಬಾರದು. ಅವರು ಎರಡು ಬಾರಿ ಶಾಸಕನಾಗಿ ಆಯ್ಕೆಯಾದರೂ ಯಾವುದೇ ಕೆಲಸ ಮಾಡಿಲ್ಲ ಎಂದು ಆರೋಪಿಸಿದ ಸತ್ಯನಾರಾಯಣ ಭಟ್, ಒಂದು ವೇಳೆ ತಮಗೆ ಈ ಬಾರಿ ಟಿಕೆಟ್ ನೀಡದಿದ್ದಲ್ಲಿ ಬ್ರಾಹ್ಮಣ ಸಮುದಾಯದ ಸಿಟ್ಟಿಗೆ ಯಡಿಯೂರಪ್ಪ ಗುರಿ ಆಗುತ್ತಾರೆ ಎಂದು ಕೂಡ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka assembly elections 2018: Sagara constituency BJP ticket should be given to Brahmin community. Otherwise BJP will face community angry, said by Satyanarayan Bhat in a press meet at Sagara.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ